ಶಾಲಾ ದಿನಗಳಲ್ಲಿ ಕಿರುಕುಳ ಅನುಭವಿಸಿದ್ದೇನೆ : ಜೆರ್ಸಿ ಹೀರೋ ಶಾಹೀದ್

ನಿನ್ನೆಯಷ್ಟೇ ತಮ್ಮ ಕಿರಿವಯಸ್ಸಿನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಕುರಿತು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಮಾತನಾಡಿದ್ದರು. ತಮ್ಮ ಹನ್ನೊಂದನೇ ವಯಸ್ಸಿನಲ್ಲೇ ತಮ್ಮ ಬಟ್ಟೆ ಬಿಚ್ಚಿಸಲಾಗುತ್ತಿತ್ತು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಸುದ್ದಿಯ ಬೆನ್ನಲ್ಲೇ ಶಾಹೀದ್ ಕಪೂರ್ ಕೂಡ ತಮಗಾದ ಕಿರುಕುಳದ ಬಗ್ಗೆಯೂ ಮಾತನಾಡಿದ್ದಾರೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

ಶಾಹೀದ್ ಕಪೂರ್ ನಟನೆಯ ಜರ್ಸಿ ಸಿನಿಮಾ ರಿಲೀಸ್ ಆಗಿ, ತಕ್ಕ ಮಟ್ಟಿಗೆ ಬಾಕ್ಸ್ ಆಫೀಸ್‍ ನಲ್ಲಿ ಸದ್ದು ಮಾಡುತ್ತಿದೆ. ಈ ಹೊತ್ತಿನಲ್ಲಿ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಶಾಹೀದ್ ತಮಗಾದ ಕಹಿ ಘಟನೆಯನ್ನು ಮೆಲುಕು ಹಾಕಿದ್ದಾರೆ. ಹೀಗಾಗಿ ತಮ್ಮ ಶಾಲಾ ದಿನಗಳ ಬಗ್ಗೆ ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

ಪ್ರಾಥಮಿಕ ಶಾಲೆಯನ್ನು ಶಾಹೀದ್ ಓದಿದ್ದು ಮುಂಬೈನಲ್ಲಿ ಆಗ ಶಾಲೆಯಲ್ಲಿ ನಿತ್ಯ ಕಿರುಕುಳವನ್ನು ಅವರು ಅನುಭವಿಸುತ್ತಿದ್ದರಂತೆ. ಆ ದಿನಗಳು ಮತ್ತೆಂದೂ ನನ್ನ ಜೀವನದಲ್ಲಿ ಬರಲಿಲ್ಲ. ಬರಬಾರದು ಅಂದುಕೊಂಡೇ ಬದುಕಿದೆ. ಮುಂದೆ ದೆಹಲಿಯಲ್ಲಿ ಕಾಲೇಜು ಓದಿದೆ. ಅವು ನನ್ನ ಗೋಲ್ಡನ್ ದಿನಗಳು ಎಂದು ನೆನಪಿಸಿಕೊಂಡಿದ್ದಾರೆ ಶಾಹೀದ್. ಇದನ್ನೂ ಓದಿ : ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಸಿನಿಮಾ ಅಷ್ಟೇ : ಬಾಲಿವುಡ್ ವಿರುದ್ಧ ಕಿಚ್ಚ ಸುದೀಪ್ ಗುಡುಗು

ಶಾಹೀದ್ ಕಪೂರ್ ಯಾವತ್ತಿಗೂ ಬೋಲ್ಡ್ ಆಗಿಯೇ ಮಾತನಾಡುವಂತಹ ವ್ಯಕ್ತಿ. ಸಿನಿಮಾಗಳು ಸೋತಾಗಲೂ ಅವರು ಅದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಶಾಹೀದ್ ಆಡಿದ ಮಾತುಗಳು ಬಾಲಿವುಡ್ ನಲ್ಲಿ ಚರ್ಚೆಗೆ ಕಾರಣವಾಗಿವೆ. ಅವರಿಗೆ ಆದ ಕಿರುಕುಳದ ಬಗ್ಗೆ ಸಾಂತ್ವಾನದ ಮಾತುಗಳು ಕೇಳಿ ಬಂದಿವೆ.

Comments

Leave a Reply

Your email address will not be published. Required fields are marked *