ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾಡಿರುವ ಟ್ವಿಟ್ ವಾಪಸ್ಸು ಅವರ ಬುಡಕ್ಕೆ ಬಂದಿದೆ. ನಿರ್ದೇಶಕ ರಾಜಮೌಳಿ ಅವರನ್ನು ಕಾಲೆಳೆಯಲು ಹೋಗಿ, ಅಭಿಮಾನಿಗಳಿಂದ ತಾವೇ ಕಾಲೆಳಿಸಿಕೊಂಡಿದ್ದಾರೆ ವರ್ಮಾ. ಇದನ್ನೂ ಓದಿ:  ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್

ರಾಜಮೌಳಿ, ಜೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಮೂವರು ಇರುವ ಫೋಟೋವೊಂದನ್ನು ಹಾಕಿ, ‘ರಾಜಮೌಳಿ ಸರ್, ನಿಮ್ಮೊಂದಿಗೆ ಇಬ್ಬರು ಡೇಂಜರ್ಸ ಗಂಡಸರಿದ್ದರೆ, ನನ್ನ ಹತ್ತಿರ ಡೇಂಜರ್ಸ್ ಹುಡುಗಿಯರು ಇದ್ದಾರೆ’ ಎಂದು ಬರೆದು ಟ್ವಿಟ್ ಮಾಡಿದ್ದಾರೆ. ಆ ಹುಡುಗಿಯರು ಯಾರು ಎನ್ನುವುದನ್ನೂ ಬಹಿರಂಗ ಪಡಿಸಿದ್ದಾರೆ.  ಇದನ್ನೂ ಓದಿ: ಆರ್.ಆರ್.ಆರ್ ನಿಖರ ಗಳಿಕೆ 611 ರೂ.ಕೋಟಿ: ವಾರಾಂತ್ಯಕ್ಕೆ ಸಾವಿರ ಕೋಟಿ ನಿರೀಕ್ಷೆ

ಸದ್ಯ ರಾಮ್ ಗೋಪಾಲ್ ವರ್ಮಾ ‘ಖತ್ರಾ ಡೇಂಜರಸ್’ ಎನ್ನುವ ಸಿನಿಮಾ ಮಾಡಿದ್ದಾರೆ. ಅದು ಭಾರತೀಯ ಸಿನಿಮಾ ರಂಗದಲ್ಲಿ ಬರುತ್ತಿರುವ ಮೊದಲ ಲೆಸ್ಬಿಯನ್ ಚಿತ್ರ. ನೈನಾ ಮತ್ತು ಅಪ್ಸರಾ ಲೆಸ್ಬಿಯನ್ ಗಳಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇವರನ್ನೇ ವರ್ಮಾ ಡೇಂಜರಸ್ ಹುಡುಗಿಯರು ಎಂದು ಹೇಳಿಕೊಂಡಿದ್ದಾರೆ. ಮುಂದಿನ ತಿಂಗಳು ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕಾಗಿ ವರ್ಮಾ ಬೆಂಗಳೂರಿಗೆ ಕೂಡ ಬಂದಿದ್ದರು.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಸಿನಿಮಾದ ಕುರಿತಾಗಿ ಸಾಕಷ್ಟು ಪೋಸ್ಟ್ ಮಾಡಿದ್ದಾರೆ ವರ್ಮಾ. ಅದಕ್ಕೂ ಮುನ್ನ ಈ ಕಲಾವಿದೆಯರ ಜತೆ ಪಬ್, ಹೊಟೇಲ್ ಅಂತ ಸುತ್ತಾಡಿ ಸುದ್ದಿ ಆಗಿದ್ದರು. ಅಲ್ಲದೇ, ಈ ಹುಡುಗಿಯರ ಹಾಟ್ ಹಾಟ್ ಫೋಟೋಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಪಡ್ಡೆಗಳ ನಿದ್ದೆ ಗೆಡಿಸಿದ್ದರು.

ರಾಮ್ ಗೋಪಾಲ್ ವರ್ಮಾ ಅವರ ಟ್ವಿಟ್ ಅನ್ನು ರಾಜಮೌಳಿ, ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜಾ ಅವರಿಗೆ ಟ್ಯಾಗ್ ಮಾಡಿದ್ದಾರೆ. ಅಲ್ಲದೇ ತಮ್ಮ ಹುಡುಗಿಯರಿಗೂ ಟ್ಯಾಗ್ ಮಾಡಿದ್ದಾರೆ. ಯಾರೂ, ಅಷ್ಟಾಗಿ ವರ್ಮಾ ಅವರ ಟ್ವಿಟ್ ಗೆ ತಲೆಕೆಡಿಸಿಕೊಂಡಿಲ್ಲ. ಆದರೆ, ರಾಜಮೌಳಿ ಮತ್ತು ಇತರ ಕಲಾವಿದರ ಅಭಿಮಾನಿಗಳು ಮಾತ್ರ ವರ್ಮಾ ಮೇಲೆ ರೊಚ್ಚಿಗೆದ್ದಿದ್ದಾರೆ. ‘ನೀನು 100 ರೂಪಾಯಿ ಟಿಕೆಟ್ ನ ಸಿನಿಮಾ ಮಾಡುವವನು. ದೊಡ್ಡವರಿಗೆ ಹೋಲಿಸಿಕೊಳ್ಳಬೇಡ’ ಎನ್ನುವಷ್ಟರ ಮಟ್ಟಿಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *