ನನ್ನ ಸೋದರನಿಗೆ ನೋವಾದ್ರೆ, ನನಗೂ ನೋವಾಗುತ್ತೆ- ವಿದ್ವತ್‍ಗೆ ನ್ಯಾಯ ದೊರಕಬೇಕೆಂದು ಒತ್ತಾಯಿಸಿದ ಗುರು ರಾಜ್‍ಕುಮಾರ್

ಬೆಂಗಳೂರು: ಯುಬಿ ಸಿಟಿಯ ರೆಸ್ಟೊರೆಂಟ್‍ನಲ್ಲಿ ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ವಿದ್ವತ್ ಗೆ ನ್ಯಾಯ ಸಿಗಬೇಕೆಂದು ರಾಜ್‍ಕುಮಾರ್ ಮೊಮ್ಮಗ ಗುರು ರಾಜ್‍ಕುಮಾರ್ ಒತ್ತಾಯಿಸಿದ್ದಾರೆ.

ಪ್ರೈಮರಿ ಸ್ಕೂಲ್‍ನಿಂದ ಹಿಡಿದು ಮುಂದೆ ಎಂದೆಂದಿಗೂ…. ನನ್ನ ಸಹೋದರನಿಗೆ ನೋವಾದ್ರೆ ನನಗೆ ನೋವಾಗುತ್ತೆ. ಆತನ ನೋವು ನನ್ನ ನೋವಿದ್ದಂತೆ. ಬೇಗ ಗುಣಮುಖನಾಗು ಸಹೋದರ ವಿದ್ವತ್. ನಿನ್ನೊಂದಿಗೆ ಯಾವಾಗಲೂ ಇರುತ್ತೇನೆ. ವಿದ್ವತ್‍ಗೆ ನ್ಯಾಯ ಸಿಗಬೇಕು ಎಂದು ಗುರು ರಾಜ್‍ಕುಮಾರ್ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ. ಇದರ ಜೊತೆಗೆ ವಿದ್ವತ್ ರೊಂದಿಗಿನ ತಮ್ಮ ಬಾಲ್ಯದ ಫೋಟೋವನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: Exclusive ಹ್ಯಾರಿಸ್ ಮಗನ ಮತ್ತೊಂದು ಕರ್ಮಕಾಂಡ ಬಿಚ್ಚಿಟ್ಟ ಮಹಿಳೆ

ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ನಡೆದ ನಲಪಾದ್ ಹಲ್ಲೆ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿರೋ ವಿದ್ವತ್, ಫರ್ಜಿ ಕೆಫೆಯಲ್ಲಿ ಕಾಲು ಚಾಚಿಕೊಂಡು ಕುಳಿತಿದ್ದಕ್ಕೆ ಕ್ಷಮೆ ಕೋರುವಂತೆ ಹೇಳಿದರು. ತಪ್ಪಿಲ್ಲದ ಕಾರಣಕ್ಕೆ ನಾನು ಆರಂಭದಲ್ಲಿ ನಲಪಾಡ್ ಮಾತು ಕೇಳಲಿಲ್ಲ. ಎಂಎಲ್‍ಎ ಹ್ಯಾರಿಸ್ ಮಗನಿಗೇ ಎದುರು ಮಾತನಾಡುತ್ತೀಯಾ ಎನ್ನುತ್ತಾ ಅಬ್ಬರಿಸಿದ್ರು. ಏಕಾಏಕಿ ಹೊಡೆಯಲು ಶುರು ಮಾಡಿದ್ದರಿಂದ ಸಾರಿ.. ಸಾರಿ.. ಎಂದೆ. ಆದರೆ ಸಾರಿ ಎಂದರೂ ಕೂಡ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದರು. ನಲಪಾಡ್ ಜತೆ ಸುಮಾರು 15 ಸ್ನೇಹಿತರು ಇದ್ದರು. ಅವರಲ್ಲಿ ಆರೇಳು ಮಂದಿ ಬೌನ್ಸರ್‍ಗಳು. ಎಲ್ಲರೂ ಸೇರಿಕೊಂಡು ಮನಸೋ ಇಚ್ಛೆ ಹೊಡೆದರು. ಮೈಮೇಲೆ ಕುರ್ಚಿಗಳನ್ನು ಎಸೆದರು, `ಕ್ಷಮೆ ಕೇಳು’ ಎಂದರು. ಕ್ಷಮೆ ಯಾಚಿಸಿದರೂ ಹೊಡೆದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಲಪಾಡ್ ಬಳಿ ಇವೆ ಪೊಲೀಸರು, ಮಿಲಿಟರಿಯವರು ಬಳಸೋ ಬೋರ್ ಗನ್!

ಹಲ್ಲೆಗೊಳಗಾದ ವಿದ್ವತ್ ಚಿಕಿತ್ಸೆಗಾಗಿ ಮಲ್ಯ ಆಸ್ಪತ್ರೆಗೆ ದಾಖಲಾದ್ರೂ ನಲಪಾದ್ ಗ್ಯಾಂಗ್ ಬಿಟ್ಟಿರಲಿಲ್ಲ. ನರ್ಸ್ ಒಬ್ಬರು ಪ್ರಾಥಮಿಕ ಚಿಕಿತ್ಸೆ ನೀಡುವ ವೇಳೆ ಗ್ಯಾಂಗ್ ಆಸ್ಪತ್ರೆಗೆ ನುಗ್ಗಿತ್ತು. ಎರಡು ಕಾರುಗಳಲ್ಲಿ ಆಸ್ಪತ್ರೆಗೆ ನುಗ್ಗಿದ ರೌಡಿ ನಲಪಾಡ್ ಹಾಗೂ ಸಹಚರರು, ಆಸ್ಪತ್ರೆ ಕೊಠಡಿಯ ಬಾಗಿಲು ಒದ್ದುಕೊಂಡೇ ಒಳನುಗ್ಗಿ ಪುನಃ ವಿದ್ವತ್ ಮೇಲೆ ಹಲ್ಲೆಗೆ ಯತ್ನ ನಡೆಸಿದ್ರು. ಇದನ್ನೂ ಓದಿ: ಶಾಂತಿನಗರದಲ್ಲಿ ರೌಡಿ ನಲಪಾಡ್ ಹೇಳಿದ್ದೇ ಶಾಸನವಂತೆ..!

ರಕ್ಷಣೆಗೆ ಹೋದ ವಿದ್ವತ್ ಸೋದರನ ಮೇಲೂ ನಲಪಾಡ್ ಹಲ್ಲೆ ನಡೆಸಿ, ಕೊರಳಪಟ್ಟಿ ಹರಿದಿದ್ದ. ಈ ವೇಳೆ ಗುರು ರಾಜ್‍ಕುಮಾರ್ ಅವರನ್ನ ನೋಡಿ ನಲಪಾಡ್ ಆಸ್ಪತ್ರೆಯಿಂದ ಹೊರಹೋಗಿದ್ದ. ಗುರು ರಾಜ್‍ಕುಮಾರ್ ಮಲ್ಯ ಆಸ್ಪತ್ರೆಗೆ ಬರದಿದ್ದರೆ, ನನ್ನ ತಮ್ಮನನ್ನು ಕೊಂದುಬಿಡುತ್ತಿದ್ರು ಎಂದು ಸಾತ್ವಿಕ್ ಹೇಳಿದ್ದಾರೆ. ಇದನ್ನೂ ಓದಿ: ವಿದ್ವತ್ ಆರೋಗ್ಯ ವಿಚಾರಿಸಿ ಕಣ್ಣೀರು ಹಾಕಿದ ನಟ ಪುನೀತ್ ರಾಜ್ ಕುಮಾರ್! ವೀಡಿಯೋ ನೋಡಿ 

ಇದನ್ನೂ ಓದಿ: ಸ್ವಲ್ಪ ಮಿಸ್ ಆಗಿದ್ರೆ ರೌಡಿ ನಲಪಾಡ್ ಸೌದಿಗೆ ಪರಾರಿ!

Comments

Leave a Reply

Your email address will not be published. Required fields are marked *