ಪಾಕ್ ಪರ ಘೋಷಣೆ ಕೂಗಿದ್ರಲ್ಲಿ ನಾಸೀರ್ ಹುಸೇನ್ ಪಾತ್ರವಿದ್ದರೆ ಪ್ರಮಾಣವಚನ ಸ್ವೀಕಾರಕ್ಕೆ ಬಿಡಬಾರದು: ಸಚಿವ ಕೆ.ಎನ್.ರಾಜಣ್ಣ

ತುಮಕೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ (Pro-Pak Slogan) ಕೂಗಿದ್ರಲ್ಲಿ ನಾಸೀರ್ ಹುಸೇನ್ ಪಾತ್ರ ಇದ್ದರೆ ಅವರನ್ನು ಪ್ರಮಾಣ ವಚನ ಮಾಡದಂತೆ ಬಿಪಿಯವರು ತಡೆಯಬೇಕು ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ (K.N.Rajanna) ಆಗ್ರಹಿಸಿದ್ದಾರೆ.

ತುಮಕೂರಿನಲ್ಲಿ (Tumakuru) ಮಾತನಾಡಿದ ಅವರು, ಪಾಕ್ ಪರ ಘೋಷಣೆ ಕೂಗಿರೋದ್ರಲ್ಲಿ ನಾಸೀರ್ ಹುಸೇನ್ (Naseer Hussain) ಪಾತ್ರ ಸಾಭೀತಾದರೆ ಅವರನ್ನು ರಾಜ್ಯಸಭಾ ಸದಸ್ಯರಾಗಿ ಮಾಡಬಾರದು. ಅಷ್ಟೇ ಅಲ್ಲ ಸಂಸತ್‌ನಲ್ಲಿ ಪ್ರಮಾಣ ವಚನ ಮಾಡದಂತೆ ಬಿಜೆಪಿಯವರು ತಡೆಯಬೇಕು. ಇದು ನನ್ನ ಆಗ್ರಹ ಎಂದಿದ್ದಾರೆ. ಇದನ್ನೂ ಓದಿ: ಸರ್‌, ನಾನು ನೂರಾರು ಕೋಟಿಗೆ ಬಾಳ್ತೀನಿ: ಪಾಕ್‌ ಪರ ಘೋಷಣೆ ಕೂಗಿದ್ದ ನಾಶಿಪುಡಿ ಯಾರು?

ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಜಣ್ಣ, ಸಮಾಜಘಾತುಕ ಕೆಲಸ ಮಾಡುವವರ ವಿರುದ್ಧ ಶೂಟ್‌ಡೌನ್ ಕಾನೂನು ತರಬೇಕು. ಯಾರೇ ಒಬ್ಬರು ಸಮಾಜಘಾತುಕ ಕೆಲಸ ಮಾಡಿದ್ರೆ ಖಂಡಿಸಲೇಬೇಕು ಎಂದು ತಿಳಿಸಿದ್ದಾರೆ.

ದೇಶದ್ರೋಹಿ ಕೆಲಸ ನಾನೇ ಮಾಡಲಿ, ಇನ್ನೊಬ್ಬನೇ ಮಾಡಲಿ, ಬೇರೆ ದೇಶಗಳಲ್ಲಿ ಹೇಗೆ ತಕ್ಷಣ ಶೂಟ್‌ಡೌನ್ ಮಾಡುತ್ತಾರೋ ಇಲ್ಲಿಯೂ ಶೂಟ್‌ಡೌನ್ ಕಾನೂನು ಜಾರಿಯಾಗಬೇಕು ಎಂದು ಬಲವಾಗಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಪರ ಘೋಷಣೆ ಕುರಿತು ಕ್ಲೀನ್‌ ಚಿಟ್‌ ಕೊಟ್ಟ ಪ್ರಿಯಾಂಕ್‌ ಖರ್ಗೆ ಕ್ಷಮೆಯಾಚಿಸ್ಬೇಕು: ಸಿ.ಟಿ ರವಿ ಆಗ್ರಹ