ನನ್ನ ಬರವಣಿಗೆ ಕಾಲ ಮುಗಿತು ಅನ್ನಿಸುತ್ತಿದೆ: ಎಸ್.ಎಲ್ ಭೈರಪ್ಪ

ಧಾರವಾಡ: ನನ್ನ ಬರವಣಿಗೆ ಕಾಲ ಮುಗಿಯಿತು ಎಂದು ಹಿರಿಯ ಸಾಹಿತಿ ಎಸ್. ಎಲ್ ಭೈರಪ್ಪ ಹೇಳಿದ್ದಾರೆ.

ಧಾರವಾಡದ ಬೇಂದ್ರ ಭವನದಲ್ಲಿ ನಡೆದ ಸಾಹಿತ್ಯ ಸಂವಾದದಲ್ಲಿ ಈ ರೀತಿ ಹೇಳಿದ ಭೈರಪ್ಪ ಅವರು, ಉತ್ತರಕಾಂಡ ಪುಸ್ತಕ ಬರೆದ ನಂತರ ಏನೂ ಹೊಳೆಯುತ್ತಿಲ್ಲ ಎಂದು ಹೇಳಿದರು. ಇನ್ನು ಸಾಕಷ್ಟು ವಿಚಾರ ಹೊಳೆದರೂ ಮಹತ್ವ ಎನಿಸುತ್ತಿಲ್ಲ. ನನ್ನ ಬರವಣಿಗೆ ಕಾಲ ಮುಗಿತು ಎಂದು ಅನಿಸ್ತಾ ಇದೆ, ಹಾಗೆ ಹೇಳೋಕೆ ಆಗೊಲ್ಲ, ಆದರೂ ಎಷ್ಟೋ ಸಲ ಹಾಗೆ ಎನಿಸಿದೆ. ಈಗ ನನ್ನ ವಯಸ್ಸು ನೋಡಿಕೊಂಡರೆ ಮತ್ತೆ ಬರಿತೇನೋ ಇಲ್ಲವೋ ಗೊತ್ತಿಲ್ಲ ಎಂದು ಭೈರಪ್ಪ ತಿಳಿಸಿದರು.

ಇದೇ ವೇಳೆ, ಚಳುವಳಿ ಯಾವಾಗಲೂ ಒಂದು ಐಡಿಯಾಲಜಿ ಇಟ್ಟುಕೊಂಡು ಹೋಗುತ್ತಿರುತ್ತೆ. ನೀವು ಆ ಐಡಿಯಾಲಜಿಗೆ ಸೇರಿಕೊಂಡರೆ ನಿಮಗೊಂದು ಉಪಯೋಗವಿರುತ್ತೆ. ಸಾಹಿತ್ಯದಲ್ಲೂ ಒಂದಲ್ಲಾ ಒಂದು ಚಳುವಳಿ ಇರುತ್ತೆ. ಆ ಚಳುವಳಿಗೆ ತಕ್ಕ ಐಡಿಯಾಲಜಿ ತಕ್ಕಂತೆ ನೀವು ಬರೆದರೆ, ನಿಮಗೆ ಒಳ್ಳೆಯ ವಿಮರ್ಶೆ ಬರೆಯಲು ಉಪಯೋಗವಾಗುತ್ತೆ. ನೀವು ಯಾವಾಗ ಅದನ್ನು ಬಿಡುತ್ತಿರೋ, ಅದು ಅವಾಗ ನಿಮಗೆ ಅಟ್ಯಾಕ್ ಮಾಡುತ್ತೆ. ಸಾಹಿತಿಯಾದವನು ಚಳವಳಿಗಳಲ್ಲಿ ಇರಬಾರದು, ಚಳವಳಿಗಳಲ್ಲಿ ಭಾಗಿಯಾದರೆ ಸಾಹಿತಿಗೆ ಸ್ವಾತಂತ್ರ್ಯ ಇರುವುದಿಲ್ಲ. ನನಗೆ ಯಾವ ಚಳವಳಿಯಲ್ಲಿಯೂ ನಂಬಿಕೆ ಇಲ್ಲ ಎಂದು ಭೈರಪ್ಪ ಹೇಳಿದರು.

ಇಂದು ವರಕವಿ ದ.ರಾ. ಬೇಂದ್ರೆಯವರ ಜನ್ಮದಿನ. ಈ ದಿನದಿಂದ ನಾಡಿನಾದ್ಯಂತ ಸಾಹಿತ್ಯಾಸಕ್ತರು ಕವಿ ದಿನ ಆಚರಿಸಿ ಬೇಂದ್ರೆಯವರಿಗೆ ಕವಿ ನಮನ ಸಲ್ಲಿಸುತ್ತಿದ್ದಾರೆ. ಆದರೆ ಓದಲೂ ಬಾರದು, ಮಾತು ಆಡಲಾರಲಾಗದ ಕೋತಿಯೊಂದು ಕಳೆದ ಎರಡು ವರ್ಷಗಳಿಂದ ಬೇಂದ್ರೆಯವರ ಭಾವಚಿತ್ರಕ್ಕೆ ನಮಿಸುತ್ತಿರುವ ಪ್ರಸಂಗವೊಂದು ನಡೆಯುತ್ತಿದೆ.

Comments

Leave a Reply

Your email address will not be published. Required fields are marked *