ಹಿಂದಿ ರಾಷ್ಟ್ರ ಭಾಷೆ ಅಲ್ಲದಿದ್ದರೆ ನೀವೇಕೆ ಹಿಂದಿಗೆ ಡಬ್ ಮಾಡುತ್ತೀರಿ?- ಕಿಚ್ಚ ಸುದೀಪ್‌ಗೆ ಅಜಯ್ ದೇವಗನ್ ಪ್ರಶ್ನೆ

FotoJet

ಹಿಂದಿ ರಾಷ್ಟ್ರ ಭಾಷೆಯಲ್ಲ, ದಕ್ಷಿಣದ ಸಿನಿಮಾಗಳ ತಯಾರಕರು ಪ್ಯಾನ್ ಇಂಡಿಯಾ ಪದವನ್ನು ಬಳಸಬೇಡಿ ಎಂದು ಮೊನ್ನೆಯಷ್ಟೇ ಕಿಚ್ಚ ಸುದೀಪ್ ಮಾತನಾಡಿದ್ದರು. ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲವೆಂದು ಹೇಳುವ ಮೂಲಕ ಕನ್ನಡಪರ ಹೋರಾಟಗಾರರ ಜೊತೆ ನಿಂತುಕೊಂಡಿದ್ದರು. ಅದಕ್ಕೀಗ ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ : ‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ

ನೇರವಾಗಿಯೇ ಕಿಚ್ಚ ಸುದೀಪ್ ಅವರಿಗೆ ಟ್ವಿಟ್ ಮಾಡಿರುವ ಅಜಯ್ ದೇವಗನ್, ‘ನನ್ನ ಸಹೋದರ ಕಿಚ್ಚ ಸುದೀಪ್, ನಿಮ್ಮ ಪ್ರಕಾರ ಹಿಂದಿಯು ರಾಷ್ಟ್ರ ಭಾಷೆ ಅಲ್ಲದಿದ್ದರೆ, ನಿಮ್ಮ ಮಾತೃ ಭಾಷೆಯಲ್ಲೇ ಚಿತ್ರಗಳನ್ನು ಬಿಡುಗಡೆ ಮಾಡಿಕೊಳ್ಳಿ. ಅವುಗಳನ್ನು ಹಿಂದಿಗೆ ಡಬ್ ಮಾಡುತ್ತೀರೇಕೆ? ಹಿಂದಿ ನಮಗೆ ಯಾವಾಗಲೂ ಮಾತೃಭಾಷೆ ಆಗಿರುತ್ತದೆ. ಹಿಂದಿ ಭಾಷೆ ಮತ್ತು ರಾಷ್ಟ್ರ ಭಾಷೆ. ಜನ ಗಣ ಮನ’ ಎಂದು ಹಿಂದಿಯಲ್ಲೇ ಟ್ವಿಟ್ ಮಾಡಿದ್ದಾರೆ ಅಜಯ್. ಇದನ್ನೂ ಓದಿ : ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ

ಇತ್ತೀಚಿನ ದಿನಗಳಲ್ಲಿ ಹಿಂದಿ ಹೇರಿಕೆ ಮತ್ತು ಬಾಲಿವುಡ್ ಸಿನಿಮಾಗಳ ಕುರಿತಾಗಿ ಭಾರೀ ಚರ್ಚೆ ಆಗುತ್ತಿದೆ. ಕೆಜಿಎಫ್ 2, ಆರ್.ಆರ್.ಆರ್ ಮತ್ತು ಪುಷ್ಪಾ ಸಿನಿಮಾಗಳು ಬಾಲಿವುಡ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ನಂತರ ಬಾಲಿವುಡ್ ಮಂದಿಗೆ ನಡುಕ ಶುರುವಾಗಿದೆ. ಹೀಗಾಗಿಯೇ ಅವರು ದಕ್ಷಿಣದ ಸಿನಿಮಾಗಳ ವಿರುದ್ಧ ತೊಡೆತಟ್ಟುತ್ತಿದ್ದಾರೆ.

ಮೊನ್ನೆಯಷ್ಟೇ ನವಾಜುದ್ದೀನ್ ಸಿದ್ದಿಕಿ ಕೂಡ ದಕ್ಷಿಣದ ಸಿನಿಮಾಗಳ ಬಗ್ಗೆ ಮಾತನಾಡಿದ್ದರು. ಈ ಗೆಲುವು ಯಾವಾಗಲೂ ನಿರಂತರವಾಗಿ ಇರುವುದಿಲ್ಲ. ವ್ಯಾಪಾರಿ ಸಿನಿಮಾಗಳಿಗೆ ಆಯುಷ್ಯ ಕಡಿಮೆ. ಒಂದು ಸಿನಿಮಾ ಗೆಲ್ಲಬಹುದು. ಮುಂದಿನ ಸಿನಿಮಾಗಳ ಬಗ್ಗೆಯೂ ಯೋಚಿಸಿ ಎನ್ನುವ ಮೂಲಕ ದಕ್ಷಿಣದ ಸಿನಿಮಾಗಳ ಗೆಲುವು ತಾತ್ಕಾಲಿಕ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು.

Comments

Leave a Reply

Your email address will not be published. Required fields are marked *