BJP ಅಧಿಕಾರಕ್ಕೆ ಬಂದ್ರೆ ಮದರಸಾಗಳು ಸಂಪೂರ್ಣ ಬಂದ್ – ಇದು ಮೋದಿ ಹಿಂದೂಸ್ತಾನ್ ಎಂದ ಯತ್ನಾಳ್

ಬೆಳಗಾವಿ: ಈ ಬಾರಿ ಬಿಜೆಪಿ (BJP) ಅಧಿಕಾರಕ್ಕೆ ಬಂದ್ರೆ ರಾಜ್ಯದಲ್ಲಿ ಮದರಸಾಗಳನ್ನ (Madrasas) ಸಂಪೂರ್ಣ ಬಂದ್ ಮಾಡುತ್ತೇವೆ. ಏಕೆಂದರೆ ಇದು ಹೊಸ ಹಿಂದೂಸ್ತಾನ್, ಮೋದಿ ಹಿಂದೂಸ್ತಾನ್ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಗುಡುಗಿದ್ದಾರೆ.

ಬೆಳಗಾವಿಯಲ್ಲಿ (Belagavi) ಶಿವಚರಿತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ವೀರರಾಣಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಾಡಿ ಮಲ್ಲಮ್ಮ, ಡಾ.ಬಿ.ಆರ್ ಅಂಬೇಡ್ಕರ್ ಪದಾರ್ಪಣೆ ಮಾಡಿದ ಪುಣ್ಯಭೂಮಿ. ಇವತ್ತು ನಾನಿಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಆಗಿ ಉಳಿಯಲು ಕಾರಣ ಶಿವಾಜಿ ಮಹಾರಾಜರು. ಇಲ್ಲದಿದ್ದರೆ ನಾನು ಬಶೀರ್ ಅಹ್ಮದ್ ಪಟೇಲ್ ಆಗಿರುತ್ತಿದ್ದೆ. ಶಾಸಕ ಅಭಯ್ ಪಾಟೀಲ್, ಅಜರುದ್ದೀನ್ ಪಟೇಲ್ ಆಗಿರುತ್ತಿದ್ದರು ಎಂದಿದ್ದಾರೆ. ಇದನ್ನೂ ಓದಿ: ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮದರಸಾ ಸಂಪೂರ್ಣ ಬಂದ್: ಯತ್ನಾಳ್

ಅಸ್ಸಾಂ (Assam) ರಾಜ್ಯ ಸಹ ಹಿಂದೂಸ್ತಾನ್ ಬಿಟ್ಟುಹೋಗುವ ಸಾಧ್ಯತೆಯಿತ್ತು. ಆದರೆ ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರಿಂದ ಅಲ್ಲಿನ ಹಿಂದೂಗಳು ಜೀವನ ಮಾಡಲು ಸಾಧ್ಯವಾಗಿದೆ. ಇವತ್ತಿನ ದಿನ ಪಾಕಿಸ್ತಾನದಲ್ಲಿಯೂ ಮೋದಿ ಎಷ್ಟೊಂದು ಕೆಲಸ ಮಾಡ್ತಿದ್ದಾರೆ ಅಂತಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೆಲವು ಕಿಡಿಗೇಡಿಗಳು ನಮ್ಮ ದೇಶದ ಅನ್ನ ತಿಂದು ಪಾಕಿಸ್ತಾನದ ಪರ ಮಾತನಾಡ್ತಾರೆ. ಅಂತಹವರು ಅಲ್ಲೇ ಹೋಗಿ ಇರಿ ಅಂದರೂ ಹೋಗಲ್ಲಾ ಅಂತಾರೆ. ಹಿಂದೂಗಳಿಗೆ ಇರೋದು ಒಂದೇ ಭಾರತ. ಆದ್ದರಿಂದ ಈ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಕರ್ನಾಟಕದಲ್ಲಿ ಕಂಪ್ಲೀಟ್ ಮದರಸಾ ಬಂದ್ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕಂಠಪೂರ್ತಿ ಕುಡಿದು ತನ್ನ ಮದುವೆಗೆ ಹೋಗುವುದನ್ನೇ ಮರೆತ ವರ – ನೀನು ಬೇಡ ಎಂದ ವಧು

ಟಿಪ್ಪು ಸುಲ್ತಾನ್ ಬಗ್ಗೆ ಕೆಲವರು ಮಾತಾಡ್ತಾರೆ. ಟಿಪ್ಪು ಲಕ್ಷಾಂತರ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ, ಲಕ್ಷಾಂತರ ಹಿಂದೂಗಳನ್ನ ಮತಾಂತರ ಮಾಡಿದ. ಆದ್ರೆ ಛತ್ರಪತಿ ಶಿವಾಜಿ ಮಹಾರಾಜರು ಯಾವ ಮುಸ್ಲಿಂ ಮಹಿಳೆಯ ಮೇಲೂ ಅತ್ಯಾಚಾರ ಮಾಡಿಲ್ಲ. ಒಂದು ವೇಳೆ ಯಾರಾದ್ರೂ ಹಾಗೆ ಮಾಡಿದ್ರೆ ಅವರ ಕೈ ಕತ್ತರಿಸುತ್ತಿದ್ದರು ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *