‘ಆಯ್ ಆ್ಯಮ್ ಸಾರಿ’ ಮಗನೇ ಪ್ಲೀಸ್ ಮನೆಗೆ ಬಾ..!

ಹಾಸನ: ‘ಆಯ್ ಆ್ಯಮ್ ಸಾರಿ’ ಮಗನೇ ಪ್ಲೀಸ್ ಮನೆಗೆ ವಾಪಸ್ ಬಾರೋ ಅಂತಾ ಮಗನನ್ನು ಕಣ್ಣೀರಿಟ್ಟು ಹಾಸನ ದಂಪತಿ ಕರೆಯುತ್ತಿದ್ದಾರೆ.

ಹೌದು, ಹಾಸನದ ಕುವೆಂಪು ನಗರದ ಜಗದೀಶ್- ವಸಂತಾ ದಂಪತಿ ಪುತ್ರ ಸೋನುಕುಮಾರ್ (21) ಮನೆ ಬಿಟ್ಟು ಹೋಗಿದ್ದು, ಮೂರು ದಿನಗಳು ಕಳೆದರೂ ವಾಪಾಸ್ ಬಂದಿಲ್ಲ. ಹೀಗಾಗಿ ಹೆತ್ತು ಮುದ್ದಾಡಿದ ಜೀವಗಳು ಮಗನ ಬರುವಿಕೆಗಾಗಿ ಪ್ರತಿಕ್ಷಣವೂ ಕಾಯುತ್ತಿದ್ದಾರೆ.

ಏನೇ ತಪ್ಪಿದ್ದರೂ ಕ್ಷಮಿಸಿ ಮನೆಗೆ ಬಂದು ಬಿಡು. ಸಾರಿ ಕನೋ, ನಿಮ್ಮ ಅಮ್ಮ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸರಿಯಾಗಿ ಊಟ, ತಿಂಡಿ ಮಾಡುತ್ತಿಲ್ಲ. ನೀನು ಇಲ್ಲದೆ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ನೀನು ಕೆಲಸ ಮಾಡುವುದು ಬೇಡ. ಎಲ್ಲಿರುವೆ ಅಂತಾ ಒಂದು ಫೋನ್ ಮಾಡಿ ಹೇಳು ಎಂದು ಜಗದೀಶ್ ಕಣ್ಣಿರು ಹಾಕುತ್ತಲೇ ಮಗನಿಗೆ ಮನವಿ ಮಾಡಿಕೊಂಡಿದ್ದಾರೆ.

ಇತ್ತ ತಾಯಿ ವಸಂತಾ ಅವರು ಕೂಡ, ನಿನ್ನ ಮಾತನ್ನೇ ಕೇಳುತ್ತೇವೆ. ಸೋನುಕುಮಾರ್ ಎಲ್ಲಿ ಇದ್ದಿಯಾ ಅಂತಾ ದಯವಿಟ್ಟು ಹೇಳು. ನಿನ್ನ ಬಿಟ್ಟು ಬದುಕುವ ಶಕ್ತಿ ನಮಗಿಲ್ಲ ಎಂದು ಮಗನಿಗೆ ತಿಳಿಸಿದ ಅವರು, ನಾನು ಕೂಲಿ ಮಾಡಿ ಜೀವನ ಮಾಡುತ್ತಿದ್ದೇವೆ. ಮಗನೆ ನಮ್ಮ ಮನೆಯ ಆಸ್ತಿ, ನಮಗಿರುವುದು ಒಬ್ಬನೇ ಮಗ. ನಿಮಗೆ ಕಂಡ ಅವರು ತಕ್ಷಣ ನಮಗೆ ಮಾಹಿತಿ ನೀಡಿ ಅಂತಾ ಪಬ್ಲಿಕ್ ಟಿವಿ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *