ಹೈದರಾಬಾದ್‍ನಲ್ಲಿ ಗ್ಯಾಂಗ್‌ರೇಪ್ ಬೆನ್ನಲ್ಲೆ ಮತ್ತೆರಡು ಅಪ್ರಾಪ್ತೆಯರ ಮೇಲೆ ಅತ್ಯಾಚಾರ

RAPE

ಹೈದರಾಬಾದ್: ಹೈದರಾಬಾದ್‍ನಲ್ಲಿ ನಡೆದ ಗ್ಯಾಂಗ್ ರೇಪ್ ನಗರವನ್ನೆ ತಲ್ಲಣಗೊಳಿಸಿದೆ. ಇದರ ಬೆನ್ನಲ್ಲೆ ಮತ್ತೆರಡು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆದಿರುವುದು ನಗರವನ್ನೆ ಬೆಚ್ಚಿಬಿಳಿಸಿದೆ.

ಒಂದು ಪ್ರಕರಣದಲ್ಲಿ, ಹೈದರಾಬಾದ್‍ನ ಹೊರವಲಯದಲ್ಲಿರುವ ರಂಗಾರೆಡ್ಡಿ ಜಿಲ್ಲೆಯ ಕೊಂಡೂರ್ಗ್ ಗ್ರಾಮದ ಕ್ಯಾಬ್ ಚಾಲಕನೊಬ್ಬ ತನ್ನ ಮನೆಗೆ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದು ನಂತರ ಸ್ನೇಹಿತನ ಜೊತೆ ಸೇರಿ ಅತ್ಯಾಚಾರ ಎಸಗಿದ್ದಾರೆ. ಕ್ಯಾಬ್ ಚಾಲಕ ಶೇಕ್ ಕಲೀಂ ಅಲಿ (36) ತನ್ನ ಸ್ನೇಹಿತ ಲುಕ್ಮಾನ್ ಅಹಮದ್ ಯಜ್ದಾನಿ (36) ಬಂಧಿತ ಆರೋಪಿ.

ಬಾಲಕಿಯೊಬ್ಬಳು ಚಿಕ್ಕಮ್ಮನ ಮನೆಯಿಂದ ತನ್ನ ಮನೆಗೆ ನಡೆದುಕೊಂಡು ಹೋಗುವಾಗ ಅಲ್ಲಿಯೇ ಬರುತ್ತಿದ್ದ ಕ್ಯಾಬ್ ಚಾಲಕ ಡ್ರಾಪ್ ನೀಡುವುದಾಗಿ ಹೇಳಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಆತ ಹಾಗೂ ಆತನ ಸ್ನೇಹಿತರು ಸೇರಿ ಆಕೆಯ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ಸುಲ್ತಾನ್ ಶಾಹಿ ಪ್ರದೇಶದಲ್ಲಿ ನಡುರಾತ್ರಿ ಬಿಟ್ಟು ಹೋಗಿದ್ದರು.

ಈ ಸಂಬಂಧ ಆಕೆಯ ಚಿಕ್ಕಮ್ಮ ಬಾಲಕಿ ನಾಪತ್ತೆ ಆಗಿದ್ದಾಳೆ ಎಂದು ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಪೊಲೀಸರು ಹುಡುಕುವಾಗ ಬಾಲಕಿ ಪತ್ತೆಯಾಗಿದ್ದಾಳೆ. ಈ ಸಂಬಂಧ ಬಾಲಕಿಯು ಪೊಲೀಸರಿಗೆ ನಡೆದ ಘಟನೆಯನ್ನು ತಿಳಿಸಿದ್ದು, ಕ್ಯಾಬ್ ಚಾಲಕ ಹಾಗೂ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಗೋ ಕಳ್ಳತನದಲ್ಲಿ ಬಂಧಿತನಾದವನಿಗೆ ಕಸ್ಟಡಿಯಲ್ಲಿ ಕರೆಂಟ್ ಶಾಕ್, ಚಿತ್ರಹಿಂಸೆ – ಐವರು ಪೊಲೀಸರ ಅಮಾನತು

ಮತ್ತೊಂದು ಪ್ರಕರಣದಲ್ಲಿ ಮೊಹಮ್ಮದ್ ಸುಫಿಯಾನ್ (21) ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈತ ಚಾರ್ಮಿನಾರ್ ಬಳಿಯ ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ಪರ್ಸನ್ ಆಗಿ ಕೆಲಸ ಮಾಡುತ್ತಿದ್ದ. ಬಾಲಕಿ ಮನೆಗೆ ಹಿಂದಿರುಗುತ್ತಿದ್ದಾಗ ಆರೋಪಿಗಳು ಆಕೆಗೆ ತಿಂಡಿ ಆಮಿಷವೊಡ್ಡಿದ್ದಾನೆ. ಈ ಹಿನ್ನೆಲೆಯಲ್ಲಿ ಲಂಗರ್ ಹೌಜ್ ಪ್ರದೇಶದಲ್ಲಿನ ತನ್ನ ಮನೆಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಮರುದಿನ ಅವನು ಅವಳನ್ನು ಅಂಗಡಿ ಬಳಿ ಬಿಟ್ಟಿದ್ದಾನೆ. ಇದನ್ನೂ ಓದಿ: ಮಸೀದಿ ಆಯ್ತು ಈಗ ಈದ್ಗಾ ಮೈದಾನ – ಏನಿದು ವಿವಾದ? ಹಿಂದೂಗಳ ವಾದವೇನು? ಬಿಬಿಎಂಪಿ ದಾಖಲೆಯಲ್ಲಿ ಏನಿದೆ?

ಬಾಲಕಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದನ್ನು ನೋಡಿದ ಆಕೆಯ ತಾಯಿಯನ್ನು ವಿಚಾರಿಸಿದಾಗ ನಡೆದ ಘಟನೆಯನ್ನೆಲ್ಲಾ ಬಹಿರಂಗ ಪಡಿಸಿದ್ದಾಳೆ. ಸಂತ್ರಸ್ತೆಯ ತಾಯಿ ಕಾಲಾಪತ್ತರ್ ಪೊಲೀಸ್ ಠಾಣೆಗೆ ಬಂದು ಮೊಹಮ್ಮದ್ ಸುಫಿಯಾನ್ ವಿರುದ್ಧ ದೂರು ದಾಖಲಿಸಿದ್ದಾರೆ.

Comments

Leave a Reply

Your email address will not be published. Required fields are marked *