ಟೀಂ ಇಂಡಿಯಾ ಪರ ಯಾವುದೇ ಕ್ರಮಾಂಕದಲ್ಲೂ ಆಡಲು ಸಿದ್ಧ: ಕೆಎಲ್ ರಾಹುಲ್

ನವದೆಹಲಿ: ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಸ್ಥಾನ ಪಡೆದಿರುವ ಕನ್ನಡಿಗ ಕೆಎಲ್ ರಾಹುಲ್, ತಂಡದ ಪರ ಯಾವುದೇ ಕ್ರಮಾಂಕದಲ್ಲಿ ಆದ್ರು ಬ್ಯಾಟ್ ಮಾಡಲು ಸಿದ್ಧ ಎಂದು ಹೇಳಿದ್ದಾರೆ.

ಇಂಗ್ಲೆಂಡ್ ಫಿಚ್ ಕಂಡಿಷನ್ ಮೇಲೆ ತಂಡದ ಆಟಗಾರರ ಬ್ಯಾಟಿಂಗ್ ಕ್ರಮಾಂಕವನ್ನು ನಿರ್ಧರಿಸಲಾಗುತ್ತದೆ ಎಂದು ಕೋಚ್ ಈಗಾಗಲೇ ಸೂಚನೆ ನೀಡಿದ್ದಾರೆ. ಆದ್ದರಿಂದ ನಾನು ಯಾವುದೇ ಕ್ರಮಾಂಕದಲ್ಲಿ ಆದ್ರು ಆಡಲು ಸಿದ್ಧವಾಗಿದ್ದೇನೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಇಂಗ್ಲೆಂಡ್ ನಲ್ಲಿ ಎದುರಾಗಬಹುದಾದ ಯಾವುದೇ ಸವಾಲನ್ನು ಎದುರಿಸಲು ನಾನು ಸಿದ್ಧ. ತಂಡ ಕೈಗೊಂಡಿರುವ ನಿರ್ಧಾರಕ್ಕೆ ಪೂರಕವಾಗಿ ಆಡುತ್ತೇನೆ. ಭಾರತ ‘ಎ’ ತಂಡದ ಪರ ಆಡಿರುವ ಅನುಭವ ನನ್ನಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿದೆ. ಅಲ್ಲದೇ ಐಪಿಎಲ್ ಕೂಡ ತಮ್ಮ ವಿಶ್ವಕಪ್ ತಯಾರಿಗೆ ಸಹಕಾರಿ ಆಗಿದೆ ಎಂದಿದ್ದಾರೆ.

27 ವರ್ಷದ ಕೆಎಲ್ ರಾಹುಲ್ ಉತ್ತಮ ಫಾರ್ಮ್ ನಲ್ಲಿ ಇದ್ದು, ಐಪಿಎಲ್ ನಲ್ಲೂ 593 ರನ್ (ಶತಕ, 6 ಅರ್ಧ ಶತಕ) ಗಳಿಸಿದ್ದರು. ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರು ರಾಹುಲ್‍ರನ್ನು ವಿಶ್ವಕಪ್ ಆಯ್ಕೆ ಮಾಡಿದ್ದರ ಬಗ್ಗೆ ಸಮರ್ಥನೆ ನೀಡಿ, ನಾವು 2ನೇ ಓಪನರ್ ಅವಕಾಶವನ್ನು ತೆರಲು ಸಿದ್ಧರಿಲ್ಲ ಎಂದಿದ್ದರು. ಪರಿಣಾಮ ರಾಹುಲ್ ಮೀಸಲು ಆರಂಭಿಕರಾಗಿ ವಿಶ್ವಕಪ್‍ಗೆ ಆಯ್ಕೆ ಆಗಿದ್ದರು. ತಂಡದಲ್ಲಿ ಸದ್ಯ 4ನೇ ಕ್ರಮಾಂಕದಲ್ಲಿ ಆಡುವ ಆಟಗಾರನ ಆಯ್ಕೆ ಬಗ್ಗೆ ಚರ್ಚೆ ನಡೆದಿದ್ದು, ಟೀಂ ಇಂಡಿಯಾ ಆಟಗಾರ ಹರ್ಭಜನ್ ಸಿಂಗ್ ಕೂಡ ನಂ.4 ಆಟಗಾರರಾಗಿ ವಿಜಯ್ ಶಂಕರ್ ಬದಲು ಕೆಎಲ್ ರಾಹುಲ್ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

Comments

Leave a Reply

Your email address will not be published. Required fields are marked *