ನಾನು 5 ಕೋಟಿ ರೂ. ಕೊಡ್ತೀನಿ ಕಾಂಗ್ರೆಸ್ ನಾಯಕರು ಆತ್ಮಹತ್ಯೆ ಮಾಡಿಕೊಳ್ತಾರಾ? ಯತ್ನಾಳ್ ಟಾಂಗ್

ರಾಯಚೂರು: ರೈತರ ಆತ್ಮಹತ್ಯೆ (Farmers Suicide) ಬಗ್ಗೆ ಕಾಂಗ್ರೆಸ್‌ನವರು (Congress) ಹಗುರವಾಗಿ ಮಾತನಾಡುತ್ತಿದ್ದಾರೆ. 5 ಲಕ್ಷ ರೂ. ಕೊಡುವುದರಿಂದ ರೈತರ ಆತ್ಮಹತ್ಯೆ ಹೆಚ್ಚಾಗಿದೆ ಎಂದು ಹೇಳುವ ಮೂಲಕ ಬೇಜವಾಬ್ದಾರಿ ಮೆರೆಯುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ರಾಯಚೂರಿನಲ್ಲಿ (Raichur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ವಿಜಯಪುರದ (Vijayapura) ಮಂತ್ರಿಯೊಬ್ಬರು 5 ಲಕ್ಷ ರೂ.ಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದಿದ್ದಾರೆ. ನಾನು ಅವರಿಗೆ 5 ಕೋಟಿ ರೂ. ಕೊಡುತ್ತೇನೆ. ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದರು. ಡಿಕೆಶಿ (DK Shivakumar) ಶ್ರೀಮಂತ ಇರುವುದರಿಂದ 25 ಕೋಟಿ ರೂ. ಕೊಡುತ್ತೇನೆ ಎಂದು ಸವಾಲೆಸೆದರು. ಡಿಕೆಶಿ ಸೇರಿದಂತೆ ಕಾಂಗ್ರೆಸ್‌ನವರಿಗೆ 135 ಸೀಟ್ ಬಂದಿದೆ ಎಂದು ಅಹಂಕಾರ ಬಂದಿದೆ. ಹೀಗಾಗಿ ರೈತರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇಂದಿರಾ ಗಾಂಧಿ ಅಂತಹವರೇ ಸೋತು ಹೋದರು. ಇನ್ನು ಇವರೆಲ್ಲಾ ಏನು ಎಂದು ಹರಿಹಾಯ್ದರು. ಇದನ್ನೂ ಓದಿ: ಧರ್ಮದ ವಿಚಾರದಲ್ಲಿ ದ್ವೇಷ, ನೋವುಂಟು ಮಾಡಬಾರದು: ಯು.ಟಿ ಖಾದರ್

ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ವ್ಯಂಗ್ಯವಾಡಿದ ಯತ್ನಾಳ್, ನಮ್ಮ ಗ್ಯಾರಂಟಿಗಳೇ ಬೇರೆ ಇವೆ. ಅವು ಬಂದರೆ ಕಾಂಗ್ರೆಸ್ ಪಕ್ಷವೇ ಇರಲ್ಲ. ಗ್ಯಾರಂಟಿಗಳಿಗೆ ಅಕೌಂಟ್ ತೆಗೆದಿದ್ದೆ ಮೋದಿ. ಜನ್‌ಧನ್ ಯೋಜನೆ ಮಾಡಿದ್ದು ನಾವೇ. 50 ವರ್ಷದಲ್ಲಿ ಸಾಮಾನ್ಯ ಮಹಿಳೆಗೆ ರಾಷ್ಟ್ರೀಯ ಬ್ಯಾಂಕ್ ಅಕೌಂಟ್ ಇರಲಿಲ್ಲ. ಗ್ಯಾರಂಟಿ ಮೇಲೆ ಚುನಾವಣೆ ಆಗಲ್ಲ ಎಂದರು. ಇದನ್ನೂ ಓದಿ: ರಾಷ್ಟ್ರಪತಿ ಆಯೋಜಿಸಿರುವ ಜಿ20 ಔತಣಕೂಟಕ್ಕೆ ಖರ್ಗೆಗಿಲ್ಲ ಆಹ್ವಾನ

ಗಣೇಶ ಹಬ್ಬಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಅಂದರೆ ಯಾವಾಗಲೂ ಹಿಂದೂ ವಿರೋಧಿ ಹಿನ್ನೆಲೆ ಇದೆ. ನಮ್ಮ ಹಬ್ಬ ಹರಿದಿನಗಳಮೇಲೆ ಯಾರು ಯಾವ ನಿರ್ಬಂಧ ಹಾಕಿದರೂ ನಾವು ಕೇಳುವುದಿಲ್ಲ. ಈಗಲೂ ನಾವು ಗಣಪತಿ ಕೂರಿಸಲು ಪೊಲೀಸ್ ಅನುಮತಿ ತೆಗೆದುಕೊಳ್ಳುವುದಿಲ್ಲ. ಎಷ್ಟು ಕೇಸ್ ಹಾಕುತ್ತೀರೊ ಹಾಕಿ. ನಾವ್ಯಾಕೆ ಅನುಮತಿ ತಗೋಬೇಕು. ನಮ್ಮಿಂದಲೇ ಕೋಮು ಗಲಭೆ ಆಗುತ್ತಾ ಎಂದು ಪ್ರಶ್ನಿಸಿದರು. ಕಠಿಣ ಕಾನೂನು ತರುತ್ತೇವೆ ಅಂದರೆ ನೀವು ಎಲ್ಲಾ ಧರ್ಮದವರಿಗೂ ತನ್ನಿ ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್‌ ರಿಲೀಫ್‌

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]