ಹುಡುಗಿ ಹಿಜಬ್‌ ಧರಿಸುವುದು ಅವಳ ಆಯ್ಕೆ: ಭುವನ ಸುಂದರಿ ಹರ್ನಾಜ್ ಕೌರ್‌ ಸಂಧು

ನವದೆಹಲಿ: ಹುಡುಗಿ ಹಿಜಬ್‌ ಧರಿಸಿದ್ದರೆ, ಅದು ಅವಳ ಆಯ್ಕೆಯಾಗಿದೆ ಎಂದು ಭುವನ ಸುಂದರಿ ಹರ್ನಾಜ್ ಕೌರ್‌ ಸಂಧು ಹೇಳಿಕೆ ನೀಡಿದ್ದಾರೆ.

ಹುಡುಗಿ ಹಿಜಬ್ ಧರಿಸಿದ್ದರೆ, ಅದು ಅವಳ ಆಯ್ಕೆಯಾಗಿದೆ. ಯಾರದ್ದೇ ಪ್ರಾಬಲ್ಯ ಇದ್ದರೂ, ಹೆಣ್ಣು ಬಂದು ಮಾತಾಡಲೇಬೇಕು. ಅವಳಿಗೆ ಹೇಗೆ ಬೇಕೋ ಹಾಗೆ ಬದುಕಲಿ. ನಾವು ವಿಭಿನ್ನ ಸಂಸ್ಕೃತಿಯ ಮಹಿಳೆಯರು. ನಾವು ಪರಸ್ಪರ ಗೌರವಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಇಂದು SSLC 2ನೇ ದಿನದ ಪರೀಕ್ಷೆ – ಇವತ್ತೂ ಹಿಜಬ್‍ಧಾರಿ ವಿದ್ಯಾರ್ಥಿನಿಯರು ಗೈರಾಗ್ತಾರಾ..?

ಡಿಸೆಂಬರ್ 12 ರಂದು ನಡೆದ ಮಿಸ್ ಯುನಿವರ್ಸ್ 2021 ಸ್ಪರ್ಧೆಯಲ್ಲಿ ಭಾರತೀಯ ಯುವತಿ ಹರ್ನಾಜ್ ಸಂಧು ಕಿರೀಟ ಅಲಂಕರಿಸಿದರು.

ಉಡುಪಿಯ ಕಾಲೇಜೊಂದರಲ್ಲಿ ಶುರುವಾದ ಹಿಜಬ್‌ ವಿವಾದ ವಿಶ್ವಮಟ್ಟದಲ್ಲೇ ಸುದ್ದಿಯಾಯಿತು. ಹಿಜಬ್‌ ಕುರಿತು ಗಣ್ಯರು, ಸೆಲೆಬ್ರಿಟಿಗಳು, ರಾಜಕಾರಣಿಗಳು ತಮ್ಮದೇ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರ ಮಧ್ಯೆ, ಹಿಜಬ್‌ ಇಸ್ಲಾಂ ಧರ್ಮದ ಅಗತ್ಯ ಆಚರಣೆಯಲ್ಲ ಎಂದು ಕರ್ನಾಟಕ ಹೈಕೋರ್ಟ್‌ ತೀರ್ಪು ನೀಡಿತು. ಇದನ್ನೂ ಓದಿ: ಈ ಹುಡುಗರಿಗೆ ಅವಳ ತೂಕದ್ದೇ ಚಿಂತೆ- ಭುವನ ಸುಂದರಿ ಹೀಗೆಕಾದರು..?

ಕರ್ನಾಟಕ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಕೆಲ ವಿದ್ಯಾರ್ಥಿನಿಯರು ಹಾಗೂ ಸಂಘಟನೆಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

Comments

Leave a Reply

Your email address will not be published. Required fields are marked *