ಬಿಜೆಪಿ ಬಿಡಲ್ಲ, ಕಾಂಗ್ರೆಸ್ ಸೇರೋ ಅವಶ್ಯಕತೆ ನನಗಿಲ್ಲ: ಕೆ.ಸುಧಾಕರ್

ಚಿಕ್ಕಬಳ್ಳಾಪುರ: ಬಿಜೆಪಿ (BJP) ಬಿಡುವ ಯೋಚನೆ, ಉದ್ದೇಶವಾಗಲಿ ಅಥವಾ ಅವಶ್ಯಕತೆಯಾಗಲಿ ನನಗಿಲ್ಲ. ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಮಾಜಿ ಸಚಿವ ಡಾ.ಕೆ ಸುಧಾಕರ್ (K.Sudhakar) ಹೇಳಿದ್ದಾರೆ.

ಮಾಜಿ ಸಚಿವ ಡಾ.ಕೆ ಸುಧಾಕರ್ ಘರ್‌ವಾಪ್ಸಿ ಕಾಂಗ್ರೆಸ್ (Congress) ಸೇರುತ್ತಾರೆ ಎಂದು ರಾಜಕೀಯ ಪಾಳಯದಲ್ಲಿ ದಟ್ಟವಾಗಿ ಚರ್ಚೆಯಾಗುತ್ತಿದೆ. ಬಿಜೆಪಿಯಿಂದ ಲೋಕಸಭಾ ಟಿಕೆಟ್ ಸಿಗುವ ಬಗ್ಗೆ ಸಂಶಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕದ ತಟ್ಟಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್ ಸಿಗುವ ಭರವಸೆ ಸಿಕ್ಕರೆ ಬಿಜೆಪಿಗೆ ಗುಡ್‌ಬೈ ಹೇಳುತ್ತಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಕುಡುಕರು ನಮ್ಮ ಎಣ್ಣೆ ನಮ್ಮ ಹಕ್ಕು ಅಂತಿದ್ದಾರೆ: ಆರ್.‌ ಅಶೋಕ್‌

ಈ ವಿಚಾರವಾಗಿ ಡಿಸಿಎಂ ಹಂತದಲ್ಲಿ ಚರ್ಚೆ ನಡೆದಿದೆ ಎಂದು ಸಹ ಹೇಳಲಾಗುತ್ತಿದೆ. ರಾಜಕೀಯ ವಲಯದಲ್ಲಿನ ಚರ್ಚೆಗಳಿಂದ ಕೇಳಿಬರುತ್ತಿರುವ ಸುದ್ದಿಗಳಿಂದ ಎಚ್ಚೆತ್ತ ಸುಧಾಕರ್ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಪರಿಷತ್‌ನಲ್ಲಿ ಡಿಕೆಶಿ ಗಡ್ಡದ ಬಗ್ಗೆ ಹಾಸ್ಯಭರಿತ ಚರ್ಚೆ

ಕಳೆದ ಸಲ ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗುವ ಸಮಯದಲ್ಲೂ ನಾನು ಕಾಂಗ್ರೆಸ್ ಬಿಡಲ್ಲ ಅಂತಲೇ ಸುಧಾಕರ್ ಬಿಜೆಪಿ ಜೊತೆ ಸೇರಿಕೊಂಡಿದ್ದು ಜಗಜ್ಜಾಹೀರಾದ ವಿಚಾರ. ಹಾಗಾಗಿ ಕೆಲವರು ಇದನ್ನು ಹೇಗೆ ನಂಬೋದು ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ. ಇದನ್ನೂ ಓದಿ: ಸುಮಲತಾ ಅವರಷ್ಟು ಬುದ್ಧಿವಂತ ನಾನಲ್ಲ: ಚಲುವರಾಯಸ್ವಾಮಿ ಟಾಂಗ್