ನನ್ನ ಕಾರ್ಖಾನೆಯಿಂದ ಬಾಕಿ ಇದ್ರೆ ರಾಜೀನಾಮೆ ಕೊಡ್ತೀನಿ – ಬಾಕಿ ಉಳಿಸಿಕೊಂಡಿಲ್ಲ, ಜಾರಕಿಹೊಳಿ ಸ್ಪಷ್ಟನೆ

ಬೆಂಗಳೂರು: ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಸಭೆಗೆ ಗೈರಾಗಿರುವ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ, ನನ್ನ ಕಾರ್ಖಾನೆಯಿಂದ ಬಾಕಿ ಇದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

ತಮ್ಮ ನಿವಾಸದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ರೈತ ಮುಖಂಡರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ನಡೆಯುತ್ತಿರುವ ಸಭೆಗೆ ಏಕೆ ಹಾಜರಾಗಿಲ್ಲ ಎಂಬುವುದನ್ನು ಸಿಎಂ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದೇನೆ. ಆದರೆ ಮಾಧ್ಯಮಗಳಲ್ಲಿ ನನ್ನ ಸಕ್ಕರೆ ಕಾರ್ಖಾನೆಯಲ್ಲಿ ರೈತರಿಗೆ 20 ಕೋಟಿ ರೂ. ಬಾಕಿ ಇದೆ ವರದಿಯಾಗಿದೆ. ಆದರೆ ಅಷ್ಟು ಹಣ ಬಾಕಿ ಇದ್ದರೆ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಇಂದು ನಗರದ ವಿಧಾನಸೌಧದಲ್ಲಿ ನಿಗದಿಯಾಗಿದ್ದ ಸಭೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರು ಭಾಗವಹಿಸದೆ ಗೈರಾಗಿದ್ದರು. ಮಾಹಿತಿ ಅನ್ವಯ ರಮೇಶ್ ಜಾರಕಿಹೊಳಿ ಅವರ ಕಂಪನಿಯಿಂದ 20 ಕೋಟಿ ರೂ. ಬಾಕಿ ಇದೆ ಎನ್ನಲಾಗಿತ್ತು. ರೈತರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅವರು ಈ ಕುರಿತು ಯಾವುದೇ ಹೇಳಿಕೆ ನೀಡಲ್ಲ ಎಂದು ಹೇಳಿದ್ದರು. ಅಲ್ಲದೇ ಈ ಕುರಿತು ಯಾವುದೇ ಮಾಧ್ಯಮ ಏನು ಪ್ರಸಾರ ಮಾಡಿದರು ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದ್ದರು. ಬೆಂಗಳೂರಿನ ತಮ್ಮ ನಿವಾಸದಲ್ಲೇ ಇದ್ದರು ರಮೇಶ್ ಜಾರಕಿಹೊಳಿ ಅವರು ಮಾತ್ರ ಸಭೆಯಲ್ಲಿ ಭಾಗವಹಿಸದೆ ಹಿಂದೇಟು ಹಾಕಿದ್ದಾರೆ. ಇದನ್ನು ಓದಿ: ಎಲ್ಲಿವರೆಗೂ ಹಾಕ್ತಿರಾ ಹಾಕಿ – ಕಬ್ಬಿನ ಬಾಕಿ ಕುರಿತ ಪ್ರಶ್ನೆಗೆ ರಮೇಶ್ ಜಾರಕಿಹೊಳಿ ಗರಂ 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *