ತನ್ನ ಪುಟ್ಟ ಮಗುವಿನೊಂದಿಗೆ ಪತ್ನಿಗಾಗಿ ಅಲೆದಾಡುತ್ತಿರುವ ಪತಿ

ಹಾಸನ: ಕಾಣೆಯಾದ ಪತ್ನಿಗಾಗಿ ತನ್ನ ಪುಟ್ಟ ಮಗುವಿನೊಂದಿಗೆ ಪತಿ ಅಲೆದಾಡುತ್ತಿರುವ ಘಟನೆ ಹಾಸನದಲ್ಲಿ ನಡೆದಿದೆ.

ಕೋಲಾರ ಜಿಲ್ಲೆ, ಅವಲಹಳ್ಳಿ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಆಗಿದ್ದ ಪತ್ನಿ ರುದ್ರಾಂಬಿಕೆ ಒಂದೂವರೆ ವರ್ಷದಿಂದ ಪತಿ ಮಂಜುನಾಥ್ ಮತ್ತು ಪುಟ್ಟ ಮಗುವನ್ನು ಬಿಟ್ಟು ಹೋಗಿದ್ದಾಳೆ. ಈ ಹಿನ್ನೆಲೆ ಮಂಜುನಾಥ್‍ಗೆ ರುದ್ರಾಂಬಿಕೆ ಹಾಸನದಲ್ಲಿ ಬೇರೆಯವರ ಜೊತೆ ಸಂಸಾರ ಮಾಡುತ್ತಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಉಡುಪಿ ಪ್ರವಾಸ ಕೈಗೊಂಡಿರುವ ನಿರ್ಮಲಾ ಸೀತಾರಾಮನ್

ಮಾಹಿತಿ ತಿಳಿದ ತಕ್ಷಣ ಮಂಜುನಾಥ್ ತನ್ನ ಕುಟುಂಬದ ಸದಸ್ಯರೊಂದಿಗೆ ಮನೆ ಬಳಿ ಹೋಗಿದ್ದಾನೆ. ಹಾಸನದಲ್ಲಿರುವ ಮನೆ ಒಳಗೆ ಯಾವುದು  ಕುಟುಂಬ ಇರುವುದನ್ನು ಗಮನಿಸಿ ಹೊರಗಿನಿಂದ ಬಾಗಿಲು ಬಂದ್ ಮಾಡಿ ಪೊಲೀಸರನ್ನು ಕರೆಸಿದ್ದಾನೆ. ಪೊಲೀಸರು ಮನೆಯ ಒಳಗೆ ಹೋಗಿ ಪರಿಶೀಲನೆ ಮಾಡಿದ್ದಾರೆ.

ಈ ವೇಳೆ ಮನೆಯಲ್ಲಿ ಬೇರೆಯವರು ವಾಸಿಸುತ್ತಿರುವುದು ಪತ್ತೆಯಾಗಿದೆ. ಇದರಿಂದ ಅಸಹಾಯಕತೆ ಹೊರಹಾಕಿದ ಮಂಜುನಾಥ್, 15 ಲಕ್ಷ ರೂ. ಸಾಲ ಮಾಡಿ ನನ್ನ ಪತ್ನಿ ರುದ್ರಾಂಬಿಕೆ ಪರಾರಿಯಾಗಿದ್ದಾಳೆ. ಯಾರ ಕೈಗೂ ಸಿಗದೆ ಪತ್ನಿ ಮತ್ತೆ ಇನ್ನೊಬ್ಬರ ಜೊತೆ ಸಂಸಾರ ನಡೆಸುತ್ತಿದ್ದಾಳೆ ಎಂದು ಆರೋಪಿಸಿದ್ದಾನೆ.

POLICE JEEP

ಏನಿದು ಘಟನೆ?
ಬೆಂಗಳೂರು ಮೂಲದ ರುದ್ರಾಂಬಿಕೆ ಹಾಗೂ ಕೋಲಾರ ಮೂಲದ ಮಂಜುನಾಥ್ ಎಂಟು ವರ್ಷದ ಹಿಂದೆ ಮದುವೆಯಾಗಿದ್ದರು. ರುದ್ರಾಂಬಿಕ, ಮಂಜುನಾಥ್ ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಮಂಜುನಾಥ್ ವಿರುದ್ಧ ರುದ್ರಾಂಬಿಕ ದೌರ್ಜನ್ಯ ಆರೋಪದಲ್ಲಿ ಹಲವು ಕೇಸ್ ದಾಖಲಿಸಿ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಈಗ ಮಂಜುನಾಥ್ ಹಾಸನದ ಉದಯಗಿರಿ ಬಡಾವಣೆಯಲ್ಲಿ ಪತ್ನಿಯನ್ನು ಹುಡುಕಿಕೊಂಡು ಹೈಡ್ರಾಮಾ ಮಾಡುತ್ತಿದ್ದಾನೆ.

ಪ್ರಸ್ತುತ ಪೊಲೀಸರು ಮಂಜುನಾಥ್‍ನನ್ನು ವಶಕ್ಕೆ ಪಡೆದು ಬಡಾವಣೆ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ತಾನು ಬಾಗಿಲು ಬಂದ್ ಮಾಡಿದ್ದ ಮನೆಯಲ್ಲೇ ಪತ್ನಿ ಇದ್ದಳು ಎಂದು ಮಂಜುನಾಥ್ ಆರೋಪ ಮಾಡುತ್ತಿದ್ದಾನೆ. ಇದನ್ನೂ ಓದಿ:  ಟ್ವಿಟ್ಟರ್‌ನಲ್ಲಿ ಯಾರು ದೀಪ ಬೆಳಗಿಸಲು ಕೆಲಸ ಮಾಡುತ್ತಿಲ್ಲ: ಟ್ವಿಟ್ಟರ್ ಸಿಇಒ 

ಈ ಕುರಿತು ಸೂಕ್ತ ಠಾಣೆಗೆ ದೂರು ನೀಡಲು ಪೊಲೀಸರು ಸಲಹೆ ಕೊಟ್ಟಿದ್ದಾರೆ. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *