ಬಂದ್‍ಗೆ ಕೈಜೋಡಿಸದಿದ್ರೆ ನಟರ ಮನೆ ಮುಂದೆಯೇ ಪ್ರತಿಭಟನೆ ಮಾಡ್ತೇವೆ – ಕನ್ನಡ ಹೋರಾಟಗಾರರು

ಬೆಂಗಳೂರು: ಕನ್ನಡ ಪರ ಹೋರಾಟಕ್ಕೆ ಕೈಜೋಡಿಸದೇ ಇದ್ದರೆ ನಿಮ್ಮ ಮನೆಗಳ ಮುಂದೆಯೇ ಪ್ರತಿಭಟನೆ ಮಾಡುತ್ತೇವೆ ಎಂದು ಕರುನಾಡ ಸೇನೆ ರಾಜ್ಯಾಧ್ಯಕ್ಷ ಕುಮಾರ್ ಹೇಳಿದ್ದಾರೆ.

ಕರ್ನಾಟಕ ಬಂದ್‍ಗೆ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ನೈತಿಕ ಬೆಂಬಲ ನೀಡಿರುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ತಿರುಗಿ ಬಿದ್ದಿವೆ.

ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಕರುನಾಡ ಸೇನೆ ರಾಜ್ಯಾಧ್ಯಕ್ಷ ಕುಮಾರ್, ಡಿಸೆಂಬರ್ 31ರ ಕರ್ನಾಟಕ ಬಂದ್‍ಗೆ ನಮಗೆ ನೈತಿಕ ಬೆಂಬಲ ಬೇಡ, ಬಾಹ್ಯ ಬೆಂಬಲ ನೀಡಿ. ಕೊರೊನಾ ಬಂದಾಗ ತಿಂಗಳುಗಳ ಗಟ್ಟಲೆ ಎಲ್ಲವನ್ನು ಬಂದ್ ಮಾಡಿದ್ದೀರಾ. ಈಗ ಒಂದು ದಿನ ನಡೆಯುವ ಬಂದ್ ನಿಂದ ಆಗುವ ನಷ್ಟದ ಬಗ್ಗೆ ಮಾತನಾಡುತ್ತಿದ್ದೀರಾ. ಚಿತ್ರರಂಗಕ್ಕಾಗಿ ಬಂದ್ ಮುಂಚಿತವಾಗಿ ಮಾಡಲು ಸಾಧ್ಯವಿಲ್ಲ. ಹೇಳಿಕೆಯಂತೆ ಡಿಸೆಂಬರ್ 31 ಕ್ಕೆ ಬಂದ್ ಮಾಡಲಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಸರಣಿ ಸರಕಳ್ಳತನ – ತಾಯಿ, ಮಗಳು ಬಂಧನ

ಚಿತ್ರರಂಗದವರೇ ಒಂದು ದಿನ ಚಿತ್ರ ಬಿಡುಗಡೆ ಮುಂದೂಡಲಿ. ರಾಜ್ಯ, ಭಾಷೆ ಅಂತ ಬಂದಾಗ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಚಿತ್ರ ನಟರು, ಪದಾಧಿಕಾರಿಗಳು ಕನ್ನಡ ಪರ ಹೋರಾಟಕ್ಕೆ ಕೈಜೋಡಿಸದೇ ಇದ್ದರೆ ನಿಮ್ಮ ಮನೆಗಳ ಮುಂದೆಯೇ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ವಾಹನವನ್ನು ಓವರ್ ಟೇಕ್ ಮಾಡಿದ್ದಕ್ಕೆ ಕೆಎಸ್‌ಆರ್‌ಟಿಸಿ ಚಾಲಕ, ಕಂಡಕ್ಟರ್ ಮೇಲೆ ಹಲ್ಲೆ!

Comments

Leave a Reply

Your email address will not be published. Required fields are marked *