ಅನುದಾನ ಕೊಟ್ಟವರ ಕಡೆ ನಾನು: ಕಾಂಗ್ರೆಸ್‌ ಪರ ಎಸ್‌ಟಿಎಸ್‌ ಬ್ಯಾಟಿಂಗ್‌

ಬೆಳಗಾವಿ: ನಮಗೆ ಅನುದಾನ (Grant) ಕೊಟ್ಟವರ ಕಡೆ ನಾನು ಇರುತ್ತೇನೆ. ನನ್ನ ಮನಸ್ಸು ಕಾಂಗ್ರೆಸ್ (Congress) ಕಡೆ ಇದೆ ಎಂದು ಬೆಂಗಳೂರಿನ ಯಶವಂತಪುರದ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್‌ (ST Somashekhar) ಹೇಳಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ (BJP) ಶೀಘ್ರವೇ ಶಿಸ್ತು ಕ್ರಮ ಕೈಗೊಳ್ಳುತ್ತದೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಅವರು, ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಅಧ್ಯಕ್ಷರ ಜೊತೆ ನಾನು‌ ಮಾತನಾಡಿದ್ದೇನೆ. ಯಾರ್ಯಾರು ಏನೇನು ಮಾತನಾಡಿದ್ದಾರೆ‌ ಎಲ್ಲರಿಗೂ ಗೊತ್ತಿದೆ. ಅವರ ಮೇಲು ಕ್ರಮ‌ ಆಗಬೇಕು ಎಂದು ಹೇಳಿದರು. ಇದನ್ನೂ ಓದಿ: MUDA Scam | ಇಡಿ ಪತ್ರ ಮಾಧ್ಯಮ ಸೃಷ್ಟಿ – ಪ್ರಶ್ನೆ ಕೇಳಿದ್ದಕ್ಕೆ ಬೈರತಿ ಸುರೇಶ್‌ ಗರಂ

 

ಈಗ ಕಾಂಗ್ರೆಸ್ (Congress) ಸರ್ಕಾರದ ಅನುದಾನ ಕೊಡುತ್ತಿದೆ. ಬಿಜೆಪಿ ಶಾಸಕಾಂಗ ಸಭೆಗೆ ನನಗೆ ಇಲ್ಲಿಯವರೆಗೆ ಕರೆ ಬಂದಿಲ್ಲ, ಕರೆ ಬಂದರೆ ಹೋಗುತ್ತೇನೆ ಎಂದರು.

ಕಳೆದ ಬಾರಿ ಕಾಂಗ್ರೆಸ್‌ ಶಾಸಕಾಂಗ ಸಭೆಗೆ ನಾನು ಹೋಗಿರಲಿಲ್ಲ. ಕಾಂಗ್ರೆಸ್‌ನವರು ಕರೆದ ಭೋಜನ ಕೂಟಕ್ಕೆ ಹೋಗಿದ್ದೆ ಅಷ್ಟೇ. ಈ ಬಾರಿಯೂ ಯಾರು ಊಟಕ್ಕೆ ಕರೆಯುತ್ತಾರೋ ಅಲ್ಲಿಗೆ ಹೋಗುತ್ತೇನೆ. ಅವರು ಕರೆದರೂ ಹೋಗುತ್ತೇನೆ ಇವರು ಊಟಕ್ಕೆ ಕರೆದರೂ ಹೋಗುತ್ತೇನೆ ಎಂದು ಪ್ರತಿಕ್ರಿಯಿಸಿದರು.