-ಪರೋಕ್ಷವಾಗಿ ಜಾರಕಿಹೊಳಿ ಸಹೋದರಿಗೆ ಎಚ್ಚರಿಕೆ ನೀಡಿದ ಶಾಸಕಿ
ಬಾಗಲಕೋಟೆ: ಅನ್ಯಾಯ ಮಾಡುವುದು ಎಷ್ಟು ಕೆಟ್ಟದ್ದೋ, ಅನ್ಯಾಯ ಸಹಿಸುಕೊಳ್ಳುವುದು ಅಷ್ಟೇ ಕೆಟ್ಟದ್ದು. ಹೀಗಾಗಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಖಂಡಿತವಾಗಿಯೂ ಸಹಿಸಿಕೊಳ್ಳುವುದಿಲ್ಲವೆಂದು ಪರೋಕ್ಷವಾಗಿ ಜಾರಕಿಹೊಳಿ ಸಹೋದರರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದ್ದಾರೆ.
ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ನಡೆದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಳಗಾವಿ ವಿಚಾರವನ್ನು ಒಂದು ಕೆಟ್ಟ ಘಟನೆ ಎಂದು ಮರೆತು ಬಿಡಿ. ದೇವರು ನಮಗೆ ಮರೆವು ಎಂಬ ಒಳ್ಳೆಯ ಗುಣವನ್ನು ಕೊಟ್ಟಿದ್ದಾನೆ. ಆದರೆ ಪುನಃ ನಮ್ಮನ್ನು ಕೆಣಕಿದರೆ, ಇಲ್ಲವೇ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುವಂತೆ ಮಾಡಿದರೆ ಖಂಡಿತವಾಗಿಯೂ ಸಹಿಸುವುದಿಲ್ಲ. ಅನ್ಯಾಯ ಮಾಡುವುದು ಎಷ್ಟು ಕೆಟ್ಟದ್ದೋ, ಅನ್ಯಾಯ ಸಹಿಸುವುದು ಕೂಡ ಅಷ್ಟೆ ಕೆಟ್ಟದ್ದು. ಕಲಿಯುಗದಲ್ಲಿ ಚುನಾವಣೆಗಳೆ ಯುದ್ಧಗಳಾಗಿವೆ ಎಂದು ಜಾರಕಿಹೊಳಿ ಬ್ರದರ್ಸ್ ಹಾಗೂ ತಮ್ಮ ನಡುವಿನ ಸಮರದ ಬಗ್ಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಪಂಚಮಸಾಲಿ ಸಮಾಜದ ವತಿಯಿಂದ ನಡೆದ 9ನೇ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗೆ ಪಂಚಮಸಾಲಿ ಪೀಠದ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿ, ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಮತ್ತು ಸಮಾಜದ ಮುಖಂಡರು ಭಾಗಿಯಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply