ಧಾರವಾಡ: 2ನೇ ಪತ್ನಿ ಮೇಲೆ ಹಲ್ಲೆ ಮಾಡಿದ್ದಕ್ಕೆ ಆತ್ಮಹತ್ಯೆ ಮಾಡು ಎಂದು ಪತಿ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಧಾರವಾಡ ನಗರದ ಗಣೇಶನಗರದ ಅಲ್ಲಾವುದ್ದಿನ್ ಬಳೆಗಾರ ತನ್ನ ಮೊದಲನೇ ಪತ್ನಿ ಜಾಹಿದಾ ಮೇಲೆ ಹಲ್ಲೆ ಎಸಗಿದ ಆರೋಪ ಕೇಳಿ ಬಂದಿದೆ. ಜಾಹಿದಾ ಈ ಆರೋಪ ಮಾಡಿದ್ದು, ಸದ್ಯ ಆಕೆ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪತಿ ಅಲ್ಲಾವುದ್ದಿನ್ ಎರಡನೇ ಪತ್ನಿಯನ್ನು ನಾನು ಬಿಡಬೇಕಾದರೆ 12 ಲಕ್ಷ ರೂ. ತರಲು ಒತ್ತಾಯ ಮಾಡುತ್ತಿದ್ದಾನೆ. ಅಷ್ಟೇ ಅಲ್ಲದೇ ನಾನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಅಲ್ಲಾವುದ್ದಿನ್ ಎರಡು ದಿನಗಳಿಂದ ಒತ್ತಾಯ ಮಾಡುತ್ತಿದ್ದಾನೆ ಎಂದು ಜಾಹಿದಾ ಆರೋಪಿಸಿದ್ದಾರೆ.

ಕಳೆದ 7 ವರ್ಷಗಳ ಹಿಂದೆ ಧಾರವಾಡ ನಗರದ ಮನಕಿಲ್ಲಾ ಬಡಾವಣೆಯ ಜಾಹಿದಾಳನ್ನು ಮದುವೆಯಾಗಿದ್ದ ಅಲ್ಲಾವುದಿನ್‍ಗೆ ಇಬ್ಬರು ಮಕ್ಕಳಿದ್ದಾರೆ. ಇವರಿಬ್ಬರ ನಡುವೆ ಸಂಸಾರ ಚೆನ್ನಾಗಿ ನಡೆಯದ ಕಾರಣ ಇವರಿಬ್ಬರು ಬೇರೆಯಾಗಿದ್ದರು.
ಕಂಪ್ಯೂಟರ್ ಸೆಂಟರ್ ನಡೆಸುತ್ತಿದ್ದ ಅಲ್ಲಾವುದ್ದಿನ್ ಕಳೆದ ವಾರ ಮತ್ತೊಂದು ಮದುವೆಯಾಗಿದ್ದ. ಈ ಹಿನ್ನೆಲೆಯಲ್ಲಿ ಮೊದಲ ಪತ್ನಿ ಜಾಹಿದಾ ಪ್ರಶ್ನಿಸಿಲು ಹೋದಾಗ ಜಗಳ ಆರಂಭವಾಗಿ ಪತಿ, ಎರಡನೇ ಪತ್ನಿ ಜೊತೆ ಹೊಡೆದಾಟ ನಡೆದಿತ್ತು.
ಈ ಘಟನೆ ನಂತರ ಹಿರಿಯರು ಮಧ್ಯಪ್ರವೇಶಿಸಿ ಪೊಲೀಸರ ಸಮ್ಮುಖದಲ್ಲಿ ಸಮಸ್ಯೆಯನ್ನು ಇತ್ಯರ್ಥಗೊಳಿಸಿದ್ದರು. ಆದರೆ ಈಗ ಮತ್ತೆ ಇವರ ನಡುವೆ ಜಗಳ ಆರಂಭವಾಗಿದ್ದು, ಈ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply