– ದೇವೇಗೌಡರೇ ನನ್ನ ರಾಜಕೀಯ ಗುರುಗಳು
ಹಾವೇರಿ: ನಾನು ರಾಜಕೀಯಕ್ಕೆ ಬರಲು ಕಾರಣ ಮುಸ್ಲಿಂ ಗುರುಗಳಲ್ಲ. ಒಕ್ಕಲಿಗರ ಸ್ವಾಮೀಜಿ ಎಂದು ಹೇಳಿವ ಮೂಲಕ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಬಿಜೆಪಿಗರಿಗೆ ಟಾಂಗ್ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಜಾತಿಯವರ ಪರ ಇರೋ ಪಕ್ಷ ಅಂದರೆ ಅದು ಕಾಂಗ್ರೆಸ್ ಪಕ್ಷ. ನಾನು ಒಕ್ಕಲಿಗರ ಬಗ್ಗೆ ಏನು ಮಾತಾಡಿದ್ದೇನೆ.?, ನಾನು ರಾಜಕೀಯಕ್ಕೆ ಬರೋಕೆ ಕಾರಣವೆ ಒಕ್ಕಲಿಗರು. ನಾನು ಬೆಳಗ್ಗೆಯಿಂದ ಸಂಜೆಯವರೆಗೆ ಆದಿಚುಂಚನಗಿರಿ ಮಠದಲ್ಲೇ ಬೆಳೆದಿರೋದು. ನಾನು ರಾಜಕೀಯಕ್ಕೆ ಬರಲು ಕಾರಣ ಆದಿಚುಂಚನಗಿರಿ ಮಠದ ಸ್ವಾಮೀಜಿ. ಸ್ವಾಮೀಜಿ ದಾರಿ ತೋರಿಸಿದರು ಎಂದರು. ಇದನ್ನೂ ಓದಿ: ಚುನಾವಣೆ ವರ್ಷ ಇದು, ಏನೇ ಮಾಡಿದರೂ ಪಕ್ಷಕ್ಕೆ ಲಾಭ: ಕೆ.ಎನ್ ರಾಜಣ್ಣ

ನಾನು ಆದಿಚುಂಚನಗಿರಿ ಮಠದ ಸ್ವಾಮೀಜಿಗಳ ಶಿಷ್ಯ. ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ನನ್ನ ಗುರುಗಳು. ನಾನು ಮಠಕ್ಕೆ ಹೋಗೋದು ತಡವಾದರೆ ಸ್ವಾಮೀಜಿ ಎಲ್ಲಿದ್ದೀಯಾ ಜಮೀರ್ ಅಂತಾ ಫೋನ್ ಮಾಡುತ್ತಿದ್ದರು. ಸ್ವಾಮೀಜಿಗಳ ಆದೇಶದ ಮೇರೆಗೆ ನಾನು ಜನತಾದಳಕ್ಕೆ ಹೋಗಿದ್ದು. ವಿಜಯನಗರ, ಚುಂಚನಗಿರಿ ಮಠದಲ್ಲಿ ಕೇಳಿ ನನ್ನ ಸ್ವಾಮೀಜಿಗಳ ಸಂಬಂಧ ಏನು ಅಂತಾ ಹೇಳ್ತಾರೆ. ದೇವೇಗೌಡರೇ ನನ್ನ ರಾಜಕೀಯ ಗುರುಗಳು. 2005ರಲ್ಲಿ ನನ್ನ ಗೆಲ್ಲಿಸಿರೋದು ದೇವೇಗೌಡರು. ನಾನು ಈ ಮಟ್ಟಕ್ಕೆ ಬೆಳೆದಿದ್ದು ದೇವೇಗೌಡರಿಂದ ಎಂದು ಹೇಳಿದರು.

ಆರ್.ಅಶೋಕ್ ಅವರದ್ದು ನಾನು ಬಿಡಿಸಿ ಹೇಳಲಾ…? ಅಶೋಕ್ ಅವರಿಗೆ ಸಿಎಂ ಆಗೋ ಆಸೆ ಇಲ್ವಾ.? ಅಶೋಶ್, ಸಿ.ಟಿ.ರವಿಗೆ ಆಸೆ ಇಲ್ವಾ.? ಅವರವರಲ್ಲೆ ಕಾಂಫಿಟೇಶನ್ ಇದೆ. ಇದೇ ವೇಳೆ ಸಿ.ಟಿ.ರವಿ ಹೇಳಿಕೆಗೆ ತಿರುಗೇಟು ನೀಡಿದ ಜಮೀರ್, ಬಿಜೆಪಿಯವರು ದೇಶವನ್ನು ಹಾಳು ಮಾಡ್ತಿದ್ದಾರೆ. ಈ ರೀತಿ ಮಾಡಿ ಅಧಿಕಾರಕ್ಕೆ ಬರುತ್ತಾರೆ. ಸಿ.ಟಿ.ರವಿಯವರಿಗೆ ಹೇಳಿಕೊಳ್ಳಲು ವಿಷಯಗಳಿಲ್ಲ. ಕಾಂಗ್ರೆಸ್ ಕಾರ್ಯಕ್ರಮ ತೋರಿಸಿ ಮತ ಕೇಳ್ತೇವೆ. ಸಿ.ಟಿ.ರವಿಯವರಿಗೆ ಹಿಂದೂ, ಮುಸಲ್ಮಾನ ಯಾರೂ ಬೇಕಾಗಿಲ್ಲ. ಅವರಿಗೆ ಬೇಕಿರೋದು ಖುರ್ಚಿ ಮತ್ತು ಅಧಿಕಾರ ಎಂಉದ ವಾಗ್ದಾಳಿ ನಡೆಸಿದರು.

Leave a Reply