ವಿಶ್ವಕಪ್‌ ಒಂದು ಪಂದ್ಯಕ್ಕೆ ಕೊಹ್ಲಿ ಗೈರು ಸಾಧ್ಯತೆ

ಮುಂಬೈ: ಅಮೆರಿಕದಲ್ಲಿ(USA) ನಡೆಯಲಿರುವ ಟಿ20 ವಿಶ್ವಕಪ್‌ನ (T20 World Cup) ಅಭ್ಯಾಸ ಪಂದ್ಯಕ್ಕೆ ಕೊಹ್ಲಿ ಗೈರಾಗುವ ಸಾಧ್ಯತೆಯಿದೆ.

ಬಾಂಗ್ಲಾದೇಶದ ವಿರುದ್ಧ ಜೂನ್‌ 1 ರಂದು ಭಾರತ ಅಭ್ಯಾಸ ಪಂದ್ಯವನ್ನು ಆಡಲಿದೆ. ವಿರಾಟ್‌ ಕೊಹ್ಲಿ (Virat Kohli) ತಡವಾಗಿ ತಂಡವನ್ನು ಸೇರುವ ಕಾರಣದಿಂದ ಈ ಪಂದ್ಯಕ್ಕೆ ಅವರು ಗೈರಾಗುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿ ಮಾಡಿದೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಲೂಟಿ ನಡೀತಿದೆ: ಡಿಕೆಶಿ ವಿರುದ್ಧ ಹೆಚ್‌ಡಿಕೆ ಕಿಡಿ

ಐಪಿಎಲ್‌ ಎಲಿಮಿನೇಟರ್‌ನಲ್ಲಿ ಆರ್‌ಸಿಬಿ (RCB) ಸೋತ ಬಳಿಕ ಕೊಹ್ಲಿ ಕೆಲ ದಿನ ವಿಶ್ರಾಂತಿ ನೀಡಬೇಕೆಂದು ಬಿಸಿಸಿಐಗೆ (BCCI) ಮನವಿ ಮಾಡಿದ್ದಾರೆ. ಈ ಮನವಿಯನ್ನು ಬಿಸಿಸಿಐ ಪುರಸ್ಕರಿಸಿದ್ದು ತಡವಾಗಿ ಟೀಂ ಇಂಡಿಯಾವನ್ನು ಕೊಹ್ಲಿ ಸೇರಲಿದ್ದಾರೆ.

ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿ ಪ್ರಕಾರ ಕೊಹ್ಲಿ ಮೇ 30 ರಂದು ನ್ಯೂಯಾರ್ಕ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾದ ಉಪನಾಯಕ ಹಾರ್ದಿಕ್‌ ಪಾಂಡ್ಯ ಈಗ ಎಲ್ಲಿದ್ದಾರೆ?

ಅಮೆರಿಕ (USA) ಮತ್ತು ವೆಸ್ಟ್‌ ಇಂಡೀಸ್‌ (West Indies) ಜಂಟಿಯಾಗಿ ಈ ಬಾರಿಯ ಟಿ20 ಕ್ರಿಕೆಟ್‌ ಆಯೋಜನೆ ಮಾಡಿದ್ದು ಜೂನ್‌ 2 ರಿಂದ ಜೂನ್‌ 29 ವರೆಗೆ ಪಂದ್ಯಾಟ ನಡೆಯಲಿದೆ. ಜೂನ್‌ 5 ರಂದು ಐರ್ಲೆಂಡ್‌ ವಿರುದ್ಧ, ಜೂನ್‌ 9 ರಂದು ಪಾಕಿಸ್ತಾನದ ವಿರುದ್ಧ ಭಾರತ ಆಡಲಿದೆ.

ಟೀಂ ಇಂಡಿಯಾದ ಒಂದು ತಂಡ ಈಗಾಗಲೇ ಅಮೆರಿಕಕ್ಕೆ ತೆರಳಿದೆ. ಶನಿವಾರ ನಾಯಕ ರೋಹಿತ್‌ ಶರ್ಮಾ (Rohit Sharma), ಕೋಚ್‌ ರಾಹುಲ್‌ ದ್ರಾವಿಡ್‌ (Rahul Drvaid) ಸೇರಿದಂತೆ ಹಲವು ಮಂದಿ ನ್ಯೂಯಾರ್ಕ್‌ ವಿಮಾನ ಹತ್ತಿದ್ದಾರೆ.