ಪತಿಯ ಅಕ್ರಮ ಸಂಬಂಧ- ಮಕ್ಕಳ ಜೊತೆ ಪತ್ನಿ ಆತ್ಮಹತ್ಯೆ

ಮೈಸೂರು: ಮಕ್ಕಳ ಜೊತೆ ಮಹಿಳೆಯು ನೇಣಿಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ರಾಮೇಗೌಡನಪುರ ಗ್ರಾಮದಲ್ಲಿ ನಡೆದಿದೆ.

ಸರೋಜ (32) ಆತ್ಮಹತ್ಯೆಗೆ ಶರಣಾಗಿರುವ ಗೃಹಿಣಿ. ಗೀತಾ (6), ಕುಸುಮ (4) ಮೃತ ಮಕ್ಕಳು. ಕುಟುಂಬ ಕಲಹದ ಹಿನ್ನೆಲೆಯಲ್ಲಿ ನೇಣು ಬಿಗಿದುಕೊಂಡು ಸರೋಜ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರೋಜ ನರಸೀಪುರ ತಾಲೂಕಿನ ಮಾವಿನಹಳ್ಳಿ ಗ್ರಾಮದ ನಿಂಗರಾಜು ಜೊತೆ ವಿವಾಹವಾಗಿದ್ದರು. ಆದರೆ ಗಂಡ ನಿಂಗರಾಜುಗೆ ಅಕ್ರಮ ಸಂಬಂಧ ಇರುವ ವಿಷಯಕ್ಕೆ ಪದೇ ಪದೇ ಗಲಾಟೆ ಆಗುತ್ತಿತ್ತು. ಇದನ್ನೂ ಓದಿ: ಮುಂಬೈನಲ್ಲಿ ಕಟ್ಟಡ ಕುಸಿತ – ಓರ್ವ ಸಾವು, 11 ಮಂದಿಗೆ ಗಾಯ

POLICE JEEP

ಕೆಲ ದಿನಗಳ ಹಿಂದೆ ಸರೋಜ ಗಂಡನ ಮನೆಯಿಂದ ಸ್ವಗ್ರಾಮ ರಾಮೇಗೌಡನಪುರಕ್ಕೆ ಆಗಮಿಸಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ. ಮೃತ ದೇಹಗಳನ್ನು ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧಿಸಿ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಉದ್ಧವ್ ರಾಜೀನಾಮೆ ನೀಡದಂತೆ ಶರದ್ ಪವಾರ್ ಅಡ್ಡಿ

Live Tv

Comments

Leave a Reply

Your email address will not be published. Required fields are marked *