ಹೆಂಡ್ತಿ ಜೊತೆಗಿನ ಅಶ್ಲೀಲ ಫೋಟೋವನ್ನ ಲವರ್ ಗೆ ಕಳುಹಿಸ್ದ- ಪತಿ, ಲವ್ವರ್ ಬಂಧನ

ಹೈದರಾಬಾದ್: ಪತಿ ತನ್ನ ಅಕ್ರಮ ಸಂಬಂಧದಿಂದ ದೂರವಾಗಲು ಪತ್ನಿಯ ಜೊತೆಗಿನ ಅಶ್ಲೀಲ ಫೋಟೋವನ್ನು ಲವ್ವರ್ ಗೆ ಕಳುಹಿಸಿದ. ಆ ಫೋಟೋಗೆ ಅಸಭ್ಯವಾಗಿ ಮೆಸೇಜ್ ಮಾಡುತ್ತಿದ್ದ ಪತಿಯ ಪ್ರಿಯತಮೆಯನ್ನು ರಾಚಕೊಂಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಪತಿಯನ್ನು ತುಳಸಿನಾಥ್ ಮತ್ತು ಪ್ರಿಯತಮೆ ಮೋನಿಕಾ ಎಂದು ಗುರುತಿಸಲಾಗಿದೆ. ಈತ ವನಸ್ಥಳಿಪುರಂ ನಿವಾಸಿಯಾಗಿದ್ದು, ಆಸ್ಟ್ರೇಲಿಯಾದ ವಿಶ್ವವಿದ್ಯಾನಿಲಯದಲ್ಲಿ ಬಿಬಿಎ ಪದವಿ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ವರ್ಷ ಬಂಜಾರ ಹಿಲ್ಸ್ ನನ ಭದ್ರತಾ ಸೇವೆಗಳ ಸಭೆಯಲ್ಲಿ ತುಳಸಿನಾಥ್ ಹೈಟೆಕ್ ಸಿಟಿಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮೋನಿಕಾಳನ್ನು ಭೇಟಿ ಮಾಡಿದ್ದನು. ಮೋನಿಕಾ ತನ್ನ ಪತಿ ಈಶ್ವರನಿಂದ ದೂರವಾಗಿ ವಿಚ್ಛೇದನ ಪಡೆದುಕೊಂಡಿದ್ದಳು. ತುಳಸಿನಾಥ್ ಮತ್ತು ಮೋನಿಕಾ ಪರಸ್ಪರ ಪರಿಚಯವಾಗಿ ಇಬ್ಬರು ಅನೈತಿಕ ಸಂಬಂಧವನ್ನು ಹೊಂದಿದ್ದಾರೆ ಎಂದು ರಾಚಕೊಂಡ ಪೋಲಿಸ್ ಕಮಿಷನರ್ ಮಹೇಶ್ ಭಾಗವತ್ ಹೇಳಿದ್ದಾರೆ.

ಆದರೆ ಪತ್ನಿ ಈ ಬಗ್ಗೆ ತಿಳಿದು ವನಸ್ಥಳಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಳಿಕ ಪತಿ ತುಳಸಿನಾಥ್ ಅಕ್ರಮ ಸಂಬಂಧ ಹೊಂದಿದ್ದ ಮೋನಿಕಾಳಿಂದ ದೂರವಾಗಲು ಇಚ್ಚಿಸಿದ್ದು, ತನ್ನ ಪತ್ನಿಯ ಜೊತೆಗಿದ್ದ ಆಶ್ಲೀಲ ಫೋಟೋಗಳನ್ನು ಮೋನಿಕಾಗೆ ಕಳುಹಿಸಿದ್ದಾನೆ.

ಮೋನಿಕಾ ಆ ಫೋಟೋವನ್ನು ತನ್ನ ವಾಟ್ಸಪ್ ನಲ್ಲಿ ಅಪ್ಲೋಡ್ ಮಾಡಿ, ಜೊತೆಗೆ “ಈಕೆ ಹಣಕ್ಕಾಗಿ ಪತಿಯನ್ನು ಜೈಲಿಗೆ ಕಳುಹಿಸುವುದರ ಜೊತೆಗೆ ಏನು ಬೇಕಾದರೂ ಮಾಡುತ್ತಾಳೆ” ಎಂದು ಸ್ಟೇಟಸ್ ಹಾಕಿಕೊಂಡಿದ್ದಾಳೆ.

ಅಷ್ಟೇ ಅಲ್ಲದೇ ತುಳಸಿನಾಥ್ ಮತ್ತು ಆಕೆ ಪತ್ನಿಗೆ ಅಸಭ್ಯವಾಗಿ ಮೆಸೇಜ್ ಕೂಡ ಮಾಡಿದ್ದಾಳೆ. ಬಳಿಕ ತುಳಸಿನಾಥ್ ಪತ್ನಿ ಈ ಬಗ್ಗೆ ಸೈಬರ್ ಕ್ರೈಂ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ರಾಚಕೊಂಡ ಸೈಬರ್ ಕ್ರೈಂ ಅಧಿಕಾರಿಗಳು ಈ ಬಗ್ಗೆ ತನಿಖೆ ಕೈಗೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *