ಶೀಲ ಶಂಕಿಸಿ ಪತ್ನಿ, 6 ವರ್ಷ ಮಗುವಿಗೆ ಚಾಕು ಇರಿದು ಕೊಲೆಗೆ ಯತ್ನ

ಗದಗ: ಪತ್ನಿಯ ಶೀಲಶಂಕಿಸಿ ಪತಿಯೇ ಆಕೆ ಹಾಗೂ 6 ವರ್ಷದ ಮಗುವಿಗೆ ಮನಬಂದಂತೆ ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ಜಿಲ್ಲೆಯ ಮುಂಡರಗಿ (Mundaragi) ತಾಲೂಕಿನ ಡೋಣಿತಾಂಡ ದಲ್ಲಿ ನಡೆದಿದೆ.

ಕಳೆದ 10 ವರ್ಷದ ಹಿಂದೆ ಕಬಲಾಯತಕಟ್ಟಿ ನಿವಾಸಿ ಮುರಳಿ ಪೂಜಾರ ಹಾಗೂ ಡೋಣಿತಾಂಡ ಸಕ್ಕುಬಾಯಿಗೆ ಮದುವೆಯಾಗಿತ್ತು. ದಂಪತಿ ಗೋವಾದಲ್ಲಿ (Goa) ಕೂಲಿಕೆಲಸ ಮಾಡುತ್ತಿದ್ದರು. ಇವರಿಗೆ ಮೂವರು ಮುದ್ದಾದ ಮಕ್ಕಳಿದ್ದಾರೆ. ಆದರೆ ಇತ್ತೀಚಿಗೆ ಪತ್ನಿ ಸಕ್ಕುಬಾಯಿ ಶೀಲ ಶಂಕಿಸಿ ಪತಿ ಮುರಳಿ ಪೂಜಾರ ಕಿರುಕುಳ ನೀಡುತ್ತಿದ್ದ. ಕೆಲಸಕ್ಕೆ ಹೋದರೆ ಹಿಂಬಾಲಿಸುವುದು, ಅನುಮಾನ ಪಡುವುದು, ಸ್ವಲ್ಪ ತಡವಾಗಿ ಬಂದರೆ ಮನಬಂದಂತೆ ಹಲ್ಲೆ ಮಾಡುತ್ತಿದ್ದ. ಅಷ್ಟೇ ಅಲ್ಲದೇ, ಸ್ನಾನ ಮಾಡುವ ನೀರಲ್ಲಿ ಆ್ಯಸಿಡ್ ಬೆರೆಸಿದ್ದನಂತೆ. ಸ್ನಾನ ಮಾಡುವಾಗ ಸಕ್ಕುಬಾಯಿಗೆ ಮೈಯಲ್ಲಾ ಊರಿ, ಊರಿ ಕಾಣಿಸಿಕೊಂಡಿತಂತೆ. ಹೀಗೆ ಗಂಡನ ಅನೇಕ ಚಿತ್ರಹಿಂಸೆಗೆ ಬೇಸತ್ತು, 3 ದಿನದ ಹಿಂದೆ ತವರು ಮನೆ ಡೋಣಿ ತಾಂಡಾಗೆ ಸಕ್ಕುಬಾಯಿ ಬಂದಿದ್ದಳು. ಮುರಳಿ ಕೂಡ ಗುರುವಾರ ರಾತ್ರಿ ಮಾವನ ಮನೆಗೆ ಬಂದಿದ್ದನು. ಕುಟುಂಬಸ್ಥರು, ಸಮಾಜ ಮುಖಂಡರು ಸೇರಿ ಬೆಳಗ್ಗೆ ರಾಜಿಸಂಧಾನ ಮಾಡುವುದಾಗಿ ಹೇಳಿದ್ದರಂತೆ. ಆದರೆ ಅಷ್ಟೋತ್ತಿಗೆ ಬೆಳಗಿನ ಜಾವ ಮನೆಗೆ ನುಗ್ಗಿ ಚಾಕುವಿನಿಂದ ಸಕ್ಕುಬಾಯಿ ಹಾಗೂ 6 ವರ್ಷದ ಗಂಡು ಮಗು ಶಿವಂ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ.

ಹೆಂಡತಿ ಮೇಲೆ ಅನುಮಾನಗೊಂಡು ಇಂತಹ ಕೃತ್ಯಕ್ಕೆ ಮುಂದಾಗಿದ್ದಾನೆ. ಮನೆಯಲ್ಲಿ ಎಲ್ಲಂದರಲ್ಲಿ ರಕ್ತಮಡುಗಟ್ಟಿದೆ. ಬಿಡಿಸಲು ಹೋದ ತಂದೆ ಬಟ್ಟೆಗಳು ರಕ್ತವಾಗಿವೆ. ತಂದೆ, ತಾಯಿ, ಇಬ್ಬರು ಮೊಮ್ಮಕ್ಕಳು ಹಾಗೂ ಓರ್ವ ಮಗ ಇನ್ನೊಂದು ರೂಮ್‍ನಲ್ಲಿ ಹಾಗೂ ಹೊರಗಡೆ ಮಲಗಿದ್ದೇವು. ಗಲಾಟೆ, ಅಳುವ ಶಬ್ಧ ಕೇಳಿ ಹೊರಗಿಂದ ಬಂದು ಬಿಡಿಸಿಕೊಳ್ಳಲು ಮುಂದಾದೆವು. ಸ್ವಲ್ಪ ತಡವಾಗಿದ್ದರೆ ಮಗಳು ಹಾಗೂ ಮೊಮ್ಮಗುವಿನ ಹೆಣ ಉರುಳುತ್ತಿತ್ತು ಸಕ್ಕುಬಾಯಿ ಪೋಷಕರು ತಿಳಿಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆಯನ್ನು ಯಾವುದೇ ಧರ್ಮಕ್ಕೆ ಹೋಲಿಸೋದು ಬೇಡ – ಅಮಿತ್ ಶಾ

ಚಾಕು ಇರಿತದಿಂದ ಸಕ್ಕುಬಾಯಿ ಕಣ್ಣು, ಕೈ, ಎದೆ ಹಾಗೂ ಬೆಣ್ಣು ಭಾಗಕ್ಕೆ ಗಂಭೀರವಾದ ಗಾಯಗಳಾಗಿವೆ. ಈ ವೇಳೆ 6 ವರ್ಷ ಗಂಡು ಮಗು ಶಿವಂ ಗೂ ಸಹ ಕೈ, ಕಾಲಗೆ ಚಾಕುವಿನಿಂದ ಚುಚ್ಚಿದ್ದಾನೆ. ಅಷ್ಟರಲ್ಲಿ ಚಿರಾಟ, ನರಳಾಟ ಕೇಳಿ ಕುಟುಂಬಸ್ಥರು ಹಾಗೂ ಸ್ಥಳಿಗೆ ಆಗಮಿಸಿ ಆರೋಪಿ ಮುರಳಿ ಹಿಡದಿದ್ದಾರೆ. ಎಸ್ಕೇಪ್ ಆಗುತ್ತಿದ್ದ ಕಿರಾತಕನನ್ನು ಹಿಡಿದು ಸ್ಥಳೀಯರೇ ಧರ್ಮದೇಟು ನೀಡಿ ಕಟ್ಟಿಹಾಕಿದ್ದಾರೆ. ನಂತರ ಆರೋಪಿಯನ್ನು ಮುಂಡರಗಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಗಾಯಾಳು ತಾಯಿ ಹಾಗೂ ಮಗು ಗದಗ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಚಾಕು ಇರಿತ ಹಾಗೂ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳಿಗೆ ಕಡಿವಾಣ ಹಾಕಬೇಕು. ಇವನು ಮಾಡಿರುವ ಕೆಟ್ಟ ಕೃತ್ಯಕ್ಕೆ ಇಲ್ಲೆ ಸುಟ್ಟು ಹಾಕಬೇಕು ಎಂದುಕೊಂಡಿದ್ದೆವು. ಕಾನೂನಿಗೆ ಗೌರವಿಸಿ  ಪೊಲೀಸರಿಗೆ ಒಪ್ಪಿಸಿದ್ದೇವೆ. ಆರೋಪಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ನಾಯಕರೇ ಅಲ್ಲ – ರಾಜ್ಯಕ್ಕೆ ಒಬ್ಬರೇ ಮಾಸ್ ಲೀಡರ್ ಅದು BSY: ವರ್ತೂರು ಪ್ರಕಾಶ್ ವಾಗ್ದಾಳಿ

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *