ಬೆಂಗಳೂರು: ಗೌರಿ-ಗಣೇಶ ಹಬ್ಬದಂದು ಶಾಲಾ, ಕಾಲೇಜಿನಲ್ಲಿ ಗಣೇಶನ ಮೂರ್ತಿ ಕೂರಿಸಿ ವಿಜೃಂಭಣೆಯಿಂದ ಆಚರಿಸೋದು ಸಾಮಾನ್ಯ. ಆದರೀಗ ಕರ್ನಾಟಕದ ಹಿಜಬ್ ವಿವಾದ ಈಗ ಗಣಪನಿಗೆ ವಿಘ್ನ ತರುವಂತೆ ಕಂಡಿದೆ.
ಶಾಲಾ, ಕಾಲೇಜುಗಳಲ್ಲಿ ಅವಕಾಶ ಇಲ್ಲವೆಂದ ಮೇಲೆ ಗಣಪನಿಗೆ ಯಾಕೆ ಅಂತಾ ಪ್ರಶ್ನಿಸಿದೆ. ಇದರ ವಿರುದ್ಧ ಕೆರಳಿರುವ ಮುಸ್ಲಿಂ ಸಂಘಟನೆಗಳು ಕ್ಯಾಂಪಸ್ ನಲ್ಲಿ ಗಣೇಶೋತ್ಸವ ಆಚರಣೆ ಮಾಡಿದರೆ ನಮಾಜ್‌ಗೂ ಅವಕಾಶ ಕೊಡಿ ಎಂದು ವಾದ ಮುಂದಿಟ್ಟಿವೆ. ಇದನ್ನೂ ಓದಿ: ಕ್ಲಬ್‌ಹೌಸ್‌ನಲ್ಲಿ ಪಾಕಿಸ್ತಾನ ಪರ ಘೋಷಣೆ- ವಿಕೃತಿ ಮೆರೆದ ಕಿಡಿಗೇಡಿಗಳ ವಿರುದ್ಧ FIR

ವಕ್ಫ್ ಬೋರ್ಡ್ ಬೇಡಿಕೆಗಳೇನು?
- ನಮ್ಮ ಧಾರ್ಮಿಕ ಹಬ್ಬಗಳ ಆಚರಣೆಗೂ ಅವಕಾಶ ಮಾಡಿಕೊಡಬೇಕು.
- ಎಲ್ಲಾ ಧರ್ಮದ ಮಕ್ಕಳಿಗೂ ಸಮಾನ ಅವಕಾಶ ಸಿಗಬೇಕು.
- ಗಣೇಶ ಹಬ್ಬದಂತೆ ಈದ್ ಮಿಲಾದ್ ಹಬ್ಬದ ಆಚರಣೆಗೂ ಅವಕಾಶ ಕೊಡಬೇಕು.
- ನಮಾಜ್‌ಗೆ ಪ್ರತ್ಯೇಕ ಕೊಠಡಿ ಮೀಸಲಿಡುವಂತೆ ಮನವಿ.
- ಪ್ರತಿ ಮಕ್ಕಳಿಗೂ ಧರ್ಮದ ಕುರಿತು ಅರಿವು ಮೂಡಿಸಬೇಕು.
- ನೈತಿಕ ಶಿಕ್ಷಣ ಅಡಿ ಧಾರ್ಮಿಕ ಪಾಠ ಮಕ್ಕಳಿಗೆ ನೀಡಬೇಕು.
- ಇಸ್ಲಾಮಿಕ್ ಆಚರಣೆಗೂ ಕೂಡಾ ಅವಕಾಶ ಕೊಡಬೇಕು.
- ಹಿಜಾಬ್ ಗೂ ಅವಕಾಶ ಮಾಡಿಕೊಡಿ. ಇಷ್ಟವಿದ್ದ ಮಕ್ಕಳು ಹಿಜಬ್ ಧರಿಸಲಿ.

Leave a Reply