ಮತ್ತೆ ಅನುಚಿತ ವರ್ತನೆ ತೋರಿದ್ರೆ ದರ್ಶನ್‌ ಬಳ್ಳಾರಿಗೆ ಶಿಫ್ಟ್‌ – ಐಜಿಪಿಗೆ ಅಧಿಕಾರ‌ ಕೊಟ್ಟ ಕೋರ್ಟ್

– ಹಾಸಿಗೆ, ದಿಂಬು ಮ್ಯಾನ್ಯುಯಲ್ ಪ್ರಕಾರ ಕೊಡಿ, ವಾಕಿಂಗ್‌ಗೆ ಅವಕಾಶ ಕೊಡಿ
– ಜೈಲು ಅಧಿಕಾರಿಗಳು ಮಾನವೀಯ ಮೌಲ್ಯ ಕಾಪಾಡಿಕೊಳ್ಳಿ ಎಂದ ಕೋರ್ಟ್‌

ಬೆಂಗಳೂರು: ಕೊಲೆ ಆರೋಪಿ ದರ್ಶನ್‌ (Darshan) ಅನ್ನು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡುವಂತೆ ಪ್ರಾಸಿಕ್ಯೂಷನ್‌ ಸಲ್ಲಿಸಿದ್ದ ಅರ್ಜಿಯನ್ನು 64ನೇ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರಾಕರಿಸಿದೆ. ಮತ್ತೆ ಅನುಚಿತ ವರ್ತನೆ ತೋರೆದ್ರೆ ವರ್ಗಾವಣೆ ಮಾಡೋಕೆ ಐಜಿಪಿಗೆ (IGP) ಅವಕಾಶ ಇದೆ ಎಂದು ಕೋರ್ಟ್‌ ಹೇಳಿದೆ.

ಚಿತ್ರದುರ್ಗದ (chitradurga) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜಾಮೀನು ರದ್ದಾಗಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಸೇರಿ ಇನ್ನಿತರ ಆರೋಪಿಗಳನ್ನ ರಾಜ್ಯದ ಇತರೆ ಕಾರಾಗೃಹಗಳಿಗೆ ವರ್ಗಾವಣೆ ಮಾಡುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿ ಹಾಗೂ ಹೆಚ್ಚುವರಿ ಹಾಸಿಗೆ ಹಾಗೂ ದಿಂಬು ನೀಡುವಂತೆ ದರ್ಶನ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿ ವಿಚಾರಣೆ ಇಂದು ನಗರದ 64ನೇ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು. ಇದನ್ನೂ ಓದಿ: ಬದುಕಲು ಸಾಧ್ಯವಾಗುತ್ತಿಲ್ಲ, ದಯಮಾಡಿ ನನಗೆ ವಿಷ ಕೊಡಿ: ಜಡ್ಜ್‌ ಮುಂದೆ ದರ್ಶನ್‌ ಮನವಿ

ಸದ್ಯಕ್ಕೆ ಬೇರೆಡೆಗೆ ಶಿಫ್ಟ್‌ ಮಾಡೋದಕ್ಕೆ ಸಕಾರಣ ಇಲ್ಲ. ಮತ್ತೆ ಅನುಚಿತ ವರ್ತನೆ ತೋರಿದ್ರೆ ವರ್ಗಾವಣೆ ಮಾಡೋಕೆ ಐಜಿಪಿಗೆ ಅವಕಾಶ ಇದೆ. ಐಜಿಪಿ ಅಧಿಕಾರ ಬಳಸಬಹುದು ಎಂದು ಕೋರ್ಟ್‌ ಹೇಳಿದೆ. ಇದನ್ನೂ ಓದಿ: ಮದ್ದೂರು ಬಂದ್‌ಗೆ ಉತ್ತಮ ರೆಸ್ಪಾನ್ಸ್ – ಪಟ್ಟಣದಾದ್ಯಂತ ಪೊಲೀಸ್ ಸರ್ಪಗಾವಲು, ಎಸ್ಪಿ ರೌಂಡ್ಸ್

ಅಲ್ಲದೇ ಹೆಚ್ಚುವರಿ ಹಾಸಿಗೆ ಹಾಗೂ ದಿಂಬು ಹಾಸಿಗೆ ನೀಡಬೇಕೆಂಬ ದರ್ಶನ್‌ ಅರ್ಜಿಯನ್ನು ಕೋರ್ಟ್‌ ಪುರಸ್ಕರಿಸಿದೆ. ಆದ್ರೆ ಜೈಲಿನ ಮ್ಯಾನ್ಯುಯಲ್ ಪ್ರಕಾರವೇ ನೀಡಲು ಅವಕಾಶ ಕಲ್ಪಿಸಿದೆ. ಜೈಲಿನ ಮ್ಯಾನ್ಯುವಲ್‌ ಪ್ರಕಾರವೇ 1 ಲೋಟ, 1 ತಟ್ಟೆ, ಬೆಡ್‌ಶೀಟ್‌, ದಿಂಬು 5 ಜೊತೆ ಬಟ್ಟೆ ನೀಡಲು ಅವಕಾಶ ನೀಡಿದೆ. ಜೊತೆಗೆ ವಾಕಿಂಗ್‌ಗೆ ಅವಕಾಶ ಮಾಡಿಕೊಡಿ, ಜೈಲು ಅಧಿಕಾರಿಗಳು ಮಾನವೀಯ ಮೌಲ್ಯ ಕಾಪಾಡಿಕೊಳ್ಳಿ ಎಂದು ಕೋರ್ಟ್‌ ಹೇಳಿದೆ. ಇದನ್ನೂ ಓದಿ: ಬಿಡದಿಯ ಕೇತಗಾನಹಳ್ಳಿ‌ ಬಳಿ ಸರ್ಕಾರಿ ಜಮೀನು ಒತ್ತುವರಿ ಆರೋಪ – ಹೆಚ್‌ಡಿಕೆಗೆ ಹೈಕೋರ್ಟ್ ಶಾಕ್