ಕೊಲೆಗೈದ ಮೇಲೂ ಪಶುವೈದ್ಯೆ ಮೇಲೆ ಅತ್ಯಾಚಾರವೆಸೆಗಿದ ರಾಕ್ಷಸರು

-ಲಾರಿ ಕ್ಯಾಬಿನ್‍ನಲ್ಲೇ ರೇಪ್

ಹೈದರಾಬಾದ್: ತೆಲಂಗಾಣ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಉಸಿರುಗಟ್ಟಿಸಿ ಕೊಂದ ಮೇಲೂ ಪಾಪಿಗಳು ಶವವನ್ನೂ ಬಿಡದೆ ಅತ್ಯಾಚಾರಗೈದಿದ್ದರು ಎನ್ನುವ ಸತ್ಯ ಬಯಲಾಗಿದೆ.

ದಿನ ಕಳೆದಂತೆ ಆರೋಪಿಗಳು ಪೊಲೀಸರ ಬಳಿ ಪಶುವೈದ್ಯೆಗೆ ಯಾವ ರೀತಿಯಲ್ಲೆಲ್ಲ ಹಿಂಸೆಕೊಟ್ಟು ಕೊಲೆ ಮಾಡಲಾಯ್ತು ಎನ್ನುವ ಸತ್ಯವನ್ನು ಬಾಯಿಬಿಡುತ್ತಿದ್ದಾರೆ. ವೈದ್ಯೆಯ ಮೇಲೆ ಅವರು ಎಷ್ಟರ ಮಟ್ಟಿಗೆ ವಿಕೃತಿ ಮೆರೆದಿದ್ದಾರೆ ಎಂದರೆ ಆಕೆಯನ್ನು ಕೊಲೆ ಮಾಡಿದ ಬಳಿಕವೂ ಶವವನ್ನು ಬಿಡದೇ ಅತ್ಯಾಚಾರಗೈದಿದ್ದಾರೆ. ಇದನ್ನೂ ಓದಿ: ವೈದ್ಯೆಗೆ ಕೂಲ್ ಡ್ರಿಂಕ್ಸ್‌ನಲ್ಲಿ ವಿಸ್ಕಿ ಕುಡಿಸಿ ಅತ್ಯಾಚಾರಗೈದ ಪಾಪಿಗಳು

26 ವರ್ಷದ ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮಹ್ಮದ್ ಪಾಷಾ, ಮೂವರು ಕ್ಲೀನರ್ ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳನ್ನು 14 ದಿನಗಳ ಕಾಲ ರಿಮ್ಯಾಂಡ್‍ನಲ್ಲಿ ಇರಿಸುವಂತೆ ಕೋರ್ಟ್ ಆದೇಶಿಸಿದೆ. ಇದನ್ನೂ ಓದಿ: ಪಶುವೈದ್ಯೆಯನ್ನು ಕೊಂದಂತೆ ನನ್ನ ಮಗನನ್ನು ಕೊಲ್ಲಿ – ಸಿಡಿದೆದ್ದ ಅತ್ಯಾಚಾರಿಯ ತಾಯಿ

ಸದ್ಯ ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದು, ಹೇಗೆಲ್ಲಾ ಸಂತ್ರಸ್ತೆಯನ್ನು ಕಾಮುಕರು ಕೊಂದರು ಎಂಬುದು ಬಯಲಾಗುತ್ತಿದೆ. ಆರೋಪಿಗಳು ಲಾರಿಯ ಕ್ಯಾಬಿನ್‍ನಲ್ಲಿ ಪಶುವೈದ್ಯೆಯನ್ನು ಒಬ್ಬರಾದ ಮೇಲೋಬ್ಬರು ಅತ್ಯಾಚಾರಗೈದರು. ಬಳಿಕ ಆರೋಪಿ ಶಿವಾ ಸಂತ್ರಸ್ತೆಯ ಸ್ಕೂಟಿಯ ಪಂಕ್ಚರ್ ಆಗಿದ್ದ ಟಯರ್ ಗೆ ಗಾಳಿ ಹಾಕಿಸಿಕೊಂಡು ಬರಲು ಹೋಗಿದ್ದನು. ಆತ ವಾಪಸ್ ಬರುವಷ್ಟರಲ್ಲಿ ಉಳಿದ ಆರೋಪಿಗಳು ಅತ್ಯಾಚಾರ ಮಾಡಿ ಸಂತ್ರಸ್ತೆಯ ಬಾಯಿ, ಮೂಗು ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಇದನ್ನೂ ಓದಿ: ಪಶುವೈದ್ಯೆ ರೇಪ್, ಕೊಲೆ ಪ್ರಕರಣ- ನಿರ್ಲಕ್ಷ್ಯ ತೋರಿದ ಮೂವರು ಪೊಲೀಸರ ಅಮಾನತು

ಆದರೂ ಬಿಡದ ಶಿವಾ ಸಂತ್ರಸ್ತೆಯ ಶವದ ಮೇಲೆಯೇ ಅತ್ಯಾಚಾರಗೈದನು. ಬಳಿಕ ಮೃತದೇಹವನ್ನು ಬೆಡ್ ಶೀಟ್‍ನಲ್ಲಿ ಸುತ್ತಿ, ಜನಗಳು ಓಡಾಡದ ಸ್ಥಳದಲ್ಲಿ ಸೇತುವೆ ಬಳಿ ಮೃತದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟಿ ಹಾಕಿದರು ಎನ್ನುವ ಸತ್ಯವನ್ನು ಆರೋಪಿಗಳು ಪೊಲೀಸರ ಎದುರು ಬಾಯಿ ಬಿಟ್ಟಿದ್ದಾರೆ.

ಪೆಟ್ರೋಲ್ ಬಂಕ್ ಸಿಬ್ಬಂದಿಯಿಂದ ಸುಳಿವು:
ಮಾಧ್ಯಮಗಳಲ್ಲಿ ಪಶುವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ನೋಡಿದಾಗ ಪೆಟ್ರೋಲ್ ಬಂಕ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ, ಈ ಘಟನೆ ನಡೆದ ರಾತ್ರಿ ಇಬ್ಬರು ವ್ಯಕ್ತಿಗಳು ಬಂಕ್‍ನಲ್ಲಿ ಲೂಸ್ ಪೆಟ್ರೋಲ್ ಖರೀದಿಸಲು ಬಂದಿದ್ದರು ಎಂದು ತಿಳಿಸಿದ್ದರು. ಅಲ್ಲದೆ ಆ ವ್ಯಕ್ತಿಗಳನ್ನು ನಾನು ಗುರುತಿಸಬಲ್ಲೆ, ಅವರ ಅನುಮಾನಾಸ್ಪದ ನಡವಳಿಕೆ ನೋಡಿ ನಾನು ಅವರ ಮುಖವನ್ನು ಹಾಗೂ ಸ್ಕೂಟಿ ನಂಬರ್ ಅನ್ನು ನೆನಪಿಟ್ಟುಕೊಂಡಿದ್ದೆ ಎಂದು ಸಿಬ್ಬಂದಿ ಹೇಳಿದ್ದರು. ಇದನ್ನೂ ಓದಿ: ಪಶುವೈದ್ಯೆಯನ್ನ ಗ್ಯಾಂಗ್‍ರೇಪ್ ಮಾಡಿ, ಕೊಲೆ – 25 ಕಿ.ಮೀ ದೂರ ಶವವೊಯ್ದು ಸುಟ್ಟರು

ಪೆಟ್ರೋಲ್ ಖರೀದಿಸಲು ಆರೋಪಿಗಳು ಸ್ಕೂಟಿಯಲ್ಲಿ ಪೆಟ್ರೋಲ್ ಬಂಕ್ ಬಳಿ ಬಂದಿದ್ದರು. ಈ ವೇಳೆ ಆರೋಪಿಗಳ ವರ್ತನೆ ನೋಡಿ ಅನುಮಾನ ಬಂದಿತ್ತು. ಅಲ್ಲದೆ ಆರೋಪಿಗಳು ಪ್ಲಾಸ್ಟಿಕ್ ಬಾಟಲಿಯಲ್ಲಿ ಪೆಟ್ರೋಲ್ ತುಂಬಿ ಕೊಡುವಂತೆ ಹೇಳಿದಾಗ ನಾನು ನಿರಾಕರಿಸಿದ್ದೆ ಎಂದು ಸಿಬ್ಬಂದಿ ತಿಳಿಸಿದ್ದರು.

ಸಿಬ್ಬಂದಿ ಕೊಟ್ಟ ಮಾಹಿತಿ ಬಳಿಕ ಪೊಲೀಸರು ಪೆಟ್ರೋಲ್ ಬಂಕ್ ಬಳಿ ಹೋಗಿ ವಿಚಾರಿಸಿದಾಗ, ಪ್ರಕರಣ ನಡೆದ ರಾತ್ರಿ ಬಂಕ್‍ನಿಂದ ಪೆಟ್ರೋಲ್ ತೆಗೆದುಕೊಂಡು ಹೋಗಲು ಬಂದವರೇ ಆರೋಪಿಗಳು ಎನ್ನುವುದು ತಿಳಿದುಬಂದಿತ್ತು. ಈ ಮಾಹಿತಿಯಿಂದಲೇ ಆರೋಪಿಗಳನ್ನು ಪೊಲೀಸರು ಬಂಧಿಸಲು ಸಹಾಯವಾಯ್ತು.

Comments

Leave a Reply

Your email address will not be published. Required fields are marked *