ತನ್ನ ಪ್ರಿಯಕರನ ಜೊತೆ ಮಗಳ ಮದ್ವೆ – ತಾಯಿಯ ರಹಸ್ಯ ತಿಳಿದು ಆತ್ಮಹತ್ಯೆ

– ಅನೈತಿಕ ಸಂಬಂಧ ಮುಂದುವರಿಸಲು ಪುತ್ರಿಯ ಜೊತೆ ವಿವಾಹ
– ಮದ್ವೆಯಾದ ಮೂರೇ ತಿಂಗಳಿಗೆ ಆತ್ಮಹತ್ಯೆ

ಹೈದರಾಬಾದ್: ಅಳಿಯನ ಜೊತೆಯೇ ತಾಯಿಯೊಬ್ಬಳು ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಇದನ್ನು ಸಹಿಸಲಾಗದೆ ಮದುವೆಯಾದ ಮೂರು ತಿಂಗಳಿನಲ್ಲೇ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಮೀರ್ ಪೇಟೆಯಲ್ಲಿ ನಡೆದಿದೆ.

ವಂದನಾ (19) ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಆರೋಪಿ ತಾಯಿ ಅನಿತಾಳ ಕಿರಿಯ ಮಗಳು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಏನಿದು ಪ್ರಕರಣ?
ಆರೋಪಿ ಅನಿತಾ ತನ್ನ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈಕೆಗೆ ವಂದನಾ (19) ಮತ್ತು ಸಂಜನಾ ಇಬ್ಬರು ಹೆಣ್ಣು ಮಕ್ಕಳಿದ್ದರು. ಅನಿತಾಗೆ ಒಂದು ವರ್ಷದ ಹಿಂದೆ ಪ್ರೇಮ್ ನವೀನ್ ಕುಮಾರ್ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಆಗಾಗ ನವೀನ್ ಕುಮಾರ್, ಅನಿತಾ ಮನೆಗೆ ಭೇಟಿ ನೀಡುತ್ತಿದ್ದನು.

ತನ್ನ ಅನೈತಿಕ ಸಂಬಂಧ ಮುಂದುವರಿಸಲು ಅನಿತಾ ತನ್ನ ಹಿರಿಯ ಮಗಳು ವಂದನಾ ಜೊತೆ ಅನಿಲ್ ಕುಮಾರ್ ಮದುವೆ ಮಾಡಿಸಲು ಪ್ಲಾನ್ ಮಾಡಿದ್ದಳು. ವಂದನಾ ಹೈದರಾಬಾದ್‍ನಲ್ಲಿರುವ ಕಾಲೇಜಿನಲ್ಲಿ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಳು. ಕೊನೆಗೆ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ವಂದನಾಗೆ ತಾನು ಅನೈತಿಕ ಸಂಬಂಧ ಹೊಂದಿದ್ದವನ ಜೊತೆ ಮದುವೆ ಮಾಡಿಸಿದ್ದಾಳೆ. ತಾಯಿ ಮಗಳ ವಿವಾಹದ ನಂತರವೂ ನವೀನ್ ಕುಮಾರ್ ಜೊತೆ ಅನೈತಿಕ ಸಂಬಂಧವನ್ನು ಮುಂದುವರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪತಿಯೊಂದಿಗೆ ತನ್ನ ತಾಯಿ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಬಗ್ಗೆ ವಂದನಾಗೆ ಗೊತ್ತಾಗಿದೆ. ಬಳಿಕ ಮಗಳು ತನ್ನ ತಾಯಿಗೆ ಪತಿಯಿಂದ ದೂರವಿರುವಂತೆ ಎಚ್ಚರಿಕೆ ಕೊಟ್ಟಿದ್ದಾಳೆ. ಇತ್ತ ಪತಿಯನ್ನು ತಾಯಿಯಿಂದ ದೂರ ಕರೆದುಕೊಂಡು ಹೋಗಲು ನಿರ್ಧರಿಸಿದ್ದಳು. ಆದರೆ ತಾಯಿ ಅನಿತಾ ಆತನನ್ನು ನನ್ನಿಂದ ದೂರ ಮಾಡಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಂದನಾಗೆ ಬೆದರಿಕೆ ಹಾಕಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದೇ ವಿಚಾರವಾಗಿ ವಂದನಾ ಮತ್ತು ಪತಿ ನವೀನ್ ಕುಮಾರ್ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಕೊನೆಗೆ ತಾಯಿ ಮತ್ತು ಪತಿ ವರ್ತನೆಯಿಂದ ಬೇಸರಗೊಂಡಿದ್ದ ವಂದನಾ ಬೆಡ್‍ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಮೃತ ವಂದನಾ ಸಹೋದರಿ ಸಂಜನಾ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಳು.

ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದು, ಸಹೋದರಿ ನೀಡಿದ ದೂರಿನ ಆಧಾರದ ಮೇರೆಗೆ ಆರೋಪಿ ಅನಿತಾ ವಿರುದ್ಧ ಐಪಿಸಿ ಸೆಕ್ಷನ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯಕ್ಕೆ ವಂದನಾ ತಾಯಿ ಮತ್ತು ಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *