ಸಿನಿಮಾದಲ್ಲಿ ಬಿಕಿನಿ ಧರಿಸಿದ್ದೇನೆ, ಲೀಕ್ ಮಾಡುವ ಅವಶ್ಯಕತೆ ಇಲ್ಲ: ಹನ್ಸಿಕಾ

ಹೈದರಾಬಾದ್: ಟಾಲಿವುಡ್ ನಟಿ ಹನ್ಸಿಕಾ ಮೋಟ್ವಾನಿ ಬಿಕಿನಿಯಲ್ಲಿರುವ ಫೋಟೋ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಬ್ಲಿಸಿಟಿಗಾಗಿ ಹನ್ಸಿಕಾ ಈ ರೀತಿ ಮಾಡಿದ್ದಾರೆ ಎಂಬ ಮಾತುಗಳು ಈಗ ಕೇಳಿ ಬರುತ್ತಿದ್ದು, ಈ ಹೇಳಿಕೆಗೆ ನಟಿ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ಫೋಟೋ ಲೀಕ್ ಆಗಿದ್ದರ ಬಗ್ಗೆ ಮಾತನಾಡಿದ ಹನ್ಸಿಕಾ, “ನಾನು ಅಮೆರಿಕಾದಲ್ಲಿದ್ದಾಗ ನನ್ನ ಮೊಬೈಲಿನಲ್ಲಿ ಕೆಲ ಸಮಸ್ಯೆ ಆಗುತ್ತಿರುವುದನ್ನು ಗಮನಿಸಿದೆ. ಬಳಿಕ ನನ್ನ ಪ್ರೈವೇಟ್ ಫೋಟೋ ಲೀಕ್ ಆಗಿರುವುದನ್ನು ನೋಡಿ ನಾನು ಶಾಕ್ ಆದೆ. ಈ ಫೋಟೋಗಳು ನಾನು ನಾಲ್ಕು ವರ್ಷಗಳ ಹಿಂದೆ ಕ್ಲಿಕ್ಕಿಸಿದೆ. ಆದರೆ ಈ ಫೋಟೋಗಳಲ್ಲಿ ಕೆಲವು ಫೋಟೋಗಳನ್ನು ಹ್ಯಾಕರ್ಸ್ ಎಡಿಟಿಂಗ್ ಮಾಡಿದ್ದಾರೆ. ಆಗ ನನ್ನ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ ಎಂದು ನನಗೆ ತಿಳಿಯಿತು. ಬಳಿಕ ನನ್ನ ತಂಡಕ್ಕೆ ತಕ್ಷಣ ಇದರ ಬಗ್ಗೆ ಮಾಹಿತಿ ನೀಡಿದೆ” ಎಂದು ಹೇಳಿದ್ದಾರೆ.

ನನ್ನ ಪ್ರೈವೇಟ್ ಫೋಟೋ ಲೀಕ್ ಆಗಿದ್ದು ನನಗೆ ತುಂಬಾ ಮುಜುಗರ ಆಯಿತು. ಅಲ್ಲದೇ ಆ ಫೋಟೋಗಳಿಗೆ ಬರುತ್ತಿದ್ದ ಕಮೆಂಟ್ ನೋಡಿ ತುಂಬಾ ಬೇಸರವಾಗುತ್ತಿತ್ತು. ಕೆಲವರು ಸಿನಿಮಾದಲ್ಲಿ ಬಿಕಿನಿ ಧರಿಸುವಾಗ ಆಗದಿರುವ ಮುಜುಗರ ಈಗ ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ. ಮೊದಲಿಗೆ ಲೀಕ್ ಆಗಿರುವ ಫೋಟೋಗಳಲ್ಲಿ ಕೆಲವು ಫೋಟೋಗಳನ್ನು ಎಡಿಟಿಂಗ್ ಮಾಡಿದ್ದಾರೆ. ನಾನು ನನ್ನ ಇಚ್ಛೆಯಿಂದ ಸಿನಿಮಾಗಳಲ್ಲಿ ಬಿಕಿನಿ ಧರಿಸಿದೆ. ಆದರೆ ಇಲ್ಲಿ ನನ್ನ ಅನುಮತಿ ಇಲ್ಲದೇ ಫೋಟೋ ವೈರಲ್ ಆಗುತ್ತಿದೆ ಎಂದು ಹೇಳಿದ್ದಾರೆ. ಇದನ್ನು ಓದಿ: ಹನ್ಸಿಕಾ ಮೊಬೈಲ್ ಹ್ಯಾಕ್- ನಟಿಯ ಪ್ರೈವೇಟ್ ಫೋಟೋ ವೈರಲ್

ಹನ್ಸಿಕಾ ಅವರ ಪ್ರೈವೇಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗುತ್ತಿದ್ದಂತೆ ನನ್ನ ಮೊಬೈಲ್ ಹ್ಯಾಕ್ ಆಗಿದೆ ಎಂದು ಹೇಳಿದ್ದರು. ಹನ್ಸಿಕಾ ತಮ್ಮ ಟ್ವಿಟ್ಟರಿನಲ್ಲಿ, “ನನ್ನ ಫೋನ್ ಹಾಗೂ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ. ದಯವಿಟ್ಟು ಯಾರು ಮೆಸೇಜ್‍ಗಳಿಗೆ ಪ್ರತಿಕ್ರಿಯಿಸಬೇಡಿ. ನನ್ನ ತಂಡ ಇದಕ್ಕಾಗಿ ಕೆಲಸ ಮಾಡುತ್ತಿದೆ. ಎಲ್ಲವು ಸರಿ ಹೋಗುತ್ತದೆ” ಎಂದು ಟ್ವೀಟ್ ಮಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *