ನಾನು ಓಡಿ ಬಂದೆ, ಅಲ್ಲಿರುವವರು ಒತ್ತಡದಲ್ಲಿ ಸಹಿ ಹಾಕ್ತಿದ್ದಾರೆ: ಶಿಂಧೆ ವಿರುದ್ಧ ಶಿವಸೇನಾ ಶಾಸಕ ಆರೋಪ

ಮುಂಬೈ: ಏಕನಾಥ್ ಶಿಂಧೆ ಅವರೊಂದಿಗೆ ಸೂರತ್‌ಗೆ ತೆರಳಿದ್ದ ಶಿವಸೇನಾ ಶಾಸಕ ಕೈಲಾಸ್ ಪಾಟೀಲ್, ಕೆಲವರು ಒತ್ತಡಕ್ಕೆ ಮಣಿದು ಬಂಡಾಯ ಪಾಳಯಕ್ಕೆ ಸಹಿ ಹಾಕುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸೂರತ್‌ಗೆ ಶಾಸಕರನ್ನು ಹೊತ್ತೊಯ್ಯುತ್ತಿದ್ದ ಕಾರಿನಿಂದ ತಪ್ಪಿಸಿಕೊಂಡು ಬಂದಿದ್ದಾನೆ. ಕಿಲೋಮೀಟರ್‌ಗಟ್ಟಲೆ ನಡೆದು ನಂತರ ದ್ವಿಚಕ್ರ ವಾಹನ ಮತ್ತು ಟ್ರಕ್‌ನಲ್ಲಿ ಹತ್ತಿ ಮುಖ್ಯಮಂತ್ರಿ ನಿವಾಸಕ್ಕೆ ಬಂದಿದ್ದೇನೆ ಎಂದು ಕೈಲಾಸ್ ಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ: ಅಘಾಡಿ DNA ಮಿಸ್ ಮ್ಯಾಚ್ ಆಗಿದೆ – ಲೂಟಿ ಮಾಡಿ ತಿನ್ನುವುದು ಅವರ ನೀತಿಯಾಗಿತ್ತು: ಸಿ.ಟಿ ರವಿ

ಕೆಲವರು ಒತ್ತಡದಲ್ಲಿ ಬಂಡಾಯ ಪಾಳಯಕ್ಕೆ ಸಹಿ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅವರೊಂದಿಗಿದ್ದೇವೆ ಎಂದು ಪಾಟೀಲ್ ತಿಳಿಸಿದ್ದಾರೆ.

ಒಸ್ಮಾನಾಬಾದ್ ಪ್ರತಿನಿಧಿಸುವ ವಿಧಾನಸಭಾ ಸದಸ್ಯ (ಎಂಎಲ್‌ಎ) ಕೈಲಾಸ್ ಪಾಟೀಲ್, ಜೂನ್ 20 ರಂದು ಏಕನಾಥ್ ಶಿಂಧೆ ಅವರು ಆಯೋಜಿಸಿದ್ದ ಭೋಜನಾ ಕೂಟಕ್ಕೆ ಥಾಣೆಗೆ ಹೋಗಿದ್ದರು. ರಾತ್ರಿ 8-9 ಗಂಟೆ ಸಮಯದಲ್ಲಿ ಕಾರು ಮಹಾರಾಷ್ಟ್ರದಿಂದ ಹೊರಡುತ್ತಿದ್ದಾಗ ನನಗೆ ಅನುಮಾನ ಮೂಡಿತ್ತು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಉದ್ಧವ್‌, ಏಕನಾಥ್‌ ವೈಮನಸ್ಸಿಗೆ ಮರಾಠಿ ಸಿನಿಮಾ ಕಾರಣ?

ಪರಾರಿಯಾದ ಬಗ್ಗೆ ವಿವರಿಸಿದ ಪಾಟೀಲ್, ಸೂರತ್‌ಗೆ ಶಾಸಕರನ್ನು ಹೊತ್ತೊಯ್ದ ಕಾರಿನಿಂದ ತಪ್ಪಿಸಿಕೊಂಡು ಕಿಲೋಮೀಟರ್‌ಗಳಷ್ಟು ನಡೆದೆ. ನಂತರ ದ್ವಿಚಕ್ರ ವಾಹನ ಮತ್ತು ಟ್ರಕ್‌ನಲ್ಲಿ ಬಂದೆ ಎಂದು ತಿಳಿಸಿದ್ದಾರೆ. ಅಂತಿಮವಾಗಿ ಅವರನ್ನು ಮುಖ್ಯಮಂತ್ರಿಗಳ ನಿವಾಸ ‘ವರ್ಷಾ’ಕ್ಕೆ ಕರೆದೊಯ್ಯಲು ವಾಹನವನ್ನು ಕಳುಹಿಸಲಾಯಿತು.

ಶಿಂಧೆ ಅವರ ಬಳಿ ಈಗಾಗಲೇ ಸಾಕಷ್ಟು ಶಾಸಕರಿದ್ದಾರೆ ಎನ್ನಲಾಗುತ್ತಿದೆ. ಅವರಿಗೆ ಬೇಕಿರುವುದು 37 ಶಾಸಕರು. ಆದರೆ ಈಗ ಅವರ ಬಳಿ 40 ಕ್ಕೂ ಹೆಚ್ಚು ಶಾಸಕರಿದ್ದಾರೆ ಎಂದು ಹೇಳಲಾಗಿದೆ.

Live Tv

Comments

Leave a Reply

Your email address will not be published. Required fields are marked *