ಮಂಡ್ಯ: ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಕುತೂಹಲ ಹುಟ್ಟಿಸಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರದ ಸ್ಪರ್ಧೆಯಿಂದ ಶಾಸಕ ಅಂಬರೀಶ್ ಹಿಂದೆ ಸರಿದಿದ್ದು, ರವಿಕುಮಾರ್ ಅವರಿಗೆ ಟಿಕೆಟ್ ಸಿಕ್ಕಿದೆ.
ಬೆಂಗಳೂರಿನ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಂಬರೀಶ್, ನಾನು ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ ಹಾಗೂ ಯಾರ ಹೆಸರನ್ನು ನಾನು ಶಿಫಾರಸು ಮಾಡಲ್ಲ. ಹಾಗಾಗಿ ಹೈಕಮಾಂಡ್ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಅಂತಾ ಸ್ಪಷ್ಟಪಡಿಸಿದ್ರು.

ಇಂದು ಕಾಂಗ್ರೆಸ್ ನಾಯಕರ ಜೊತೆ ನಡೆದ ಮಾತುಕತೆಯಲ್ಲಿ ನನ್ನ ಹೆಸರನ್ನು ಅಂಬರೀಶ್ ಶಿಫಾರಸ್ಸು ಮಾಡಲಿಲ್ಲ. ಒಂದು ವೇಳೆ ಅಭ್ಯರ್ಥಿಯನ್ನು ಸೂಚಿಸಿದ್ರೆ, ಅವರನ್ನು ಗೆಲ್ಲಸಿಕೊಂಡು ಬರುವ ಜವಾಬ್ದಾರಿ ನನ್ನ ಮೇಲಿರುತ್ತದೆ. ಬೇರೆಯವರಿಗೆ ಟಿಕೆಟ್ ಕೊಡಿಸಿದ್ರೆ ನಾನೇ ಪ್ರಚಾರ ಮಾಡಬೇಕಾಗುತ್ತದೆ. ಪ್ರಚಾರ ಮಾಡುವುದಿದ್ದರೆ ನಾನೇ ಸ್ಪರ್ಧೆ ಮಾಡಬಹುದು ಎಂದು ಹೇಳುವ ಮೂಲಕ ನನ್ನನ್ನು ಬೇರೆಯವನ ರೀತಿ ನೋಡಿದ್ರು ಅಂತಾ ಅಮರಾವತಿ ಚಂದ್ರೇಖರ್ ಹೇಳಿದ್ದಾರೆ. ಇದನ್ನೂ ಓದಿ: ನಾನು ಯಾವತ್ತಿದ್ರೂ ಸ್ಟಾರ್, ರಾಜಕೀಯ, ಚಿತ್ರರಂಗದಲ್ಲಿ ಉನ್ನತ ಸ್ಥಾನ ಕೊಟ್ಟ ಮಂಡ್ಯ ಜನತೆಗೆ ಚಿರಋಣಿ: ಅಂಬರೀಶ್
ಈ ಹಿಂದೆ ನಾನು ಚುನಾವಣೆಗೆ ನಿಲ್ಲಲ್ಲ, ನೀನೇ ನಿಲ್ಲು ಅಂತಾ ಹಲವು ಬಾರಿ ಅಂಬರೀಶ್ ಹೇಳುತ್ತಿದ್ದರು. ಆದ್ರೆ ಕೊನೆ ಕ್ಷಣದಲ್ಲಿ ನಮ್ಮ ಹಿತೈಷಿಗಳು ಮಾಡಿದ ಪಿತೂರಿನಿಂದ ನನಗೆ ಟಿಕೆಟ್ ತಪ್ಪಿರುವ ಸಾಧ್ಯತೆಗಳಿವೆ. ಜನರ ಬೆಂಬಲದಿಂದಲೇ ಮಂಡ್ಯದಲ್ಲಿ ಆರು ಚುನಾವಣೆಗಳನ್ನು ಮಾಡಿ ಅವುಗಳಲ್ಲಿ ಯಶಸ್ವಿಯಾಗಿದ್ದೇನೆ. ನಾನು ಇಂದು ಬೆಳಗ್ಗೆವರೆಗೂ ಅಂಬರೀಶ್ ಅವರೇ ಚುನಾವಣೆಗೆ ಸ್ಪರ್ಧಿಸಬೇಕೆಂದು ಹೇಳುತ್ತಾ ಬಂದಿದ್ದೆ, ನಾನು ಎಂದು ಅವರ ವಿರುದ್ಧ ನಿಲ್ಲಬೇಕೆಂದು ಪಿತೂರಿ ಮಾಡಿದವನಲ್ಲ ಅಂತಾ ಭಾವುಕರಾದ್ರು. ಇದನ್ನು ಓದಿ: ಅಮರಾವತಿಗೆ ಅಂಬರೀಷ್ ಮಂಗಳಾರತಿ!
ಸೋಮವಾರ ಅಂಬರೀಶ್ ಚುನಾವಣೆಯಿಂದ ಸ್ಪರ್ಧೆ ಮಾಡುತ್ತಿಲ್ಲ. ಹಾಗಾಗಿ ನಾನೇ ಚುನಾವಣೆಗೆ ಸ್ಪರ್ಧೆ ಮಾಡಲಿದ್ದೇನೆ ಅಂತಾ ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ಹೇಳಿದ್ದರು.
https://youtu.be/j5sNdOb1D40

Leave a Reply