ಸುಪ್ರೀಂ ಆದೇಶ ಪಾಲಿಸದವರ ಮೇಲೆ ಗುಂಡು ಹೊಡಿತೀವಿ: ಮುತಾಲಿಕ್

ಹುಬ್ಬಳ್ಳಿ: ಸುಪ್ರೀಂ ಆದೇಶ ಪಾಲಸಿದವರ ಮೇಲೆ ಗುಂಡು ಹೊಡಿತೀವಿ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಲೌಡ್ ಸ್ಪೀಕರ್ ವಿಚಾರವಾಗಿ ಸರ್ಕಾರ ನೀಡಿದ್ದ ಗಡುವು ಮುಗಿದಿದೆ. ಆದರೂ ಸರ್ಕಾರ ಏನು ಮಾಡುತ್ತಿದೆ? ಹಿಂದೂಗಳ ಹೆಸರಿನಲ್ಲಿ ಅಧಿಕಾರ ಹಿಡಿದ ನಿಮಗೆ ಈ ಬಗ್ಗೆ ಅರಿವು ಇಲ್ವಾ? ಲೌಡ್ ಸ್ಪೀಕರ್ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿಮಗೆ ಧಮ್ ಇಲ್ವಾ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಇದನ್ನೂ ಓದಿ: ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ನೋಡಿ ಪತ್ನಿಗೆ ‘ಚಲಿಯೇ ಹುಕುಂ’ ಎಂದ ಅಮಿತಾ ಶಾ

ಹುಬ್ಬಳ್ಳಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುತಾಲಿಕ್, ಒಂದು ವರ್ಷದಿಂದ ನಾವು ಲೌಡ್ ಸ್ಪೀಕರ್ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಇದರ ಮುಂದುವರಿದ ಭಾಗವಾಗಿ ನಾವು ಭಜನೆ ಹಾಗೂ ಭಕ್ತಿಗೀತೆಗಳ ಅಭಿಯಾನಕ್ಕೂ ಚಾಲನೆ ನೀಡಿದ್ದೇವೆ. ಆದರೆ ಸರ್ಕಾರ ಕೇವಲ ಒಂದು ಪತ್ರ ಕಳುಹಿಸಿ ತಮ್ಮ ಕೆಲಸ ಮುಗಿಯಿತು ಎಂದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

ನಮಗೆ 10 ಹಿಂದೂ ಸಂಘಟನೆಗಳ ಬೆಂಬಲವಿದೆ. ಹಿಂದೂಗಳ ಹೆಸರಿನಲ್ಲಿ ಅಧಿಕಾರ ಹಿಡಿದಿರುವ ನಿಮಗೆ ಈ ಬಗ್ಗೆ ಅರಿವು ಇಲ್ವಾ? ಇನ್ನು ನಮಗೂ ನಿಮ್ಮ ಮೇಲೆ ನಂಬಿಕೆ ಇರುವುದಿಲ್ಲ. ಈ ತಿಂಗಳ 8 ರಿಂದ ಬಿಜೆಪಿಯ ಎಲ್ಲಾ ಶಾಸಕರ ಕಚೇರಿ ಎದುರು ಧರಣಿ ನಡೆಸುತ್ತೇವೆ. ನಿಮ್ಮ ನಾಟಕವನ್ನು ಬಟಬಯಲು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

mosque-loudspeakers

ಸರ್ಕಾರ ನನ್ನ ಕೈಗೆ ಕೊಡಿ:
ಲೌಡ್ ಸ್ಪೀಕರ್ ವಿಚಾರದಲ್ಲಿ ಯಾರು ಕಾನೂನು ಪಾಲನೆ ಮಾಡುತ್ತಿಲ್ಲವೋ, ಅವರಿಗೆ ಗುಂಡು ಹೊಡೆಯಬೇಕು. ನಿಮ್ಮಿಂದ ಸಾಧ್ಯವಿಲ್ಲ ಎಂದರೆ ನನಗೆ ಅಧಿಕಾರ ಕೊಡಿ, ನಾನು ಗುಂಡು ಹೊಡೆಯುತ್ತೇನೆ. ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡದವರ ಮೇಲೆ ಗುಂಡು ಹಾಕುತ್ತೇನೆ ಎಂದು ಹೇಳಿಕೆ ನೀಡಿದರು.

ಬಿಜೆಪಿ ನಿಮ್ಮಪ್ಪನದ್ದಲ್ಲ. ನಾವು ರಕ್ತ ಸುರಿಸಿ ಬಿಜೆಪಿ ಕಟ್ಟಿರುವುದು. ರಾಜಕೀಯ ಈಗ ಮಾತನಾಡುವುದಿಲ್ಲ. ನಮ್ಮ ಶ್ರಮದಿಂದ ನೀವು ಅಧಿಕಾರ ಅನುಭವಿಸುತ್ತಿದ್ದೀರಿ ಎಂದು ಆರೋಪಿಸಿದರು. ಇದನ್ನೂ ಓದಿ: ನಾನು ಒಬ್ಬ ಸಣ್ಣ ಸೈನಿಕ: ಕಮಲ ಹಿಡಿದ ಹಾರ್ದಿಕ್ ಪಟೇಲ್

ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ ವಿಚಾರವಾಗಿ ಮಾತನಾಡಿದ ಮುತಾಲಿಕ್, ಇಂದು ಕೂಡಾ ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದು ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯ. ಇದು ಹೀಗೇ ಮುಂದುವರಿದರೆ ಇಡೀ ಸಮಾಜ ಒಟ್ಟಾಗಿ ಚಲೋ ಕಾಶ್ಮೀರ ಚಳುವಳಿ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *