ಮಗನನ್ನು ನೋಡುವವರೆಗೂ ಪ್ರತಿಕ್ರಿಯಿಸಲ್ಲ: ಅಭಿನಂದನ್ ತಂದೆ

ನವದೆಹಲಿ: ಧೀರ ಯೋಧ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಇಂದು ಸ್ವದೇಶಕ್ಕೆ ಆಗಮಿಸಲಿದ್ದಾರೆ. ಅವರ ಸ್ವಾಗತಕ್ಕಾಗಿ ಇಡೀ ದೇಶ ಕಾಯುತ್ತಿದ್ದು, ಅವರ ಪೋಷಕರು ಕೂಡ ವಾಘಾ ಗಡಿಗೆ ತಲುಪಿದ್ದಾರೆ.

ಅಭಿನಂದನ್ ಅವರ ಪೋಷಕರು ವಾಘಾ ಬಾರ್ಡರ್ ಗೆ ಬರುತ್ತಿದ್ದಂತೆ ಮಾಧ್ಯಮದವರು ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಅಭಿನಂದನ್ ಅವರ ತಂದೆ ನಿವೃತ್ತ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ತಮಾನ್, “ಮೊದಲು ನನ್ನ ಮಗನನ್ನು ನೋಡಬೇಕು, ಆಮೇಲಷ್ಟೇ ಪ್ರತಿಕ್ರಿಯೆ ಕೊಡ್ತೇನೆ” ಎಂದು ಹೇಳಿದ್ದಾರೆ.

ಅಭಿನಂದನ್ ಅವರನ್ನು ಪಾಕಿಸ್ತಾನ ವಶಕ್ಕೆ ಪಡೆದುಕೊಂಡಾಗ ಅವರ ತಂದೆ ಭಾರತೀಯರಿಗೆ ಧನ್ಯವಾದ ತಿಳಿಸಿದ್ದರು. ನನ್ನ ಮಗ ನಿಜಕ್ಕೂ ಒಬ್ಬ ಯೋಧ. ಆತನ ಬಗ್ಗೆ ನನಗೆ ಹೆಮ್ಮೆಯಿದ್ದು, ಆತ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸಾಗುವಂತೆ ಪ್ರಾರ್ಥಿಸುತ್ತಿದ್ದೇನೆ. ಅಲ್ಲದೆ ಭಾರತೀಯರು ಕೂಡ ಮಗ ವಾಪಸ್ ಬರುವಂತೆ ಪ್ರಾರ್ಥಿಸುತ್ತಿರುವುದಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಎಸ್. ವರ್ಥಮಾನ್ ಅವರು ಸಂದೇಶ ರವಾನಿಸಿದ್ದರು.

ಅಭಿನಂದನ್ ಪಾಕ್ ವಶವಾಗಿದ್ದು ಹೇಗೆ..?
ಪಾಕಿಸ್ತಾನ ಮಂಗಳವಾರ ಭಾರತದ ಗಡಿಯೊಳಗೆ ಯುದ್ಧ ವಿಮಾನಗಳನ್ನು ನುಗ್ಗಿಸಿ ದುಸ್ಸಾಹಸ ಮಾಡಿತ್ತು. ಭಾರತದ ಗಡಿ ದಾಟಿದ 3 ವಿಮಾನಗಳ ಪೈಕಿ, ಪಾಕಿಸ್ತಾನದ ಎಫ್-16 ಒಂದು ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿಸಿದೆ. ಇನ್ನೆರಡು ವಿಮಾನಗಳನ್ನು ಮಿಗ್-21 ವಿಮಾನವನ್ನು ಅಟ್ಟಾಡಿಸಿಕೊಂಡು ಹೋಗಿದೆ. ಪಾಕ್ ನೆಲದಲ್ಲಿ ಮಿಗ್ 22 ನೆಲಕ್ಕುರುಳಿದೆ. ಈ ವೇಳೆ ಅಭಿನಂದನ್ ಪ್ಯಾರಾಚೂಟ್‍ನಿಂದ ಜಿಗಿದು ನೆಲಕ್ಕೆ ಬಿದ್ದಿದ್ದಾರೆ. ತಮ್ಮ ನೆಲದಲ್ಲಿ ಅಭಿನಂದನ್ ಇರುವುದನ್ನು ಗಮನಿಸಿದ ಸ್ಥಳಿಯರು ಪಾಕಿಸ್ತಾನ ಸೇನೆಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪಾಕ್ ಸೈನಿಕರು ಅಭಿನಂದನ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *