ಸೆಕ್ಸ್ ಗೆ ಪೀಡಿಸಿದ ಪತ್ನಿಯನ್ನ ಥಳಿಸಿದ ಪತಿರಾಯ -ಸೆಕ್ಸ್ ಅಂದ್ರೆ ಮನೆಯಿಂದ ಎಸ್ಕೇಪ್

-ಪತಿಗೆ ಸಾಥ್ ನೀಡಿದ ಕುಟುಂಬಸ್ಥರು
-ಪತಿಯ ವಿರುದ್ಧ ದೂರು ನೀಡಿದ ಪತ್ನಿ
-ಒಂದು ಮಗು ಬಳಿಕ ಬ್ರಹ್ಮಚರ್ಯ ಎಂದ ಗಂಡ

ಅಹಮದಾಬಾದ್: ಲೈಂಗಿಕ ಕ್ರಿಯೆಗೆ ಕರೆದಿದ್ದಕ್ಕೆ ಥಳಿಸಿದ ಪತಿಯ ವಿರುದ್ಧ ನೊಂದ ಮಹಿಳೆ ದೂರು ದಾಖಲಿಸಿದ್ದಾರೆ. ಇನ್ನು ಪತಿಗೆ ಆತನ ಕುಟುಂಬಸ್ಥರು ಸಹ ಸಾಥ್ ನೀಡಿದ್ದು, ಮಹಿಳೆಗೆ ಕಿರುಕುಳ ನೀಡಿದ್ದಾರೆ. ಮಹಿಳೆಯ ದೂರಿನನ್ವಯ ಸೋಮವಾರ ಪತಿ ಸೇರಿದಂತೆ ನಾಲ್ವರು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡ್ಯಾನಿಲಿಮ್ಡಾದ ನಿವಾಸಿಯಾಗಿದ್ದ ಮಹಿಳೆಯ ಮದುವೆ ಸರ್ಕೆಜ್ ನಗರದ ಯುವಕನೊಂದಿಗೆ 2016ರಲ್ಲಿ ನಡೆದಿತ್ತು. 2018ರಲ್ಲಿ ದಂಪತಿಗೆ ಒಂದು ಗಂಡು ಮಗು ಆಗಿದೆ. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಪತಿಯ ನಡವಳಿಕೆ ಬದಲಾಗಿತ್ತು. ಕೆಲ ತಿಂಗಳಿನಿಂದ ಸೆಕ್ಸ್ ಅಂದ್ರೆ ಮನೆಯಿಂದ ಹೊರ ಹೋಗಲಾರಂಭಿಸಿದ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ಕೆಲ ತಿಂಗಳಿನಿಂದ ಪತಿ ನನ್ನೊಂದಿಗೆ ಲೈಂಗಿಕ ಸಂಪರ್ಕ ಹೊಂದುತ್ತಿಲ್ಲ. ನಾನು ಲೈಂಗಿಕ ಕ್ರಿಯೆಗೆ ಕರೆದ್ರೆ ಮನೆಯಿಂದ ಹೊರ ಹೋಗುತ್ತಾನೆ. ಪತಿ ಮನೆಯಿಂದ ಹೊರ ಹೋಗುತ್ತಿದ್ದಂತೆ ಕುಟುಂಬಸ್ಥರು ಕಿರುಕುಳ ನೀಡಲಾರಂಭಿಸುತ್ತಾರೆ. ಪತಿ ನಾನು ಬ್ರಹ್ಮಚರ್ಯ ಪಾಲಿಸುತ್ತೇನೆ ಎಂದು ಉತ್ತರ ಕೊಡುತ್ತಾರೆ. ಪತಿ ಹಲವರು ಬಳಿ ಸಾಲ ಪಡೆದುಕೊಂಡಿದ್ದು ಆರ್ಥಿಕವಾಗಿ ತೊಂದರೆಯಲ್ಲಿದ್ದಾರೆ. ಮಗುವಿನ ಬಗ್ಗೆಯೂ ಕಾಳಜಿ ತೆಗೆದುಕೊಳ್ಳಲ್ಲ ಎಂದು ಮಹಿಳೆ ಹೇಳುತ್ತಾರೆ.

ನನ್ನ ಮತ್ತು ಮಗನ ಚಿಕಿತ್ಸೆಗಾಗಿ ಯಾವುದೇ ಹಣ ಸಹ ನೀಡಲ್ಲ. ಇತ್ತ ಆತನ ಕುಟುಂಬಸ್ಥರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಎಫ್‍ಐಆರ್ ನಲ್ಲಿ ದಾಖಲಾಗಿದೆ. ಈ ಸಂಬಂಧ ಪೊಲೀಸರು ಇದುವರೆಗೂ ಯಾರನ್ನು ಬಂಧಿಸಿಲ್ಲ ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *