ನಾನು ಸೊಂಟ ಮುಟ್ಟಿಲ್ಲ, ಅದು ಫೋಟೋ ಶೂಟ್ ಅಷ್ಟೇ- ಐಶ್ವರ್ಯ ಆರೋಪಕ್ಕೆ ಚೇತನ್ ತಿರುಗೇಟು

ಬೀದರ್: ಶೂಟಿಂಗ್ ವೇಳೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪ ಮಾಡಿದ್ದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಆರೋಪಕ್ಕೆ ಇಂದು ನಟ ಚೇತನ್ ತಿರುಗೇಟು ನೀಡಿದ್ದಾರೆ.

ಚೇತನ್ ಬೀದರ್ ಅಲೆಮಾರಿ ಜನಾಂಗದ ಮೂಲಭೂತ ಸೌಕರ್ಯದ ಬಗ್ಗೆ ತಿಳಿದುಕೊಳ್ಳಲು ಬಂದಿದ್ದರು. ಈ ವೇಳೆ ಚೇತನ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಮೀಟೂ ಬಗ್ಗೆ ಪ್ರತಿಕ್ರಿಯೆ ನೀಡಿದರು. ನಾನು ಐಶ್ವರ್ಯ ಸೊಂಟ ಮುಟ್ಟಿಲ್ಲ, ಅದು ಫೋಟೋ ಶೂಟ್ ಅಷ್ಟೇ. ಸರ್ಜಾ ಅವರೇ ಅದನ್ನು ನಿರ್ವಹಣೆ ಮಾಡಿದ್ದರು ಎಂದರು. ಇದನ್ನೂ ಓದಿ: ಚೇತನ್ ವಿರುದ್ಧ ಐಶ್ವರ್ಯ ಸರ್ಜಾ ಮೀಟೂ ಬಾಂಬ್ – ಆಡಿಯೋ ಕೇಳಿ

ನಾನು ಊಟಕ್ಕೆ ಕರೆದಿದ್ದೇನೆ ಎಂದು ಐಶ್ವರ್ಯ ಹೇಳಿದ್ದಾರೆ. ಆದರೆ ನಾನು ಅವರನ್ನು ಊಟಕ್ಕೆ ಕರೆದೇ ಇಲ್ಲ. ಅವರ ತಂದೆ ಅರ್ಜುನ್ ಸರ್ಜಾ ಅವರೇ ಮನೆಗೆ ಊಟಕ್ಕೆ ಬನ್ನಿ ಎಂದು ಕರೆದಿದ್ದರು. ಐಶ್ವರ್ಯ ಅವರ ಈ ರೀತಿಯ ಹೇಳಿಕೆಯಿಂದ ಸರ್ಜಾ ಕುಟುಂಬದ ಘನತೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ಮೀಟೂ ಒಂದು ಸೀರಿಯಸ್ ವಿಷಯ. ಎಲ್ಲಾ ವರ್ಗದಲ್ಲಿ ಮೀಟೂ ದೌರ್ಜನ್ಯವಾಗಿದೆ. ಅದಕ್ಕೆ ನಾನು ಮಹಿಳೆಯರಿಗೆ ನ್ಯಾಯ ಒದಗಿಸಲು ಫೈರ್ ಸಂಸ್ಥೆಯನ್ನು ಕಟ್ಟಿದ್ದು ಎಂದು ಚೇತನ್ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಗೆ ಖಾರವಾಗಿ ತಿರುಗೇಟು ನೀಡಿದರು.

ಐಶ್ವರ್ಯ ಆರೋಪವೇನು?
ನಟ ಚೇತನ್ ನನ್ನನ್ನು ಊಟಕ್ಕೆ ಕರೆದಿದ್ದರು. ಅಲ್ಲದೇ ಪ್ರೇಮ ಬರಹ ಸಿನಿಮಾ ವೇಳೆ ನಟ ಚೇತನ್ ರೊಂದಿಗೆ ಫೋಟೋ ಶೂಟ್, ವರ್ಕ್ ಶಾಪ್ ಮಾಡಲಾಗಿತ್ತು. ಈ ವೇಳೆ ಚೇತನ್ ನನ್ನ ಬೆನ್ನು ಮುಟ್ಟಿದ್ದರು, ಅಲ್ಲದೇ ಊಟಕ್ಕೂ ಕರೆದಿದ್ದರು. ಇದನ್ನು ಲೈಂಗಿಕ ಶೋಷಣೆ ಎಂದು ಕರೆಯಬಹುದುಲ್ಲವೇ ಎಂದು ಪ್ರಶ್ನೆ ಮಾಡಿದ್ದರು.

https://www.youtube.com/watch?v=p-XbtCRr48o

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *