ಮೇಕ್ ಇನ್ ಇಂಡಿಯಾಗೆ ಉತ್ತೇಜನ – 96 ಸುಧಾರಿತ ಯುದ್ಧ ವಿಮಾನ ತಯಾರಿಸಲು ಐಎಎಫ್ ಯೋಜನೆ

ನವದೆಹಲಿ: ಭಾರತೀಯ ವಾಯುಪಡೆ (ಐಎಎಫ್) ಭಾರತದಲ್ಲಿ ಸುಮಾರು 96 ಸುಧಾರಿತ ಯುದ್ಧ ವಿಮಾನಗಳನ್ನು ನಿರ್ಮಿಸಲು ಯೋಜಿಸಿದ್ದು, ಇದಕ್ಕಾಗಿ ಜಾಗತಿಕ ವಿಮಾನ ತಯಾರಕರೊಂದಿಗೆ ಮಾತುಕತೆ ಪ್ರಾರಂಭಿಸಿದೆ. ಈ ಮೂಲಕ ಮೇಕ್ ಇನ್ ಇಂಡಿಯಾಗೆ ಇನ್ನೊಂದು ಪ್ರಮುಖ ಉತ್ತೇಜನ ದೊರಕಿದೆ.

ಐಎಎಫ್ ತನ್ನ ಭತ್ತಳಿಕೆಗೆ 114 ವಿಮಾನಗಳನ್ನು ಸೇರಿಸಲು ಯೋಜನೆ ನಡೆಸಿದೆ. ಅದರಲ್ಲಿ 18 ವಿಮಾನಗಳನ್ನು ವಿದೇಶೀ ಮಾರಾಟಗಾರರಿಂದ ಆಮದು ಮಾಡಿಕೊಂಡು, ಉಳಿದ 96 ವಿಮಾನಗಳನ್ನು ಭಾರತದಲ್ಲೇ ತಯಾರಿಸಲು ಯೋಜಿಸಿದೆ. ಇದನ್ನೂ ಓದಿ: 2 ವಾರದಿಂದ ಸಿಕ್ಕಿಲ್ಲ ಸೈನಿಕರು – ಮುಂದುವರಿದ ಶೋಧಕಾರ್ಯ

Fighter jet

60 ವಿಮಾನಗಳನ್ನು ಭಾರತೀಯ ಕರೆನ್ಸಿಯಲ್ಲಿ ಪಾವತಿ ಮಾಡಲಾಗುವುದು. ಉಳಿದ 36 ವಿಮಾನಗಳಿಗಾಗಿ ಭಾಗಶಃ ಭಾರತೀಯ ಹಾಗೂ ಭಾಗಶಃ ವಿದೇಶೀ ಕರೆನ್ಸಿಯಿಂದ ಪಾವತಿ ಮಾಡಲಾಗುವುದು. ಸುಮಾರು ಶೇ.70 ರಷ್ಟು ವೆಚ್ಚವನ್ನು ಪಾವತಿಸಲು ಭಾರತೀಯ ಕರೆನ್ಸಿಯನ್ನೇ ಬಳಸುವ ಬಗ್ಗೆ ಯೋಜಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ದೇಶದಲ್ಲಿ ಆರಂಭವಾಗಿರುವ ದ್ವೇಷದ ಭಾವನೆ ಕುರಿತು ಮೋದಿ ಮೌನ ಮುರಿಯಲಿ: ಶಶಿ ತರೂರ್

ದೇಶದ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಹಳೆ ವಿಮಾನಗಳನ್ನು ಬದಲಿಸಲು ಐಎಎಫ್ 114 ವಿಮಾನಗಳನ್ನು ಸ್ವಾಧೀನಪಡಿಸುವ ಯೋಜನೆ ಮಾಡಿದೆ. ಯೋಜನೆಯಲ್ಲಿ ಕೆಲವು ವಿದೇಶೀ ವಿಮಾನಗಳನ್ನು ಸ್ಪರ್ಧೆಗೆ ನಿಲ್ಲಿಸಿ, ಪ್ರಯೋಗಗಳನ್ನು ನಡೆಸಿ, ಬಳಿಕ ಆಯ್ಕೆ ಮಾಡಲಾಗುವ 18 ವಿಮಾನಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಇದಕ್ಕಾಗಿ ಬೋಯಿಂಗ್, ಲಾಕ್‌ಹೀಡ್ ಮಾರ್ಟಿನ್, ಎಂಐಜಿ, ಡಸಲ್ಟ್ ಹಾಗೂ ಸಾಬ್‌ನಂತಹ ಕಂಪನಿಗಳು 3 ವರ್ಷಗಳಲ್ಲಿ ವಿಮಾನಗಳನ್ನು ತಯಾರಿಸುವ ಗುರಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.

Comments

Leave a Reply

Your email address will not be published. Required fields are marked *