ಜೀವನದಲ್ಲಿ ಯಾರಿಗೂ ಭಯ ಪಡಲ್ಲ, ನಾನು ಹುಲಿ ವಂಶದಲ್ಲಿ ಹುಟ್ಟಿದವನು: ರಮಾನಾಥ ರೈ

– ಅನಾಮಿಕ ವ್ಯಕ್ತಿಯಿಂದ ಸಚಿವರಿಗೆ ಬೆದರಿಕೆ ಕರೆ

ಬೆಂಗಳೂರು: ನನ್ನ ಜೀವನದಲ್ಲಿ ನಾನು ಯಾರಿಗೂ ಭಯ ಬಿಳೋಲ್ಲ. ಹುಲಿ, ಸಿಂಹ ವಂಶದಲ್ಲಿ ಹುಟ್ಟಿದವನು ನಾನು ಅಂತಾ ಅರಣ್ಯ ಸಚಿವ ರಮಾನಾಥ ರೈ ಆರ್‍ಎಸ್‍ಎಸ್ ಮುಖಂಡ ಪ್ರಭಾಕರ್ ಭಟ್‍ಗೆ ಚಾಲೆಂಜ್ ಹಾಕಿದ್ದಾರೆ.

ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಮಾತನಾಡಿರೋ ವಿಡಿಯೋವೊಂದನ್ನು ಮಾಧ್ಯಮದವರು ಪ್ರಸಾರ ಮಾಡಿದ್ದರ ವಿರುದ್ಧ ಕಿಡಿಕಾರಿದ ರೈ, ಕಲ್ಲಡ್ಕ ಪ್ರಭಾಕರ್‍ನನ್ನ ಅರೆಸ್ಟ್ ಮಾಡುತ್ತೇವೆ ಅಂದಿದ್ದನ್ನ ಮಾಧ್ಯಮದವರು ಸುದ್ದಿ ಮಾಡ್ತೀರಾ. ಅ ಒಂದು ಮಾತನ್ನ ಮಾಧ್ಯಮಗಳು ಹೆಚ್ಚು ಸುದ್ದಿ ಮಾಡ್ತೀರಿ ಅಂತಾ ಗರಂ ಆಗಿದ್ದಾರೆ.

ಪ್ರಭಾಕರ್ ಕೋಮು ಸಂಘರ್ಷಕ್ಕೆ ಅಮಾಯಕರನ್ನ ಬಲಿ ತೆಗೆದುಕೊಳ್ತಿದ್ದಾನೆ. ಅವನ ಅಕ್ಕ, ಅಣ್ಣ, ತಮ್ಮ ಯಾರನ್ನ ಇದಕ್ಕೆ ಬಳಸಿಕೊಂಡಿಲ್ಲ. ಅವರ ಕುಟುಂಬದವರು ಒಬ್ಬರು ಇದ್ರೆ ನಾನು ರಾಜಕೀಯ ದಿಂದ ಹೊರಗೆ ಬರ್ತೀನಿ ಅಂತಾ ಕಲ್ಲಡ್ಕ ಪ್ರಭಾಕರ್ ಭಟ್ ಗೆ ರಮಾನಾಥ್ ರೈ ಸವಾಲು ಹಾಕಿದ್ದಾರೆ.

ಕೊಲೆಗಾರರನ್ನ ರಕ್ಷಣೆ ಮಾಡ್ತಿರೋದು, ಹಿಂದೂ ಮುಸ್ಲಿಂ ನಡುವೆ ಗಲಾಟೆ ತಂದಿಡೋದೆ ಕಲ್ಲಡ್ಕ ಪ್ರಭಾಕರ್ ಭಟ್. ಕಲ್ಲಡ್ಕ ಪ್ರಭಾಕರ್ ಪುಕ್ಕಲ. ನನ್ನ ಮಾತಿಗೆ ನಾನು ಬದ್ದನಾಗಿದ್ದೇನೆ. ನನ್ನ ಹೇಳಿಕೆ ವಾಪಸ್ ತೆಗೆದುಕೊಳ್ಳೊಲ್ಲ. ನಾನು ಹಿಂದೂ ಮತೀಯವಾದ, ಮುಸ್ಲಿಂ ಮತೀಯವಾದ ಎರಡನ್ನೂ ವಿರೋಧ ಮಾಡ್ತೀನಿ. ಅಮಾಯಕ ಕುಟುಂಬಗಳನ್ನ ತನ್ನ ಬೆಳೆ ಬೇಯಿಸಿಕೊಳ್ಳಲು ಬಲಿ ಕೊಡೋಡು ಪ್ರಭಾಕರ್ ಭಟ್. ಬಿಜೆಪಿ ಪ್ರತಿಭಟನೆ ಮಾಡಿದ್ರೆ ಮಾಡಲಿ ಆಗ ನಾನು ನೋಡಿಕೊಳ್ತಿನಿ. ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ ಎಂದಿದ್ದಾರೆ.

ಬೆದರಿಕೆ: ಸಚಿವ ರಮಾನಾಥ್ ರೈ ಅವರಿಗೆ ಕಿಡಿಗೇಡಿಗಳು ಫೋನ್ ಮೂಲಕ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಹಾಕಿದ ಅನಾಮಿಕ ವ್ಯಕ್ತಿ ತುಳು ಮಾತನಾಡುತ್ತಿದ್ದನು ಎಂದು ಹೇಳಲಾಗಿದೆ. ಮುಂಬೈನಿಂದ ಮಾತನಾಡುತ್ತಿದ್ದೇನೆ ಎಂದು ರಮಾನಾಥ್ ರೈಗೆ ಅವಾಜ್ ಹಾಕಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ. ಖಾದರ್ ಅವ್ರು ಚಪ್ಪಲಿಯಲ್ಲಿ ಹೊಡೀತಿವಿ ಅಂತಾರೆ, ನೀವು ಕೇಸ್ ಹಾಕಿ ಅಂತೀರಾ? ಮುಸ್ಲಿಮರ ವೋಟು ಗಿಟ್ಟಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದೀರಾ? ಮುಂದಿನ ಚುನಾವಣೆಯಲ್ಲಿ ಯಾರು ಗೆಲ್ತಾರೆ, ಯಾರು ಸೋಲ್ತಾರೆ ನೋಡ್ತಿರಿ. ಪ್ರಭಾಕರ್ ಭಟ್ ನಮ್ಮ ಶಕ್ತಿ, ಅವರನ್ನ ಜೈಲಿಗೆ ಹಾಕಿಸೋಕೆ ಅವರೇನು ಟೆರರಿಸ್ಟಾ? ಪ್ರಭಾಕರ್ ಭಟ್‍ರನ್ನ ಮುಟ್ಟಿದ್ರೆ ಹಿಂದೂ ಸಮಾಜವೇ ಎದ್ದು ನಿಲ್ಲುತ್ತೆ ನೆನಪಿಡಿ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *