ಮುಸಲ್ಮಾನರ ಹತ್ಯೆಯ ಬಗ್ಗೆ ಸಿನಿಮಾ ಮಾಡಬೇಕು: ಐಎಎಸ್ ಅಧಿಕಾರಿ

ಭೋಪಾಲ್: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕುರಿತಾಗಿ ಪರವಿರೋಧ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಮಧ್ಯಪ್ರದೇಶದ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ.

ಪ್ರಸ್ತುತ ರಾಜ್ಯ ಲೋಕೋಪಯೋಗಿ ಇಲಾಖೆನಲ್ಲಿ ಉಪ ಕಾರ್ಯದರ್ಶಿಯಾಗಿರುವ ನಿಯಾಜ್ ಖಾನ್ ಕಳೆದ ವಾರ ಟ್ವೀಟ್ ಮಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?: ಕಾಶ್ಮೀರ್ ಫೈಲ್ಸ್ ಬ್ರಾಹ್ಮಣರ ನೋವನ್ನು ತೋರಿಸುತ್ತದೆ. ಕಾಶ್ಮೀರದಲ್ಲಿ ಎಲ್ಲ ಗೌರವಗಳೊಂದಿಗೆ ಸುರಕ್ಷಿತವಾಗಿ ಬದುಕಲು ಅವರಿಗೆ ಅವಕಾಶ ನೀಡಬೇಕು. ಹಲವಾರು ರಾಜ್ಯಗಳಾದ್ಯಂತ ಹೆಚ್ಚಿನ ಸಂಖ್ಯೆಯ ಮುಸ್ಲಿಮರ ಹತ್ಯೆಗಳನ್ನು ತೋರಿಸಲು ನಿರ್ಮಾಪಕರು ಸಿನಿಮಾವೊಂದನ್ನು ಮಾಡಬೇಕು. ಚಿತ್ರವು 150 ಕೋಟಿ ರೂಪಾಯಿಗಳ ಆದಾಯದ ಗಡಿಯನ್ನು ಮುಟ್ಟಿದ್ದಕ್ಕಾಗಿ ಚಿತ್ರದ ನಿರ್ಮಾಪಕರನ್ನು ಅಭಿನಂದಿಸಿದ್ದಾರೆ.

ಜನರು ಕಾಶ್ಮೀರಿ ಬ್ರಾಹ್ಮಣರ ಭಾವನೆಗಳಿಗೆ ಹೆಚ್ಚಿನ ಗೌರವವನ್ನು ನೀಡಿರುವುದರಿಂದ ಚಲನಚಿತ್ರ ನಿರ್ಮಾಪಕರು ಎಲ್ಲಾಗಳಿಕೆಯನ್ನು ಬ್ರಾಹ್ಮಣ ಮಕ್ಕಳ ಶಿಕ್ಷಣಕ್ಕೆ ವರ್ಗಾಯಿಸಬೇಕು. ಕಾಶ್ಮೀರದಲ್ಲಿ ಅವರಿಗೆ ಮನೆಗಳನ್ನು ನಿರ್ಮಿಸಬೇಕು. ಪ್ರತಿಕ್ರಿಯೆಯಾಗಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಮಾರ್ಚ್ 25 ರಂದು ಭೋಪಾಲ್‍ನಲ್ಲಿ ಭೇಟಿಯಾಗುವಂತೆ ಖಾನ್ ಅವರಿಗೆ ಹೇಳಿದ್ದಾರೆ.

ಏಳು ಪುಸ್ತಕಗಳ ಲೇಖಕರಾಗಿರುವ ಖಾನ್ ಅವರು ವಿವಿಧ ಸಂದರ್ಭಗಳಲ್ಲಿ ಮುಸ್ಲಿಮರ ಹತ್ಯಾಕಾಂಡ ಕುರಿತು ಪುಸ್ತಕವನ್ನು ಬರೆಯುವ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದ್ದಾರೆ. ಇದರಿಂದಾಗಿ ಅಲ್ಪಸಂಖ್ಯಾತರ ನೋವನ್ನು ಭಾರತೀಯರ ಮುಂದೆ ತರಬಹುದು ಎಂದಿದ್ದಾರೆ. ಈ ಹೇಳಿಕೆ ನೀಡುವ ಮೂಲಕ ಖಾನ್ ಅವರು ಐಎಎಸ್ ಸೇವಾ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ. ಇದನ್ನೂ ಓದಿ:  2ನೇ ಬಾರಿಗೆ ಗೋವಾ ಸಿಎಂ ಆಗಿ ಪ್ರಮೋದ್ ಸಾವಂತ್ ಆಯ್ಕೆ

Comments

Leave a Reply

Your email address will not be published. Required fields are marked *