ನನ್ನ ಮಗನ ಸಾವಿನ ಹಿಂದೆ ಸಿಎಂ ಸಿದ್ದರಾಮಯ್ಯ ಕೈವಾಡವಿದೆ- ಅನುರಾಗ್ ತಿವಾರಿ ತಂದೆ ಆರೋಪ

ಲಕ್ನೋ: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಕೈವಾಡ ಇದೆ ಎಂದು ತಿವಾರಿ ತಂದೆ ಬಿಎನ್ ತಿವಾರಿ ಗಂಭೀರ ಆರೋಪ ಮಾಡಿದ್ದಾರೆ.

ನನ್ನ ಮಗ ಅತ್ಯಂತ ಪ್ರಾಮಾಣಿಕ. ಭ್ರಷ್ಟರಿಗೆ ನನ್ನ ಮಗ ಇಷ್ಟವಾಗುತ್ತಿರಲಿಲ್ಲ. ಅಂತಹ ಭ್ರಷ್ಟರೇ ನನ್ನ ಮಗನನ್ನು ಸಂಚು ಹೂಡಿ ಹತ್ಯೆ ಮಾಡಿದ್ದಾರೆ. ನನ್ನ ಮಗನ ಸಾವಿನ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ಸಾವಿಗೂ ಮುನ್ನ ನಡೆದಿದೆ ಹಲ್ಲೆ: ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣಕ್ಕೆ ಟ್ವಿಸ್ಟ್

ಅನುರಾಗ್ ತಿವಾರಿ ಅವರ ಸಾವಿನ ಒಂದು ವರ್ಷದ ಬಳಿಕ ಬಿಎನ್ ತಿವಾರಿ ಸಿದ್ದರಾಮಯ್ಯ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸಿಬಿಐ ಅಧಿಕಾರಿಗಳು ಪ್ರಕರಣದಲ್ಲಿನ ನಿಜವಾದ ಆರೋಪಿಗಳನ್ನು ರಕ್ಷಿಸಲು ನಮ್ಮನ್ನು ಸುಮ್ಮನೆ ವಿಚಾರಣೆ ನಡೆಸುತ್ತಿದ್ದಾರೆ. ಅನುರಾಗ್ ಅವರ ಮೇಲೆ ಕೆಲವು ಫೈಲ್‍ಗಳ ಮೇಲೆ ಸಹಿ ಮಾಡಲು ತೀವ್ರ ಒತ್ತಡವಿತ್ತು. ಅವರ ಸಾವಿನ ಕೆಲ ಸಮಯದ ನಂತರ ಕೆಲವು ದಾಖಲೆಗಳನ್ನು ಕರ್ನಾಟದಲ್ಲಿದ್ದ ಅನುರಾಗ್ ಮನೆಯಿಂದ ತೆಗೆದುಕೊಂಡು ಹೋಗಲಾಗಿದೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ಕರ್ನಾಟಕದ 2 ಸಾವಿರ ಕೋಟಿ ರೂ. ಹಗರಣಕ್ಕೆ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಬಲಿ?

ಬೆಂಗಳೂರಿನಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ 36 ವರ್ಷದ ಅನುರಾಗ್ ತಿವಾರಿ ಕಳೆದ ಮೇ 17ರಂದು ಶಂಕಾಸ್ಪದ ರೀತಿಯಲ್ಲಿ ಲಕ್ನೋದಲ್ಲಿ ಸಾವನ್ನಪ್ಪಿದ್ದರು. ಇದನ್ನೂ ಓದಿ: ಅನ್ನಭಾಗ್ಯ ಅಕ್ರಮ: 34 ಲಕ್ಷ ಕೆಜಿ ಅಕ್ಕಿ ಕಾಳಸಂತೆಯಲ್ಲಿ ಮಾರಾಟ – ಅನುರಾಗ್ ತಿವಾರಿ ಬಲಿ ಪಡೀತಾ ಹಗರಣ?

Comments

Leave a Reply

Your email address will not be published. Required fields are marked *