SSLC ಫೇಲ್ ಆದ ಬಳಿಕ ಕನ್ನಡ ಪತ್ರಿಕೆಯಲ್ಲಿ ಪ್ರೂಫ್ ರೀಡರ್ ಆಗಿದ್ದೆ: ರಜನಿಕಾಂತ್

ಚೆನ್ನೈ: ರಾಜಕೀಯಕ್ಕೆ ಧುಮುಕಿರುವ ಸೂಪರ್ ಸ್ಟಾರ್ ತಲೈವಾ ತಮ್ಮ ಮೊದಲ ರಾಜಕೀಯ ಸಂದೇಶ ನೀಡಿದ್ದಾರೆ. ನಾನು ತಮಿಳುನಾಡು ರಾಜಕೀಯದಲ್ಲಿ ಕ್ರಾಂತಿ ಬಯಸಿದ್ದೇನೆ. ಈಗ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದರೆ ಭವಿಷ್ಯದ ಜನಾಂಗಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರೆ.

ಪ್ರಮುಖ ರಾಜಕೀಯ ಘಟನಾವಳಿಗಳಿಗೆ ತಮಿಳುನಾಡು ಐತಿಹಾಸಿಕ ಸ್ಥಳವಾಗಿದೆ. ಮಹಾತ್ಮ ಗಾಂಧಿ ತಮ್ಮ ವಸ್ತ್ರ ತ್ಯಜಿಸಿದ್ದು ಇಲ್ಲೇ. ಅದೇ ರೀತಿ ನಾನೂ ಕ್ರಾಂತಿ ಬಯಸಿದ್ದೇನೆ ಎಂದು ರಜನಿಕಾಂತ್ ಮಾಧ್ಯಮ ಸಂವಾದದಲ್ಲಿ ಹೇಳಿದ್ದಾನೆ.

ಕರ್ನಾಟಕದಲ್ಲಿ ತಮ್ಮ ದಿನಗಳನ್ನು ಮತ್ತೆ ನೆನಪಿಸಿಕೊಂಡ ರಜನಿಕಾಂತ್, ನಾನು 10ನೇ ತರಗತಿಯಲ್ಲಿ ಫೇಲ್ ಆದ ಬಳಿಕ ಕನ್ನಡ ಪತ್ರಿಕೆ ಸಂಯುಕ್ತ ಕರ್ನಾಟಕದಲ್ಲಿ ಪ್ರೂಫ್ ರೀಡರ್ ಆಗಿ ಕೆಲಸ ಮಾಡಿದ್ದೆ. ನಾನು ಮೊದಲ ಸಂದರ್ಶನ ಕೊಟ್ಟಿದ್ದು ಬೊಮ್ಮಾಯಿ ಪತ್ರಿಕೆಗೆ ಎಂದು ಹೇಳಿದರು.

ಚೆನ್ನೈನಲ್ಲಿರುವ ರಾಮಕೃಷ್ಣ ಮಿಷನ್ ಸ್ವಾಮೀಜಿಗಳನ್ನು ಭೇಟಿ ಮಾಡಿ ರಾಜಕೀಯ ನಡೆಯ ಬಗ್ಗೆ ಆಧ್ಯಾತ್ಮಿಕ ಮಾರ್ಗದರ್ಶನ ಪಡೆದ್ರು. ಈ ವೇಳೆ ಸ್ವಾಮೀಜಿ ನಿಮ್ಮ ಪಕ್ಷದಲ್ಲಿ ಸೋ ಕಾಲ್ಡ್ ಸೆಕ್ಯೂಲರಿಸಂ ಇರಕೂಡದು ಅಂತಾ ಸಲಹೆ ನೀಡಿದ್ರು. ಇದನ್ನೂ ಓದಿ: ಮೊದಲ ಬಾರಿ ರಾಜ್ ಕುಮಾರ್ ಕಂಡಾಗ ಮೈ ಮರೆತು ನಿಂತೆ ಬಿಟ್ಟೆ : ರಜನಿಕಾಂತ್

Comments

Leave a Reply

Your email address will not be published. Required fields are marked *