ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ವಿಧಾನಸಭಾ ಕ್ಷೇತ್ರ ಪ್ರವೇಶಿಸಿದ ಜೆಡಿಎಸ್ (JDS) ಪಂಚರತ್ನ ಯಾತ್ರೆ ಶ್ರೀ ಕ್ಷೇತ್ರ ಕೈವಾರದಿಂದ ಅದ್ಧೂರಿಯಾಗಿ ನಡೆಯಿತು.
ರಥಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು, ನಮ್ಮ ಸರ್ಕಾರ (Government) ಅಧಿಕಾರಕ್ಕೆ ಬಂದ್ರೆ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಂಘಗಳ (Stree Shakti Sangha) ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ. ಇದನ್ನೂ ಓದಿ: ಚಿಲುಮೆ ವೋಟರ್ ಐಡಿ ಅಕ್ರಮ ಪ್ರಕರಣ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಆಗಲಿ : ಜೆಡಿಎಸ್ ಒತ್ತಾಯ

ಕೈವಾರ ತಾತಯ್ಯಗೆ ಪೂಜೆ ಸಲ್ಲಿಸಿದ್ದೇವೆ. ಅವರ ಅನುಗ್ರಹದಿಂದ ಈ ಕಾರ್ಯಕ್ರಮ ಯಶಸ್ವಿಯಾಗಲಿದೆ. ಪಂಚರತ್ನ ರಥಯಾತ್ರೆ ಆರಂಭವಾಗಿದೆ. ಇಲ್ಲಿ ಮಳೆ ಬರ್ತಿದೆ, ಮಳೆಯಲ್ಲೂ ನೆನೆಯುತ್ತಾ ಕೇಳುತ್ತಿದ್ದೀರಿ, ನನ್ನ ಉಸಿರು ಇರೋವರೆಗೂ ನಾನು ಮರೆಯಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರೂಪೇಶ್ ಜೊತೆ ಕೊರಗಜ್ಜನ ಸನ್ನಿಧಾನಕ್ಕೆ ಬರುತ್ತೇನೆ ಎಂದ ಸಾನ್ಯ ಅಯ್ಯರ್

ಸ್ವಂತ ಭೂಮಿ ಇಲ್ಲದವರಿಗೆ ಮನೆ ಕಟ್ಟಿಕೊಡೋದು ನಮ್ಮ ಕಾರ್ಯಕ್ರಮ. ಇಂದು ಸ್ತ್ರೀಶಕ್ತಿ ಸಂಘದ ಸಾಲದ ಬಗ್ಗೆ ಮಾತನಾಡುವವರು ಸಂಘಕ್ಕಾಗಿ ಏನು ಮಾಡಿದ್ದಾರೆ? ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ 24 ಗಂಟೆಯಲ್ಲೇ ಸಂಪೂರ್ಣ ಸಾಲ ಮನ್ನಾ ಮಾಡ್ತೀನಿ. ವಿಧವೆಯರು ಹಾಗೂ ಅಂಗವಿಕಲರ ಮಾಸಾಶನ 2,000 ರೂ. ಏರಿಕೆ ಮಾಡ್ತೀನಿ. ಇದರೊಂದಿಗೆ ನದಿ ನೀರು ಕೊಡೋದು ನಮ್ಮ ಗುರಿಯಾಗಿದೆ ಎಂದು ಹಲವು ಮಹತ್ವದ ಘೋಷಣೆಗಳನ್ನ ಸಾರಿದ್ದಾರೆ.
ಚಿಂತಾಮಣಿ ಕ್ಷೇತ್ರದಲ್ಲಿ ಹೊಸ ರಾಜಕೀಯ (Politics) ಅಲೆ ತಂದಿದ್ದೀರಿ. 2023ಕ್ಕೆ ಮತ್ತೆ ಕೃಷ್ಣಾ ರೆಡ್ಡಿ ಅವರನ್ನ ಆಯ್ಕೆಮಾಡಿ ಕಳುಹಿಸಬೇಕು. ವರು ಮಂತ್ರಿಯಾಗಿ ನಿಮ್ಮೆಲ್ಲರ ಕೆಲಸ ಮಾಡುತ್ತಾರೆ ಎಂದು ಆಶ್ವಾಸನೆ ನೀಡಿದ್ದಾರೆ.
ಮುಸ್ಲಿಂ ಬಾಂದವರು ನಮ್ಮ ಕೈ ಹಿಡಿದಿದ್ದೀರಿ: ಚಿಂತಾಮಣಿ ಕ್ಷೇತ್ರದಲ್ಲೂ ಮುಸ್ಲಿಂ ಬಾಂದವರು ನಮ್ಮ ಕೈ ಹಿಡಿದಿದ್ದೀರಿ. ಕೈವಾರ ತಾತಯ್ಯ ಜಾಗದಲ್ಲಿ ನಿಂತಿದ್ದೇವೆ. ಮುಸ್ಲಿಮರು ಎಲ್ಲರೂ ಅಣ್ಣ ತಮ್ಮಂದಿರಂತೆ ಬಾಳಬೇಕು. ನೀವು ಅದನ್ನ ಮಾಡಿ ತೋರಿಸ್ತಿದ್ದೀರಿ, ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಒಂದು ಅವಕಾಶವನ್ನ ಕೊಡಿ 5 ವರ್ಷಗಳ ಕಾಲ ಜೆಡಿಎಸ್ ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ.

Leave a Reply