– 3 ಮಾದರಿಯಲ್ಲೂ ಭಾರತಕ್ಕಿಲ್ಲ ಅಗ್ರಸ್ಥಾನ
– ಇಂಡಿಯಾವನ್ನು ಹಿಂದಿಕ್ಕಿದ ಆಸೀಸ್, ಕಿವೀಸ್
ದುಬೈ: ಐಸಿಸಿ ಮೇ 1ರಂದು ತನ್ನ ನೂತನ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟೆಸ್ಟ್, ಏಕದಿನ ಮತ್ತು ಟಿ-20 ಈ ಮೂರು ಮಾದರಿಯಲ್ಲೂ ಭಾರತ ತಂಡ ಅಗ್ರಸ್ಥಾನ ಪಡೆಯಲು ವಿಫಲವಾಗಿದೆ.
ಐಸಿಸಿ ಬಿಡುಗಡೆ ಮಾಡಿದ ನೂತನ ಪಟ್ಟಿಯಲ್ಲಿ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ, ಏಕದಿನದಲ್ಲಿ ಇಂಗ್ಲೆಂಡ್ ಮತ್ತು ಮೊದಲ ಬಾರಿಗೆ ಟಿ-20ಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನಕ್ಕೇರಿದೆ. ಈ ಮೂಲಕ ಭಾರತ ಟೆಸ್ಟ್ ನಲ್ಲಿ ಮೂರನೇ ಸ್ಥಾನ, ಏಕದಿನದಲ್ಲಿ ಎರಡನೇ ಸ್ಥಾನ ಮತ್ತು ಟಿ-20ಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.
No.1 teams in the @MRFWorldwide ICC Rankings:
Tests ➡️ Australia
ODIs ➡️ England
T20Is ➡️ AustraliaLastest rankings 👉 https://t.co/AeaYDWqlfh pic.twitter.com/uv9hTGkN3L
— ICC (@ICC) May 1, 2020
2016 ರಿಂದ 2017ರ ಸಮಯದಲ್ಲಿ ಆಡಿದ ಪಂದ್ಯಗಳನ್ನು ಪರಿಗಣಿಸದೆ ಈ ರ‍್ಯಾಂಕಿಂಗ್ ಅನ್ನು ಐಸಿಸಿ ಸಿದ್ಧಗೊಳಿಸಿದೆ. ಈಗ ಐಸಿಸಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 2019ರಲ್ಲಿ ನಡೆದ ಟೆಸ್ಟ್ ಪಂದ್ಯಗಳ ಶೇ. 100ರಷ್ಟು ಅಂಕಗಳು. ಜೊತೆಗೆ 2017 ಮತ್ತು 2018ರಲ್ಲಿ ನಡೆದ ಟೆಸ್ಟ್ ಪಂದ್ಯಗಳ ಶೇ 50ರಷ್ಟು ಅಂಕಗಳನ್ನು ತೆಗೆದುಕೊಂಡು ಈ ಪಟ್ಟಿಯನ್ನು ಸಿದ್ಧ ಮಾಡಿದೆ.

ಈ ಮೊದಲು ಭಾರತ ಟೆಸ್ಟ್ ನಲ್ಲಿ 2016 ಅಕ್ಟೋಬರ್ ತಿಂಗಳಿನಿಂದ ಮೊದಲ ಸ್ಥಾನದಲ್ಲಿ ಇತ್ತು. ಏಕೆಂದರೆ 2016 ಮತ್ತು 2017ರ ಅವಧಿಯಲ್ಲಿ ಭಾರತ ಆಡಿದ 13 ಟೆಸ್ಟ್ ಪಂದ್ಯಗಳಲ್ಲಿ ಒಂದರಲ್ಲಿ ಸೋತು ಬರೋಬ್ಬರಿ 12 ಟೆಸ್ಟ್ ಗಳನ್ನು ಗೆದ್ದಿತ್ತು. ಈ ಅವಧಿಯಲ್ಲಿ ನಡೆದ 5 ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧವೂ ಕೂಡ ಭಾರತ ಗೆದ್ದಿತ್ತು. ಆದರೆ ಈ ಪಂದ್ಯಗಳ ಅಂಕವನ್ನು ಐಸಿಸಿ ರ‍್ಯಾಂಕಿಂಗ್ ವೇಳೆ ಪರಿಗಣಿಸಿಲ್ಲ. ಆದ್ದರಿಂದ ಪಂದ್ಯಗಳನ್ನು ಆಡದೇ ಇದ್ದರೂ ಭಾರತ ಮೂರನೇ ಸ್ಥಾನಕ್ಕೆ ಕುಸಿದಿದೆ.
⬆️ Australia
⬇️ India🚨 BREAKING: Australia are the new No.1 in the @MRFWorldwide ICC Test Team Rankings following an annual update 🥇 #ICCRankings pic.twitter.com/0V0KP3f6dA
— ICC (@ICC) May 1, 2020
ಆದರೆ ಇಂದು ಬಿಡುಗಡೆ ಮಾಡಿರುವ ರ‍್ಯಾಂಕಿಂಗ್ ನಲ್ಲಿ ಭಾರತ ಮೂರನೇ ಸ್ಥಾನಕ್ಕೆ ಕುಸಿದಿದೆ. ಆದರೆ ಅಂಕಿ-ಅಂಶಗಳಲ್ಲಿ ಹೆಚ್ಚಿನ ಅಂತರವಿಲ್ಲ. ಆಸ್ಟ್ರೇಲಿಯಾ ತಂಡ 116 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಇದ್ದರೆ, ನ್ಯೂಜಿಲೆಂಡ್ ತಂಡ 115 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಇದೆ. ಹಾಗೇ ಭಾರತ ಕೂಡ 114 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ.
England, the 2019 @cricketworldcup winners, have retained the No.1 spot in the @MRFWorldwide ICC Men's ODI Team Rankings 👏#ICCRankings pic.twitter.com/hGkbXFkFhS
— ICC (@ICC) May 1, 2020
ಮೊಟ್ಟಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡ ಏಕದಿನ ರ‍್ಯಾಂಕಿಂಗ್ ನಲ್ಲಿ 127 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಈ ತಂಡ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ 50 ಓವರ್ ಗಳ ವಿಶ್ವಕಪ್ ಅನ್ನು ಎತ್ತಿಹಿಡಿದಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಭಾರತ ಪ್ರಸ್ತುತ 119 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ 116 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
More excellent news for 🇦🇺 fans!
Australia are No.1 in the @MRFWorldwide ICC Men's T20I Team Rankings for the first time ever.
They've displaced 🇵🇰 from the top spot!#ICCRankings pic.twitter.com/LrOerV0GKH
— ICC (@ICC) May 1, 2020
2011ರಲ್ಲಿ ಐಸಿಸಿ ಟಿ-20 ರ‍್ಯಾಂಕಿಂಗ್ ಅನ್ನು ಪರಿಚಯಿಸಿದ ನಂತರ ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ ಟಿ-20ಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ. ಆದರೆ 2018ರಿಂದ ಟಿ-20ಯಲ್ಲಿ ಮೊದಲ ಸ್ಥಾನದಲ್ಲಿ ಇದ್ದ ಪಾಕಿಸ್ತಾನ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಟಿ-20ಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನ ಇಂಗ್ಲೆಂಡ್ ಎರಡನೇ ಸ್ಥಾನ ಮತ್ತು ಭಾರತ ಮೂರನೇ ಸ್ಥಾನದಲ್ಲಿ ಇದೆ.

Leave a Reply