ಪತಿ ಬ್ರಾಹ್ಮಣನಲ್ಲ: ಪತ್ನಿಯಿಂದ ದೂರು, ಎಫ್‍ಐಆರ್ ದಾಖಲು

ಗಾಂಧಿನಗರ: ಬ್ರಾಹ್ಮಣನೆಂದು ನಂಬಿಸಿ ಮದುವೆಯಾದ ಗಂಡನ ವಿರುದ್ಧ ಗುಜರಾತಿನ ಮೆಹ್ಸಾನದಲ್ಲಿ ಪತ್ನಿ ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ.

23 ವರ್ಷದ ಏಕ್ತಾ ಪಟೇಲ್ ತನ್ನ ಪತಿ ಯಶ್ ಖಾಮರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ಪತಿ ಯಶ್, ಏಕ್ತಾರನ್ನ ನಾನು ಬ್ರಾಹ್ಮಣನೆಂದು ನಂಬಿಸಿ ಮದುವೆಯಾಗಿದ್ದು, ಮದುವೆಯ ನಂತರ ರಿಜಿಸ್ಟರ್ ಆಫಿಸ್‍ನಲ್ಲಿ ಆತನ ಜಾತಿ ಬೇರೆ ಎಂಬುದು ಗೊತ್ತಾಗಿದೆ ಎಂದು ಅವರು ದೂರಿದ್ದಾರೆ.

ಕಳೆದ ಏಪ್ರಿಲ್‍ನಲ್ಲಿ ಎಂಕಾಂ ಮುಗಿಸಿದ್ದ ಏಕ್ತಾ ಅವರಿಗೆ ಕೆಲಸದ ಅಗತ್ಯವಿತ್ತು. ಆಗ ಒಂದು ಗ್ಯಾಸ್ ಏಜೆನ್ಸಿಯ ಮೂಲಕ ಅಕೌಂಟೆಂಟ್ ಕೆಲಸವನ್ನ ಗಿಟ್ಟಿಸಿಕೊಂಡಿದ್ದರು. ಆ ಏಜೆನ್ಸಿಯ ಮಾಲೀಕರಾದ ಜ್ಯೋತ್ಸ್ನಾ ಮೆಹ್ತಾರ ಪುತ್ರನ ಪರಿಚಯವಾಯಿತು. ಪರಿಚಯ ಪ್ರೇಮಕ್ಕೆ ತಿರುಗಿ, ಇಬ್ಬರು ಬ್ರಾಹ್ಮಣ ಜಾತಿಗೆ ಸೇರಿದ್ದರಿಂದ ಮದುವೆಯಾಗಲು ಒಪ್ಪಿಕೊಂಡಿದ್ದಾರೆ ಎಂದು ಏಕ್ತಾ ಹೇಳಿದ್ದಾರೆ.

ಏಪ್ರಿಲ್ 23ರಂದು ಏಕ್ತಾ ಪಟೇಲ್ ಮತ್ತು ಯಶ್ ಮೆಹ್ತಾ ಹಿಂದು ಸಂಪ್ರದಾಯದಂತೆ ಖಾನ್‍ಪುರ್ ನಲ್ಲಿ ಮದುವೆಯಾಗಿದ್ದರು. ತಮ್ಮ ಮದುವೆಯನ್ನ ರಿಜಿಸ್ಟರ್ ಆಫಿಸ್‍ನಲ್ಲಿ ನೊಂದಣಿ ಮಾಡಲು ಹೋದಾಗ ಸತ್ಯ ಬೆಳಕಿಗೆ ಬಂದಿದೆ.

ಮನೆಯಲ್ಲಿ ಸಂಸಾರ ನಡೆಸೋದಕ್ಕೆ ಶುರು ಮಾಡಿದ ನಂತರ ನನಗೆ ಯಶ್ ಸರ್‍ನೇಮ್ ಮೆಹ್ತಾ ಅಲ್ಲ ಖಾಮರ್ ಎಂದು ಗೊತ್ತಾಗಿದೆ. ಈ ವಿಚಾರವಾಗಿ ನಾನು ಹಲವು ಕಡೆ ವಿಚಾರಿಸಿದಾಗ ಖಾಮರ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದಲ್ಲ ಎಂದು ತಿಳಿದು ಬಂದಿದೆ. ಯಶ್ ನನ್ನನ್ನು ಬ್ರಾಹ್ಮಣನೆಂದು ನಂಬಿಸಿ ಮೋಸ ಮಾಡಿದ್ದಾನೆ ಎಂದು ಏಕ್ತಾ ಹೇಳಿದ್ದಾರೆ.

ವಿಷಯ ತಿಳಿದ ಏಕ್ತಾ ಪೋಷಕರು ಆಕೆಯ ಜೊತೆಗೂಡಿ ಜಾತಿ ಹೆಸರಿನಲ್ಲಿ ಮೋಸ ಮಾಡಿದ ಯಶ್ ವಿರುದ್ಧ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *