ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿ ಮೇಲೆ ಪತಿಯಿಂದ ಲೈಂಗಿಕ ದೌರ್ಜನ್ಯ!

ಬೆಂಗಳೂರು: ಅನೈತಿಕ ಸಂಬಂಧವನ್ನು ಪ್ರಶ್ನೆ ಮಾಡಿದ್ದಕ್ಕೆ ಪತಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೇವ್‍ಕುಮಾರ್ ವಿರುದ್ಧ 28 ವರ್ಷದ ಪತ್ನಿ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ್ದಾರೆ. ಮದುವೆಯಾದ ನಂತರವೂ ಬೇರೊಬ್ಬಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದು, ಈಗ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಏನಿದೆ?
2009 ರಲ್ಲಿ ದೇವ್‍ಕುಮಾರ್ ಜೊತೆ ನನ್ನ ಮದುವೆಯಾಗಿದ್ದು, ಮದುವೆ ಸಂದರ್ಭದಲ್ಲಿ ನನ್ನ ಮನೆಯವರು ಪತಿಗೆ 2,20,000 ರೂ. ನಗದು, 15 ಗ್ರಾಂ ಚಿನ್ನ, 12 ಗ್ರಾಂನ ಬ್ರೇಸ್‍ಲೈಟ್, 8 ಗ್ರಾಂ ಉಂಗುರ, 4 ಗ್ರಾಂ ಡಾಲರ್ ಕೊಟ್ಟಿದ್ದರು. ನನ್ನ ಗಂಡ ಗೊರಗುಂಟೆಪಾಳ್ಯದಲ್ಲಿ ಮೆಕಾನಿಕ್ ಕೆಲಸ ಮಾಡಿಕೊಂಡಿದ್ದರು. ಮದುವೆಯಾದಾಗಿನಿಂದ ನಾನು ಮತ್ತು ನನ್ನ ಪತಿ ನನ್ನ ತವರು ಮನೆಯಲ್ಲೇ ವಾಸಿಸುತ್ತೀದ್ದೇವೆ. ನನ್ನ ಗಂಡ ನಮ್ಮ ಮನೆಯ ಯಾವುದೇ ಖರ್ಚು ವೆಚ್ಚವನ್ನೂ ಕೊಡುತ್ತಿರಲಿಲ್ಲ. ಮನೆಯ ಬಾಡಿಗೆ ಸಹ ಕಟ್ಟುತ್ತಿರಲಿಲ್ಲ. ಎಲ್ಲವನ್ನು ನನ್ನ ತಾಯಿ ನೋಡಿಕೊಳ್ಳುತ್ತಿದ್ದರು. ಅತ ದುಡಿಯುತ್ತಿದ್ದ ಹಣವನ್ನು ಮನೆಗೆ ಕೊಡದೇ ಎಲ್ಲವನ್ನೂ ಬೇರೆ ಹೆಂಗಸರಿಗೆ ಖರ್ಚು ಮಾಡುತ್ತಿದ್ದ.

ಹೀಗಿರುವಾಗ ನನ್ನ ವಿವಾಹವಾದ 4 ವರ್ಷಗಳ ನಂತರ ನನ್ನ ಪತಿ ಬೇರೆ ಹೆಂಗಸಿನ ಜೊತೆ ಅನೈತಿಕ ಸಂಬಂಧವನ್ನು ಹೊಂದಿದ್ದನು. ಇದಾದ ನಂತರ ನನಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ. ಫೆಬ್ರವರಿ 13ರಂದು ನಾನು ಮತ್ತು ನನ್ನ ತಾಯಿ ಅಜ್ಜಿಯ ಮನೆಗೆ ಹೋದ ಸಂದರ್ಭದಲ್ಲಿ ನನ್ನ ಗಂಡ ಮಹಿಳೆಗೆ ಅಸಭ್ಯ ಸಂದೇಶಗಳನ್ನು ಕಳುಹಿಸಿ, ಆಕೆಯ ಜೊತೆ ಅಸಭ್ಯವಾಗಿ ಮಾತನಾಡುತ್ತಿದ್ದ.

ಈ ವಿಷಯ ನನಗೆ ತಿಳಿದು ಆತನಲ್ಲಿ ಪ್ರಶ್ನಿಸಿದ್ದಾಗ ನಾನು ಇರುವುದೇ ಹೀಗೆ, ನನ್ನ ಜೀವನದ ಶೈಲಿಯೇ ಹೀಗೆ. ನೀನು ನಿನ್ನ ತಾಯಿಗೆ ಹೇಳಿ ನನಗೆ 1 ಲಕ್ಷ ರೂ. ಹಾಗೂ ಚಿನ್ನಾಭರಣವನ್ನು ಕೊಡಿಸು ಇಲ್ಲವಾದ್ದಲ್ಲಿ ಆ ಮಹಿಳೆಯನ್ನು ನಾನು ಮದುವೆಯಾಗುತ್ತೇನೆ. ನಿನ್ನ ಹಾಗೂ ನಿನ್ನ ತಾಯಿಯನ್ನು ನಾನು ಮುಗಿಸಿಬೀಡುತ್ತೇನೆಂದು ಬೆದರಿಕೆ ಹಾಕಿದ್ದಾನೆ. ನನಗೆ ಅವಾಚ್ಯ ಶಬ್ಧಗಳಿಂದ ಬೈದು, ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ, ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Comments

Leave a Reply

Your email address will not be published. Required fields are marked *