ಜುಲೈ 5ರ ರಾಜ್ಯ ಬಜೆಟ್ ದಿನ ನಾ ಬರಲ್ಲ: ಡಿಕೆಶಿ

ರಾಮನಗರ: ಮುಂದಿನ ತಿಂಗಳು 5 ರಂದು ನಡೆಯುವ ಬಜೆಟ್ ದಿನ ನಾನು ವಿಧಾನಸಭೆಯಲ್ಲಿ ಇರುವುದಿಲ್ಲ. ನಾನು ನಂಬಿರುವ ಶಕ್ತಿ ದೇವರ ದೇವಾಲಯ ಕಟ್ಟಿಸುತ್ತಿದ್ದು, ಅಲ್ಲಿಗೆ ತೆರಳುತ್ತಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಕನಕಪುರದಲ್ಲಿ ತಿಳಿಸಿದ್ದಾರೆ.

ಕನಕಪುರ ಹೊರವಲಯದ ಅರಳಾಳು ಸಮೀಪದಲ್ಲಿ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕೃತಜ್ಞತೆ ಹಾಗೂ ಅಭಿನಂದನೆ ಕಾರ್ಯಕ್ರಮ ನಡೆಸಿದ್ರು. ಇದೇ ವೇಳೆ ಮಾತನಾಡಿದ ಅವರು ಜಿಲ್ಲೆಗೆ ಈ ಬಾರಿಯ ಬಜೆಟ್‍ನಲ್ಲಿ ಹಲವು ನಿರೀಕ್ಷೆಗಳಿವೆ. ಮುಖ್ಯಮಂತ್ರಿಗಳ ಬಳಿ ಬಜೆಟ್ ವಿಚಾರವಾಗಿ ಚರ್ಚೆ ನಡೆಸಿದ್ದೇವೆ. ಕನಕಪುರಕ್ಕೆ ಮೆಡಿಕಲ್ ಕಾಲೇಜು ನೀಡುವ ಭರವಸೆಯನ್ನ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ರು. ಆದ್ರೆ ಅದು ಆಗಲಿಲ್ಲ ಎಂದರು.

300 ರಿಂದ 400 ಬೆಡ್ ಗಳ ಆಸ್ಪತ್ರೆ ಕನಕಪುರಕ್ಕೆ ಬೇಕು ಎಂಬ ನಿರೀಕ್ಷೆ ಇದೆ. ಈಗ ಸಿಎಂ ಕುಮಾರಸ್ವಾಮಿ ಅವರ ಬಳಿ ಈ ವಿಚಾರ ಮಾತನಾಡಿದ್ದೇನೆ. ಬಜೆಟ್ ದಿನ ನಾನು ನಂಬಿರುವ ಶಕ್ತಿ ದೇವರ ದೇವಾಲಯ ಉದ್ಘಾಟನೆ ಇದೆ. ಅಲ್ಲಿಗೆ ಗವರ್ನರ್ ಕೂಡಾ ಬರ್ತಿದ್ದಾರೆ. ನಾನು ಅಲ್ಲಿಂದ ಬರುವಷ್ಟರಲ್ಲಿ ಸಾಯಂಕಾಲವಾಗಿರುತ್ತೆ. ಬಜೆಟ್‍ನಲ್ಲಿ ಕನಕಪುರಕ್ಕೆ ಏನಾದ್ರೂ ಸಿಕ್ಕಿದ್ಯಾ ಅನ್ನೋದನ್ನ ನೀವೇ ಮೊದಲು ತಿಳಿದುಕೊಳ್ತೀರಿ ಎಂದು ಡಿಕೆಶಿ ಹೇಳಿದರು.

Comments

Leave a Reply

Your email address will not be published. Required fields are marked *