ಹೆಲಿಕಾಪ್ಟರ್ ದುರಂತ: ಇನ್ನೂ ಪತ್ತೆಯಾಗದ 7 ಶರೀರಗಳ ಗುರುತು

ಚೆನ್ನೈ: ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ 13 ಜನರ ಪೈಕಿ 6 ಜನರ ಗುರುತು ಪತ್ತೆಯಾಗಿದೆ. 7 ಜನರ ಪಾರ್ಥಿವ ಶರೀರದ ಗುರುತು ಇನ್ನೂ ಪತ್ತೆಯಾಗಿಲ್ಲ. 7 ಪಾರ್ಥಿವ ಶರೀರಗಳ ಗುರುತು ಪತ್ತೆಗಾಗಿ ಡಿಎನ್‌ಎ ಪರೀಕ್ಷೆ ನಡೆಸಲಾಗಿದೆ.

ನಿನ್ನೆ ಪೃಥ್ವಿ ಸಿಂಗ್ ಚೌಹಾಣ್ ಪಾರ್ಥಿವ ಶರೀರದ ಗುರುತು ಪತ್ತೆ ಮಾಡಲಾಗಿತ್ತು. ಎಐಎಫ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಅಂತ್ಯಕ್ರಿಯೆ ಇಂದು ಉತ್ತರಪ್ರದೇಶದ ಆಗ್ರಾದಲ್ಲಿ ನಡೆಯಲಿದೆ. ದೆಹಲಿಯಿಂದ ಆಗ್ರಾಕ್ಕೆ ಮೃತದೇಹ ಕೊಂಡೊಯ್ಯಲಿದ್ದು, ಅಂತಿಮ ದರ್ಶನದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಪೃಥ್ವಿ ಸಿಂಗ್ ಪತನವಾದ ಹೆಲಿಕಾಪ್ಟರ್‌ನ ಪೈಲೆಟ್ ಆಗಿದ್ದರು. ಇದನ್ನೂ ಓದಿ: ಜೀವನ್ಮರಣ ಹೋರಾಟ ನಡೆಸುತ್ತಿರುವ ವರುಣ್ ಸಿಂಗ್ ಬರೆದಿದ್ದ ಸ್ಫೂರ್ತಿದಾಯಕ ಪತ್ರ ವೈರಲ್

ಮೃತಪಟ್ಟಿದ್ದವರಲ್ಲಿ 6 ಜನರ ಗುರುತು ಮಾತ್ರ ಪತ್ತೆಯಾಗಿದೆ. ದುರಂತದಲ್ಲಿ ಮೃತ ಪಟ್ಟಿದ್ದ ಲ್ಯಾನ್ಸ್ ನಾಯಕ್ ಸಾಯಿ ತೇಜ ಮತ್ತು ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಗುರುತು ಪತ್ತೆಯಾಗಿದ್ದು, ಇಬ್ಬರ ಪಾರ್ಥಿವ ಶರೀರಗಳನ್ನು ಇಂದು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಇದನ್ನೂ ಓದಿ: ಸಿಎಂಎಸ್‍ಆರ್ ಮೋರೆ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಿಎಂ ಬೊಮ್ಮಾಯಿ

Comments

Leave a Reply

Your email address will not be published. Required fields are marked *