ಅಂದುಕೊಂಡ ಆಗಿದ್ದರೆ ತಮಿಳಿನ ಖ್ಯಾತನಟ ಧನುಷ್ (Dhanush) ಅವರ ಅಸುರನ್ ಸಿನಿಮಾವನ್ನು ಶಿವರಾಜ್ ಕುಮಾರ್ (Shivraj Kumar) ಕನ್ನಡಕ್ಕೆ ಮಾಡಬೇಕಿತ್ತು. ಕನ್ನಡದಲ್ಲಿ ಅಸುರನ್ ರೀಮೇಕ್ ಆಗುತ್ತಿದೆ ಎನ್ನುವ ಸುದ್ದಿಯೂ ಹರಡಿತ್ತು. ಅದೆಲ್ಲವೂ ನಿಜವೂ ಆಗಿತ್ತು. ನಂತರ ಸಿನಿಮಾ ಆಗಲೇ ಇಲ್ಲ. ಕೋವಿಡ್ ಸೇರಿದಂತೆ ನಾನಾ ಕಾರಣದಿಂದಾಗಿ ಅಸುರನ್ ಕನ್ನಡಕ್ಕೆ ಬರಲಿಲ್ಲ. ಆದರೆ, ಶಿವರಾಜ್ ಕುಮಾರ್ ನಟನೆಯ ಟಗರು (Tagaru) ಸಿನಿಮಾ ತಮಿಳಿಗೆ ರಿಮೇಕ್ ಆಗತ್ತಾ? ಇಂಥದ್ದೊಂದು ಸುದ್ದಿ ಹರಿದಾಡುತ್ತಿದೆ.

ಶಿವರಾಜ್ ಕುಮಾರ್ ಮತ್ತು ಧನುಷ್ ಕಾಂಬಿನೇಷನ್ ನ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಹಾಗಾಗಿ ಶಿವರಾಜ್ ಕುಮಾರ್ ಅಲ್ಲಿನ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಆವಾಗ ಅಸುರನ್ ಸಿನಿಮಾ ರಿಮೇಕ್ ಯಾಕೆ ಆಗಲಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಟಗರು ಸಿನಿಮಾವನ್ನು ಧನುಷ್ ರೀಮೇಕ್ ಮಾಡಿದರೆ, ಪಾತ್ರ ಅವರಿಗೆ ಒಪ್ಪುತ್ತದೆ ಎಂದಿದ್ದಾರೆ.
ಶಿವಣ್ಣ ಮತ್ತು ಧನುಷ್ ಕಾಂಬಿನೇಷನ್ ನ ಮಿಲ್ಲರ್ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಶಿವರಾಜ್ ಕುಮಾರ್ ಈ ಸಿನಿಮಾದಲ್ಲಿ ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಧನುಷ್ ಸಹೋದರನ ಪಾತ್ರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
