ಪತ್ನಿಯ ಕಾಲು ಕತ್ತರಿಸಿದ್ದೇನೆ, ನಾಲ್ವರು ಹುಡುಗರನ್ನು ಕಳಿಸಿ- ಹೊಟೇಲ್ ಮಾಲೀಕರಿಗೆ ಪತಿ ಕರೆ

ತುಮಕೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯ ಕಾಲನ್ನು ಪತಿ ಕತ್ತರಿಸಿದ ಘಟನೆ ತುಮಕೂರಿನ ಅಶೋಕ ಹೋಟೆಲ್‍ನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಗದಗ ಮೂಲದ ಬಾಬು (34) ಆರೋಪಿಯಾಗಿದ್ದು, ಅನಿತಾ ಗಾಯಗೊಂಡ ಮಹಿಳೆಯಾಗಿದ್ದಾಳೆ. ನಾಲ್ಕು ವರ್ಷದ ಹಿಂದೆ ಬಾಬು ಮಧುಗಿರಿ ಮೂಲದ ಅನಿತಾಳನ್ನು ಮದುವೆಯಾಗಿದ್ದ. ಆದರೆ ದಂಪತಿ ನಡುವೆ ಪದೇ ಪದೇ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆಯುತ್ತಿತ್ತು.

ಇಂದು ಬೆಳಗ್ಗೆ 6 ಗಂಟೆ ವೇಳೆ ದಂಪತಿ ಅಶೋಕ ಲಾಡ್ಜ್‌ಗೆ ಬಂದಿದ್ದರು. ಈ ವೇಳೆ ಅನಿತಾಳ ಕಾಲು ಕತ್ತರಿಸಿ, ತಾನೇ ಹೊಟ್ಟೆಗೆ ಚೂರಿ ಹಾಕಿಕೊಂಡಿದ್ದಾನೆ. ನಂತರ ಹೋಟೆಲ್ ಮಾಲೀಕರಿಗೆ ಕರೆ ಮಾಡಿ, ನಾಲ್ವರು ಹುಡುಗರನ್ನು ಕಳುಹಿಸಿ, ಹೆಂಡತಿಯ ಕಾಲು ಕತ್ತರಿಸಿದ್ದೇನೆ ಆಸ್ಪತ್ರೆಗೆ ಸೇರಿಸಬೇಕು ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಯಡಿಯೂರಪ್ಪ, ಸಿಎಂ ಏನೇ ಮಾತಾಡಲಿ, ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ: ಡಿಕೆಶಿ

ಸ್ಥಳಕ್ಕೆ ಆಗಮಿಸಿದ ಪೊಲೀಸರಿಂದ ಗಾಯಗೊಂಡ ಅನಿತಾ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಾಬುವನ್ನು ತುಮಕೂರು ನಗರ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಿಜಬ್ ವಿವಾದ, ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂಕೋರ್ಟ್ – ಹೋಳಿ ರಜೆ ಬಳಿಕ ವಿಚಾರಣೆ

Comments

Leave a Reply

Your email address will not be published. Required fields are marked *