ಪಾಕ್ ಸಿನಿಮಾದಲ್ಲಿ ನಟಿಸುತ್ತೇನೆ: ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ ಎಂದ ರಣಬೀರ್

ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಎರಡು ತಿಂಗಳು ಹಿಂದೆ ಹೇಳಿದ್ದಾರೆ ಎನ್ನಲಾದ ಹೇಳಿಕೆ ಇದೀಗ ವಿವಾದಕ್ಕೀಡಾಗಿದೆ (Controversy). ರಣಬೀರ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ವಿವಾದ ಭುಗಿಲೇಳುತ್ತಿದ್ದಂತೆಯೇ ನಟ ಉಲ್ಟಾ ಹೊಡೆದಿದ್ದಾರೆ. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಹೇಳುವ ಮೂಲಕ ವಿವಾದವನ್ನು ತಿಳಿಗೊಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ರಣಬೀರ್ ಕಪೂರ್ ಡಿಸೆಂಬರ್ ನಲ್ಲಿ ನಡೆದ ಚಿತ್ರೋತ್ಸವವೊಂದರಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನಿ (Pakistani) ನಿರ್ದೇಶಕರೊಬ್ಬರು ‘ಪಾಕಿಸ್ತಾನಿ ಸಿನಿಮಾದಲ್ಲಿ ನಟಿಸಲು ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಒಪ್ಪುತ್ತೀರಾ?’ ಎಂದು ಪ್ರಶ್ನೆಯನ್ನು ಕೇಳಿದ್ದರು. ಒಬ್ಬ ನಟನಾಗಿ ಯಾಕೆ ಮಾಡಬಾರದು? ಎನ್ನುವ ಉತ್ತರವನ್ನು ರಣಬೀರ್ ನೀಡಿದ್ದರು. ಈ ಮಾತೇ ಸದ್ಯ ಅವರಿಗೆ ಮುಳುವಾಗಿದೆ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

ಸದ್ಯ ರಣಬೀರ್ ‘ತು ಜೂತಿ ಮೇನ್ ಮಕ್ಕರ್’ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ಅವರನ್ನು ಪಾಕಿಸ್ತಾನಿ ಕುರಿತಾಗಿ ಪ್ರಶ್ನೆಯನ್ನು ಕೇಳಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಾನು ಹೇಳಿದ ರೀತಿಯೇ ಬೇರೆ ಇದೆ. ಅದನ್ನು ತಗೆದುಕೊಂಡು ರೀತಿ ನನಗೆ ಅಚ್ಚರಿ ಮೂಡಿಸಿದೆ. ನಾನೊಬ್ಬ ಕಲಾವಿದ. ಕಲಾವಿದನ ರೀತಿಯಲ್ಲೇ ನೋಡಬೇಕಿತ್ತು. ಆದರೆ, ಅದು ಹಾಗಾಗಲಿಲ್ಲ’ ಎಂದು ಉತ್ತರಿಸಿದ್ದಾರೆ.

ಪಾಕಿಸ್ತಾನಿ ನಟ ಫವಾದ್ ಖಾನ್ ಜೊತೆ ರಣಬೀರ್ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದಲ್ಲಿ ನಟಿಸಿದ್ದರು. ಆಗ ಪಾಕಿಸ್ತಾನಿ, ಇಂಡಿಯಾ ಅಂತ ಇರಲಿಲ್ಲ. ಒಬ್ಬ ಕಲಾವಿದ ಮತ್ತೊಬ್ಬ ಕಲಾವಿದನ ಜೊತೆ ನಟಿಸಿದ್ದೇವೆ ಎನ್ನುವುದೇ ಆಗಿತ್ತು ಎನ್ನುವ ಮಾತುಗಳನ್ನು ಆಡಿದ್ದಾರೆ. ಕಲೆ ದೇಶಕ್ಕಿಂತ ದೊಡ್ಡದಲ್ಲ ಎನ್ನುವ ಅರಿವು ನನಗಿದೆ ಎಂದು ಕೂಡ ಅವರು ಹೇಳಿದ್ದಾರೆ. ಆದರೂ, ವಿವಾದದ ಕಿಡಿ ಮಾತ್ರ ತಣ್ಣಗಾಗುವಂತೆ ಕಾಣುತ್ತಿಲ್ಲ.

Comments

Leave a Reply

Your email address will not be published. Required fields are marked *