ಈಗ ವೀರಪ್ಪನ್ ಇರುತ್ತಿದ್ರೆ ಅರಣ್ಯ ಮಂತ್ರಿಯಾಗ್ತಿದ್ದ – ಕೈ ಮುಖಂಡ

ಬಾಗಲಕೋಟೆ: ಇಂದು ವೀರಪ್ಪನ್ ಇರುತ್ತಿದ್ದರೆ ಅರಣ್ಯ ಮಂತ್ರಿಯಾಗುತ್ತಿದ್ದ ಎಂದು ಕಾಂಗ್ರೆಸ್ ಮುಖಂಡ ಪ್ರಭುದೇವ್ ಹಗರಟಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ್ರಭುದೇವ್ ಹಗರಟಗಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಬಾಗಲಕೋಟೆ ಜಿಲ್ಲಾ ಸಂಯೋಜಕರಾಗಿದ್ದಾರೆ. ಇದೀಗ ಅವರನ್ನು ಬಿಜೆಪಿಗರನ್ನು ಟೀಕಿಸಲು ಹೋಗಿ ತಾನೇ ಮುಖಭಂಗಕ್ಕೆ ಒಳಗಾಗಿದ್ದಾರೆ.

ತನ್ ಫೇಸ್ ಬುಕ್ ಪ್ರೊಫೈಲ್ ಬದಲಾಯಿಸಿರುವ ಪ್ರಭುದೇವ್, ವೀರಪ್ಪನ್ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಪ್ರಭುದೇವ್ ಫೋಟೋ ಚೇಂಜ್ ಮಾಡುತ್ತಿದ್ದಂತೆಯೇ ಕಾಮೆಂಟ್ಸ್ ಗಳು ಬರಲಾರಂಭಿಸಿದ್ದವು. ಹೀಗೆ ತಮ್ಮ ಫ್ರೆಂಡ್ ಲಿಸ್ಟ್ ನಲ್ಲಿದ್ದ ಒಬ್ಬರು ಏನ್ ಸರ್ ಇದರ ಅರ್ಥ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಭುದೇವ್, ಇಂದು ವಿರುಪ್ಪನ್ ಇರುತ್ತಿದ್ದರೆ ಅರಣ್ಯ ಮಂತ್ರಿಯಾಗಿರೋನು ಎಂದು ಹೇಳಿದ್ದಾರೆ.

ವೀರಪ್ಪನ್ ಬದುಕಿರುತ್ತಿದ್ದರೆ ಇಂದು ಕೇಂದ್ರದಲ್ಲಿ ಮಂತ್ರಿಯಾಗಿರುತ್ತಿದ್ದ ಎಂದು ಹೇಳುವ ಮೂಲಕ ಕೇಂದ್ರ ಬಿಜೆಪಿ ಸಚಿವ ಸಂಪುಟವನ್ನು ಬಗ್ಗೆ ವ್ಯಂಗ್ಯವಾಡಿದ್ದಾರೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಬಿಜೆಪಿಯವರು ಪ್ರಭುದೇವ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಫೇಸ್ ಬುಕ್ ನಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಪ್ರಭುದೇವ್ ವೀರಪ್ಪನ್ ಫೋಟೋ ತೆಗೆದು ಹಾಕಿದ್ದಾರೆ.

Comments

Leave a Reply

Your email address will not be published. Required fields are marked *